ಯಾರ್ಯಾರ ನೆನೆಯಲಿ | ಕನ್ನಡ ಜಾನಪದ ಗೀತೆಗಳು #2 [Belagagi Naneddu Yaryara Neneyali Lyrics In Kannada]
ಏಳುತಾಲೇ ಎದ್ದು
ಯಾರ್ಯಾರ ನೆನೆಯಲಿ
ಎಳ್ಳು ಜೀರಿಗೆ ಬೆಳೆಯೋಳಾ
| ಭೂಮಿತಾಯ
ಎದ್ದೊಂದು ಗಳಿಗೆ
ನೆನದೇನು
ಹೊತ್ತನಂತೆ ಎದ್ದು
ಯಾರ್ಯಾರ ನೆನೆದೇನು
ಕಲ್ಲು ಕಾವೇರಿ ಕಪನೀಯ
| ನೆನೆದಾರೆ
ಮೈಲಿದ್ದ ಪಾಪ ಪರಿಹಾರ
ಎದ್ದೇನೆ ನೆನೆವೇನು
ಸಿದ್ದೂರ ಯೋಗಿಯ
ಮದ್ದೂರು ಕೆರೆಯ
ಬಸವಾನ | ನೆನೆದರೆ
ಹೊತ್ತಿದ್ದ ಪಾಪ
ಪರಿಹಾರ
ಏಳುವಾಗ ನೆನೆವೇನು
ಭಾಳಲೋಚನದವನ
ಜೋಳಿಗೆ ಹೊನ್ನ ಮಳೆಗರೆದ
1 ಕೈಲಾಸ್ದ
ದೇವ ಮಲ್ಲಯನ ನೆನೆವೇನು
ಮೂಡಲ ಮುತ್ತಯ್ಯ
ನೋಡಯ್ಯ ಬಡತನ
ಮೂಡ್ಲಲ್ಲಿ ರಾಗಿ
ಮೆಳೆಯುದ್ದ | ಬೆಳೆದರೆ.
ಮಾಡಿದೆ ನಿನಗೆ ಹರಿಸೇವೆ
ನಾರಾಯಣ ನಿನ್ನ ನಾಮದ
ಬೀಜವ
ನಾನೊಲ್ಲಿ ಬಿತ್ತಿ
ಬೆಳೆಯಲಿ | ನಿನ ನಾಮ
ನಾಲೀಗೆ ಮೇಲೆ ಬೆಳೆದೇನೋ
2 Comments
Meaning of this tripadi
ReplyDeleteThanks
ReplyDeleteComment is awaiting for approval