Ticker

6/recent/ticker-posts

ಕುಂತ್ರೆ ನಿಂತ್ರೆ ಅವನ್ದೆ ಧ್ಯಾನ | ಕನ್ನಡ ಜಾನಪದ ಗೀತೆಗಳು

 ಕುಂತ್ರೆ ನಿಂತ್ರೆ ಅವನ್ದೆ ಧ್ಯಾನ | ಕನ್ನಡ ಜಾನಪದ ಗೀತೆಗಳು [Kuntre Nintre Avnde Dhyana Lyrics in Kannada]

ಹಾಡು:  ಕುಂತ್ರೆ ನಿಂತ್ರೆ ಅವನ್ದೆ ಧ್ಯಾನ

ಪ್ರಕಾರ: ಜಾನಪದ / ಜನಪದ
ಭಾಷೆ: ಕನ್ನಡ
ಸಂಗೀತ: ಜನಪದ
ಸಾಹಿತ್ಯ: ಜನಪದ
ಗಾಯನ: ವಿವಿಧ ಗಾಯಕರು 

 

ಕುಂತ್ರೆ ನಿಂತ್ರೆ ಅವನ್ದೆ ಧ್ಯಾನ | ಕನ್ನಡ ಜಾನಪದ ಗೀತೆಗಳು | Kuntre Nintre Avnde Dhyana Lyrics in Kannada

ಕುಂತ್ರೆ ನಿಂತ್ರೆ ಅವನ್ದೆ ಧ್ಯಾನ
ಜೀವಕ್ಕಿಲ್ರಿ ಸಮಾಧಾನ
ಅವನಿಗೆ ಎಂತ ಬಿಗುಮಾನ
ಅವನೆ ನನ್ನ ಗೆಣೆಕಾರ

ಕುಂತ್ರೆ ನಿಂತ್ರೆ ಅವನ್ದೆ ಧ್ಯಾನ
ಜೀವಕ್ಕಿಲ್ರಿ ಸಮಾಧಾನ
ಅವನಿಗೆ ಎಂತ ಬಿಗುಮಾನ
ಅವನೆ ನನ್ನ ಗೆಣೆಕಾರ

ಇಂದ್ರ ಲೋಕ್ದಲಿಲ್ಲ ಕಣ್ರಿ
ಚಂದ್ರಲೋಕ್ದಲಿಲ್ಲ ಕಣ್ರಿ
ಮೂರು ಲೋಕ್ದಲಿಲ್ಲ ಕಣ್ರಿ
ಅವನೆ ನನ್ನ ಗೆಣೆಕಾರಈ
ಈ ಮೂರು ಲೋಕ್ದಲಿಲ್ಲ ಕಣ್ರಿ
ಅವನೆ ನನ್ನ ಗೆಣೆಕಾರಈ

ರೂಪ್ದಲವನು ಚಂದ್ರ ಕಣ್ರಿ
ರೂಪ್ದಲವನು ಇಂದ್ರ ಕಣ್ರಿ
ಕೇರಿಗೆಲ್ಲ ಒಬ್ನೆ ಕಣ್ರೆ
ಅವನೆ ನನ್ನ ಗೆಣೆಕಾರ

ರೂಪ್ದಲವನು ಚಂದ್ರ ಕಣ್ರಿ
ರೂಪ್ದಲವನು ಇಂದ್ರ ಕಣ್ರಿ
ಕೇರಿಗೆಲ್ಲ ಒಬ್ನೆ ಕಣ್ರೆ
ಅವನೆ ನನ್ನ ಗೆಣೆಕಾರ

ಕುಂತ್ರೆ ನಿಂತ್ರೆ ಅವನ್ದೆ ಧ್ಯಾನ
ಜೀವಕ್ಕಿಲ್ರಿ ಸಮಾಧಾನ
ಅವನಿಗೆ ಎಂತ ಬಿಗುಮಾನ
ಅವನೆ ನನ್ನ ಗೆಣೆಕಾರ

ಜಾತ್ರೆಲ್ ಅವನ ಕಂಡೆ ಕಣ್ರಿ
ಛತ್ರಿ ಮುಚ್ಚಿ ನಿಂತ ಕಣ್ರಿ
ಜಾತ್ರೆಲ್ ಅವನ ಕಂಡೆ ಕಣ್ರಿ
ಛತ್ರಿ ಮುಚ್ಚಿ ನಿಂತ ಕಣ್ರಿ
ಪಕ್ಕಕ್ ಬಂದು ನಿಂತ ಕಣ್ರಿ
ಅವನೆ ನನ್ನ ಗೆಣೆಕಾರ

ನನ್ನ ಪಕ್ಕಕ್ ಬಂದು ನಿಂತ ಕಣ್ರಿ
ಅವನೆ ನನ್ನ ಗೆಣೆಕಾರ
ಮೊಲ್ಲೆ ಹೂವ ತಂದ ಕಣ್ರಿ
ತುರುಬಿನಲ್ಲಿ ಇಟ್ಟ ಕಣ್ರಿ
ಮೈಯೆಲ್ಲ ಜುಂ ಅಂತ್ರಿ
ಅವನೆ ನನ್ನ ಗೆಣೆಕಾರ

ಮೊಲ್ಲೆ ಹೂವ ತಂದ ಕಣ್ರಿ
ತುರುಬಿನಲ್ಲಿ ಇಟ್ಟ ಕಣ್ರಿ
ಮೈಯೆಲ್ಲ ಜುಂ ಅಂತ್ರಿ
ಅವನೆ ನನ್ನ ಗೆಣೆಕಾರ

ಕುಂತ್ರೆ ನಿಂತ್ರೆ ಅವನ್ದೆ ಧ್ಯಾನ
ಜೀವಕ್ಕಿಲ್ರಿ ಸಮಾಧಾನ
ಅವನಿಗೆ ಎಂತ ಬಿಗುಮಾನ
ಅವನೆ ನನ್ನ ಗೆಣೆಕಾರ

ಚಾವಡಿಗ್ ಬಂದು ನಿಂತ ಕಣ್ರಿ
ತಾಳಿ ಚಿನ್ನ ತಂದ ಕಣ್ರಿ
ನಂಗು ಅವನ್ಗು ಮದುವೆ ಕಣ್ರಿ
ಅವನೆ ನನ್ನ ಯಜಮಾನ

ಕುಂತ್ರೆ ನಿಂತ್ರೆ ಅವನ್ದೆ ಧ್ಯಾನ
ಜೀವಕ್ಕಿಲ್ರಿ ಸಮಾಧಾನ
ಅವನಿಗೆ ಎಂತ ಬಿಗುಮಾನ
ಅವನೆ ನನ್ನ ಗೆಣೆಕಾರ

ಕುಂತ್ರೆ ನಿಂತ್ರೆ ಅವನ್ದೆ ಧ್ಯಾನ
ಜೀವಕ್ಕಿಲ್ರಿ ಸಮಾಧಾನ
ಅವನಿಗೆ ಎಂತ ಬಿಗುಮಾನ
ಅವನೆ ನನ್ನ ಯಜಮಾನ


Post a Comment

0 Comments