Ticker

6/recent/ticker-posts

ಚನ್ನಪ್ಪ ಚನ್ನಗೌಡ ಕುಂಬಾರ ಮಾಡಿದ ಕೊಡನವ್ವ | ಕನ್ನಡ ಜಾನಪದ ಗೀತೆಗಳು

ಚನ್ನಪ್ಪ ಚನ್ನಗೌಡ ಕುಂಬಾರ ಮಾಡಿದ ಕೊಡನವ್ವ | ಕನ್ನಡ ಜಾನಪದ ಗೀತೆಗಳು [Channappa Channegowda Kumbara Maadida Lyrics in Kannada]

ಹಾಡು:  ಚನ್ನಪ್ಪ ಚನ್ನಗೌಡ ಕುಂಬಾರ ಮಾಡಿದ ಕೊಡನವ್ವ

ಪ್ರಕಾರ: ಜಾನಪದ / ಜನಪದ
ಭಾಷೆ: ಕನ್ನಡ
ಸಂಗೀತ: ಜನಪದ
ಸಾಹಿತ್ಯ: ಜನಪದ
ಗಾಯನ: ವಿವಿಧ ಗಾಯಕರು 

ಚನ್ನಪ್ಪ ಚನ್ನಗೌಡ ಕುಂಬಾರ ಮಾಡಿದ ಕೊಡನವ್ವ | ಕನ್ನಡ ಜಾನಪದ ಗೀತೆಗಳು | Channappa Channegowda Kumbara Maadida Lyrics in Kannada


ಚನ್ನಪ್ಪ ಚನ್ನಗೌಡ
ಕುಂಬಾರ ಮಾಡಿದ ಕೊಡನವ್ವ
ಚನ್ನಪ್ಪ ಚನ್ನಗೌಡ
ಕುಂಬಾರ ಮಾಡಿದ ಕೊಡನವ್ವ
ಚಂದಕ ತಂದೇನ ತಂಗಿ
ನೀರಿಗೆ ಬಂದೇನ..
ಚಂದಕ ತಂದೇನ ತಂಗಿ
ನೀರಿಗೆ ಬಂದೇನ..


ಚನ್ನಪ್ಪ ಚನ್ನಗೌಡ
ಕುಂಬಾರ ಮಾಡಿದ ಕೊಡನವ್ವ
ಚನ್ನಪ್ಪ ಚನ್ನಗೌಡ
ಕುಂಬಾರ ಮಾಡಿದ ಕೊಡನವ್ವ
ಚಂದಕ ತಂದೇನ ತಂಗಿ
ನೀರಿಗೆ ಬಂದೇನ..
ಚಂದಕ ತಂದೇನ ತಂಗಿ
ನೀರಿಗೆ ಬಂದೇನ..


ಬಾಳಿಯ ಬನದಾಗ
ನಾ ಹೆಂಗ ಬಾಗಿ ಬರಲವ್ವ 
ಬಾಳಿಯ ಬನದಾಗ
ನಾ ಹೆಂಗ ಬಾಗಿ ಬರಲವ್ವ
ಬಾಳಿಯ ಗೊನೆ ಬಾಗಿ
ನನ್ನ ಬೆನ್ನು ತಾಗಿತ್ತ
ಬಾಳಿಯ ಗೊನೆ ಬಾಗಿ
ನನ್ನ ಬೆನ್ನು ತಾಗಿತ್ತ


ಆರು ಮೂರು ಒಂಭತ್ತು
ಒಂಬತ್ತು ಚಿತ್ರದ ಕೊಡನವ್ವ..
ಆರು ಮೂರು ಒಂಭತ್ತು
ಒಂಬತ್ತು ಚಿತ್ರದ ಕೊಡನವ್ವ..
ಚಂದಕ ತಂದೇನ ತಂಗಿ
ನೀರಿಗೆ ಬಂದೇನ..
ಚಂದಕ ತಂದೇನ ತಂಗಿ
ನೀರಿಗೆ ಬಂದೇನ..

ಚನ್ನಪ್ಪ ಚನ್ನಗೌಡ
ಕುಂಬಾರ ಮಾಡಿದ ಕೊಡನವ್ವ
ಚಂದಕ ತಂದೇನ ತಂಗಿ
ನೀರಿಗೆ ಬಂದೇನ..

ನಿಂಬಿಯ ವನದಾಗ
ನಾ ಹೆಂಗ ನಂಬಿ ಬರಲವ್ವ
ನಿಂಬಿಯ ವನದಾಗ
ನಾ ಹೆಂಗ ನಂಬಿ ಬರಲವ್ವ
ಮುಳ್ಳು ತಾಕಿತ್ತ
ತಂಗಿ ಸೆರಗೂ ಹರಿದಿತ್ತ..
ಮುಳ್ಳು ತಾಕಿತ್ತ
ತಂಗಿ ಸೆರಗೂ ಹರಿದಿತ್ತ..

ಅಣ್ಣಿಗೇರಿ ಕೆರೆಯಾಗ
ತೆರೆ ಹೊಡ್ದು ನೀರು ತುಂಬುವಾಗ
ಅಣ್ಣಿಗೇರಿ ಕೆರೆಯಾಗ
ತೆರೆ ಹೊಡ್ದು ನೀರು ತುಂಬುವಾಗ
ಕಲ್ಲು ತಾಕಿತ್ತ ತಂಗಿ
ಬಿಂದಿಗೆ ಒಡದಿತ್ತ
ಕಲ್ಲು ತಾಕಿತ್ತ ತಂಗಿ
ಬಿಂದಿಗೆ ಒಡದಿತ್ತ

ಅವ್ವ ಇವನ್ಯಾರ
ಮಂಚದ ಮ್ಯಾಲ ಮಲಗ್ಯಾನ..
ಅವ್ವ ಇವನ್ಯಾರ
ಮಂಚದ ಮ್ಯಾಲ ಮಲಗ್ಯಾನ..
ಗೊತ್ತಿಲ್ಲೇನವ್ವಾ ತಂಗಿ
ಶಿಶುನಾಳ ಶರೀಫಜ್ಜ
ಗೊತ್ತಿಲ್ಲೇನವ್ವಾ ತಂಗಿ
ಶಿಶುನಾಳ ಶರೀಫಜ್ಜ




Post a Comment

0 Comments