Ticker

6/recent/ticker-posts

ನನಗೆ ನೀನು ನಿನಗೆ ನಾನು ಸಾಹಿತ್ಯ | ಉಪಾಧ್ಯಕ್ಷ

ನನಗೆ ನೀನು ನಿನಗೆ ನಾನು ಸಾಹಿತ್ಯ | ಉಪಾಧ್ಯಕ್ಷ [Nanage Neenu Ninage Naanu Song Lyrics in Kannada]

ನನಗೇ ನೀನು ನಿನಗೆ ನಾನು, ಅನಿಲ್ ಕುಮಾರ್ ನಿರ್ದೇಶಿಸಿರುವ 'ಉಪಾಧ್ಯಕ್ಷ' ದ ಕನ್ನಡ ಚಿತ್ರದ ಗೀತೆಯಾಗಿದ್ದು, ಡಿಎನ್ ಸಿನಿಮಾಸ್ ಬ್ಯಾನರ್ ಅಡಿಯಲ್ಲಿ ಸ್ಮಿತಾ ಉಮಾಪತಿ ಈ ಚಿತ್ರವನ್ನು ನಿರ್ಮಿಸಿದ್ದಾರೆ.

ಉಪಾಧ್ಯಕ್ಷ ಕನ್ನಡ ಚಿತ್ರದಲ್ಲಿ ಚಿಕ್ಕಣ್ಣ, ಮಲೈಕಾ, ರವಿಶಂಕರ್, ಸಾಧು ಕೋಕಿಲ ಮತ್ತು ಇತರರು ಅಭಿನಯಿಸಿದ್ದಾರೆ.

ನನಗೇ ನೀನು ನಿನಗೆ ನಾನು ಹಾಡಿನ ಸಾಹಿತ್ಯವನ್ನು ಎ ಪಿ ಅರ್ಜುನ್ ಬರೆದಿದ್ದಾರೆ ಮತ್ತು ಸಂಗೀತ ನಿರ್ದೇಶಕ ಅರ್ಜುನ್ ಜನ್ಯ ಅವರು ಹಾಡನ್ನು ಸಂಯೋಜಿಸಿದ್ದಾರೆ. ಈ ಹಾಡನ್ನು ಹಿನ್ನೆಲೆ ಗಾಯಕರಾದ ವಿಜಯ್ ಪ್ರಕಾಶ್ ಮತ್ತು ರಕ್ಷಿತಾ ಸುರೇಶ್ ಹಾಡಿದ್ದಾರೆ.


ಹಾಡು: ನನಗೆ ನೀನು ನಿನಗೆ ನಾನು
ಗಾಯಕರು: ವಿಜಯ್ ಪ್ರಕಾಶ್, ರಕ್ಷಿತಾ ಸುರೇಶ್ 
ಸಾಹಿತ್ಯ: ಏ. ಪಿ. ಅರ್ಜುನ್ 
ಚಲನಚಿತ್ರ: ಉಪಾಧ್ಯಕ್ಷ 
ಸಂಗೀತ: ಅರ್ಜುನ್ ಜನ್ಯ 
ಲೇಬಲ್: ಆನಂದ್ ಆಡಿಯೋ

ನನಗೆ ನೀನು ನಿನಗೆ ನಾನು ಸಾಹಿತ್ಯ | ಉಪಾಧ್ಯಕ್ಷ [Nanage Neenu Ninage Naanu Song Lyrics in Kannada]

ನನಗೆ ನೀನು ನಿನಗೆ ನಾನು
ನನಗೆ ಸಿಕ್ಕ ಒಲವು ನೀನು
ಕೈಯ ಬಿಡದೆ ಇರು ಕೊನೆವರೆಗೆ
ಜಗವು ನೀನು ಜೀವ ನೀನು
ದೈವ ಕೊಟ್ಟ ವರವು ನೀನು
ಬದುಕು ಪೂರ್ತಿ ದಿನ ಇರು ಜೊತೆಗೆ
ಹೆಸರು ಬರೆದ ಹಾಳೆಯ
ಗೆಳೆಯ ನೀನೇ ಆಗಲೀ
ಹರಕೆ ಮಾಡಿ ಕೇಳುವೆ
ಉಸಿರು ಜೊತೆಗೆ ಹೋಗಲಿ
ಜೊತೆಗಿರು ಪ್ರತಿದಿನ ಮಗುವಿನ ಮನಸಿನ..
ನಗು ನಗಿತಿರು ಹೊಸ ಕನಸಿನ ವರ ತಂದವನೆ..

