ತಾವರೆ ಗಿಡ ಹುಟ್ಟಿ | ಕನ್ನಡ ಜಾನಪದ ಗೀತೆಗಳು #5 [Thavare Gida Hutti Kannada Janapada Song Lyrics]
ತಾವರೆ ಗಿಡ ಹುಟ್ಟಿ ದೇವರಿಗೆ
ನೆರಳಾಗಿ
ನಾ ಹುಟ್ಟಿ ಮನೆಗೆ ಎರವಾದೆ
| ಹಡೆದವ್ವ
ನೀ ಕೊಟ್ಟ ಮನೆ ಹೆಸರಾದೆ
||
ಬ್ಯಾಸಗಿ
ದಿವಸಕ ಬೇವಿನ ಮರ ತಂಪ
ಭೀಮಾರತಿಯಂದು
ಹೊಳಿತಂಪ | ಹಡೆದವ್ವ
ನೀ ತಂಪ ನನ್ನ ತವರಿಗೆ
||
ಹೆಣ್ಣು
ಹಡೆಯಲಿ ಬ್ಯಾಡ ಹೆರವರಿಗೆ ಕೊಡಬ್ಯಾಡ
ಹೆಣ್ಣು
ಹೋಗಾಗ ಅಳಬ್ಯಾಡ | ಹಡೆದವ್ವ
ಸಿಟ್ಟಾಗಿ
ಶಿವಗ ಬೈಬೇಡ ||
ಗಂಜಿಯ ಕುಡಿದರು ಗಂಡನ ಮನೆ
ಲೇಸು
ಅಂದಣದ ಮ್ಯಾಲ ಚವುರಾವ | ಸಾರಿದರ
ಹಂಗಿನ ತವರ ಮನಿ ಸಾಕ
||
ತಾಯಿ ಮಕ್ಕಳ ದನಿಯು ತಾಳ
ಬಾರಿಸಿದಂಗ
ಜೋಡ ಕಿನ್ನೂರಿ ನುಡಿದಂಗ | ಹಳಸಂಗಿ
ಹೊತ್ತೇರಿತಾಸೆ
ಬಡಿದಂಗ ||
ತಾಯಿಲ್ದ
ತವರಿಗೆ ಹೋಗದಿರು ನನ್ನ ಮನವ
ನೀರಿಲ್ದ
ಕೆರೆಗೆ ಕರಬಂದು | ತಿರುಗಾಡ
ಆಗ ನೋಡದರಾ ದುಃಖಗಳ ||
ತಾವರೆ ಗಿಡ ಹುಟ್ಟಿ ದೇವರಿಗೆ ನೆರಳಾಗಿ
ನಾ ಹುಟ್ಟಿ ಮನೆಗೆ ಎರವಾದೆ | ಹಡೆದವ್ವ
ನೀ ಕೊಟ್ಟ ಮನೆ ಹೆಸರಾದೆ ||
0 Comments
Comment is awaiting for approval