Ticker

6/recent/ticker-posts

ಸಲ್ಮಾನ್ ಖಾನ್ ತೋಟದ ಮನೆಗೆ ನುಗ್ಗಿದ ಇಬ್ಬರ ಬಂಧನ

ಸಲ್ಮಾನ್ ಖಾನ್ ತೋಟದ ಮನೆಗೆ ನುಗ್ಗಿದ ಇಬ್ಬರ ಬಂಧನ | 2 People arrested for trespassing Salman Khan Farmhouse

ಖ್ಯಾತ ಹಿಂದೆ ನಟ ಸಲ್ಮಾನ್ ಖಾನ್ ಅವರಿಗೆ,  ಸೆರೆಯಲ್ಲಿರುವ  ಲಾರನ್ಸ್ ಬಿಷ್ಣೋಯ್ ಎಂಬುವವನು ತನ್ನ ಸಹಚರರ ಮೂಲಕ ನಿರಂತರವಾಗಿ ಕೊಲೆ ಬೆದರಿಕೆ ಹಾಕುತ್ತಾ ಬಂದಿದ್ದಾನೆ, ಆದ್ದರಿಂದ ಮುಂಬೈ ಪೊಲೀಸರು ಸಲ್ಮಾನ್ ಖಾನ್ ಅವರಿಗೆ ಭದ್ರತೆ ಒದಗಿಸಿದ್ದಾರೆ. ಸಲ್ಮಾನ್ ಖಾನ್ ಗೆ ಗನ್ ಲೈಸೆನ್ಸು ಕೂಡ ಕೊಡಲಾಗಿದೆ.


ಮುಂಬೈಯ ಸಮೀಪವಿರುವ  ಬನ್ವೆಲ್ ಪ್ರದೇಶದಲ್ಲಿ ನಟ ಸಲ್ಮಾನ್  ಖಾನ್ ಗೆ ತೋಟದ ಮನೆ ಇದೆ. ಈ ಮನೆಗೆ  ಇಬ್ಬರು ಅತಿಕ್ರಮ ಪ್ರವೇಶ ಮಾಡಲು ಯತ್ನಿಸಿದ್ದಾರೆ. ಅವರನ್ನು ಮನೆಯ ಭದ್ರತಾ ಸಿಬ್ಬಂದಿ ಹಿಡಿದು ಪೊಲೀಸರಿಗೆ ಒಪ್ಪಿಸಿದ್ದಾರೆ. 

ಅಜೇಶ್ ಕುಮಾರ್, ಗುರುಸೇವಕ್ ಸಿಂಗ್ ಎಂಬ ಈ ಇಬ್ಬರು ಪಂಜಾಬ್ ರಾಜ್ಯಕ್ಕೆ ಸೇರಿದವರು ಎಂದು ಗುರುತಿಸಲಾಗಿದೆ. ಅವರಿಗೆ ಪೋಲಿ ಆಧಾರ್ ಕಾರ್ಡ್ ಇರುವುದು ಪತ್ತೆಯಾಗಿದೆ. ಅವರನ್ನು ಬಂಧಿಸಿ ಪೊಲೀಸರು ವಿಚಾರಣೆ ನಡೆಸುತ್ತಿದ್ದಾರೆ.

Post a Comment

0 Comments