ಏನು ಬೇಕು ಕೇಳು ನೀನು
ತಂದು ನಾನು ಕೊಡ್ತೀನಿ ನಿಂಗೆಂದಿಗೂ..
ರಾಜ ರಾಣಿ ನಾನು ನೀನು
ಯಾರದು ದೃಷ್ಟಿ ತಾಗಲ್ಲ ನಮಗೆಂದಿಗೂ..
ಆಣೆ ಮಾಡಿ ಹೇಳುತ್ತೀನಿ
ನಿನ್ನಾ ಬಿಟ್ಟು ಹೋಗಲ್ಲ ಎಂದೆಂದಿಗೂ..
ಸಾಯೋವರ್ಗೂ ಹಿಂಗೇ ನಾನು
ನಿನ್ನ ಜೋಡಿ ಇರ್ತೀನಿ ಎಂದೆಂದಿಗೂ…

ನನಗೆ ನೀನು ನಿನಗೆ ನಾನು
ನನಗೆ ಸಿಕ್ಕ ಒಲವು ನೀನು
ಕೈಯ ಬಿಡದೆ ಇರು ಕೊನೆವರೆಗೆ
ಜಗವು ನೀನು ಜೀವ ನೀನು
ದೈವ ಕೊಟ್ಟ ವರವು ನೀನು
ಬದುಕು ಪೂರ್ತಿ ದಿನ ಇರು ಜೊತೆಗೆ

ಬೆಳಗಿನ ಸೂರ್ಯನೇ ತೋರಣ
ದಿನವಿಡೀ ಒಲವಿನ ಹೂ ತೇರಿನ ಹೊಸ ದಿಬ್ಬಣ
ನನಗಿದು ಇನಿಯನ ತೋಳಲಿ
ಮೊದಲನೇ ಅನುಭವ ಅನುರಾಗದ ಹೊಸ ಊರಲಿ
ತಂಗಾಳಿಯು ನಮ್ಮ ಜೊತೆಗೆ ದಾರಿಯ ತೋರಲಿ..
ಹಕ್ಕಿಗಳು ಸಿಕ್ಕಿ ನಮಗೆ ಶುಭವನು ಕೋರಲಿ
ನೀನೇನೆ ನಂಗೆಲ್ಲ ಬೇರೇನೂ ಬೇಕಿಲ್ಲ
ದಿನ ಕಳೆಯಲಿ ನಿನ್ನಾ ಜೊತೆಯಲಿ..
ಹೊಸ ಜೋಗುಳ ಹಿತವಾಗಿದೆ ಎದೆಯುರೊಳಗೆ..

ನೀನೇ ನೀನೇ ನೀನೇ ನೀನೇ..
ಎಲ್ಲಾ ನೀನೇ ಬೇರೇನೂ ಬೇಡ ಕಣೇ..
ಏಳು ಜನ್ಮ ನೀನೇ ನಂಗೆ
ಬೇಕು ಅಂತ ದೇವರನ್ನ ಕೇಳ್ತೀನಿ ಕಣೇ..
ಬೀರೆ ದೇವ್ರು ಕಾಯುತ್ತಾರೆ ನನ್ನ ನಿನ್ನ
ಹರಕೆನ ಕಟ್ಟಿನಿ ಕಣೇ
ನಿನ್ನಾ ಕುಶಿ ನೋಡೋಕೆ
ನಾನು ಪೂರ್ತಿ ನಿದ್ದೆ ಬಿಡ್ತೀನಿ ಕಣೇ..

ನನಗೆ ನೀನು ನಿನಗೆ ನಾನು
ನನಗೆ ಸಿಕ್ಕ ಒಲವು ನೀನು
ಕೈಯ ಬಿಡದೆ ಇರು ಕೊನೆವರೆಗೆ
ಜಗವು ನೀನು ಜೀವ ನೀನು
ದೈವ ಕೊಟ್ಟ ವರವು ನೀನು
ಬದುಕು ಪೂರ್ತಿ ದಿನ ಇರು ಜೊತೆಗೆ


Post a Comment

0 Comments