Ticker

6/recent/ticker-posts

ಮಲ್ಲಿಗೆ ಹೂವ್ಹ್ನಾಗೆ | ಕನ್ನಡ ಜಾನಪದ ಭಕ್ತಿ ಗೀತೆಗಳು #6

ಮಲ್ಲಿಗೆ ಹೂವ್ಹ್ನಾಗೆ | ಕನ್ನಡ ಜಾನಪದ ಭಕ್ತಿ ಗೀತೆಗಳು #6 [Mallige Hoovage Kannada Janapada Song Lyrics]



ಮಲ್ಲಿಗೆ ಹೂವ್ಹ್ನಾಗೆ ಚೆಲ್ಲುವೋ ನಿನ್ ಪರಸೇ 
ಚೆಲ್ಲಾಟಗಾರ ಮಾದಪ್ಪ । ನಿನ್ವರಸೆ 
ಕಲ್ಪತ್ತಿ ಕಣಿವೆ ಇಳಿದಾವು

ತುಪ್ಪ ಕಾಸಿವ್ನಿ ಹರಿವಾಣ ಬೆಳಗಿವ್ನಿ 
ಕಿತ್ತಲೆ ಹಣ್ಣು ಎಡದಿವ್ನಿ । ಮಾದಪ್ಪ
ಅತ್ತಾಡಿ ಬರುವ ಪರಸೇಗೆ

ಸರ್ಪನಾ ದಾರೀಲಿ ಸಂಜೇನು ನಾ ಬಳಸಿ
ನೆಪ್ಪಿಲ್ಲ ಮಲೆಗೆ ಬರಬಹುದೆ । ಏಳು ಮಲೆ
ನೆಪ್ಪು ತೊರ್ಯಾವೋ ಹುಲಿ ಕರಡಿ

ಪರಸೆ ಬರುತಾದೆಂದು ಸರಸದೇಳು ಮಲೆಗೆ
ಅರಿಸಿನದ್ದುಡಿಯಂತ ಕೆಂಧೂಳು । ತುಳಕೊಂಡು
ಪರಸೆ ನಡೆದವು ಏಳ್ಳಲೆಗೆ

ಕರಡೀನ  ಕಲ್ಮಾಡಿ ಹುಲಿಯನ್ ಹುತ್ತಾ  ಮಾಡಿ
ಮಡಗಿದ್ದ ಬೆತ್ತ ಮರೆಮಾಡಿ । ಮಾದೇವ
ಹೊರಟಾನೋ ಜೇನು ಮಲೆಗಾಗಿ

ಹಣ್ಣು ಕಾಯಿ ಪೂಜೆ ಚೆನ್ನಾದ ಹುಲಿಯವನೆ
ಬರಲಾರೆ ನಿಮ್ಮ ಏಲ್ಮಲೆಗೆ । ಮಾದೇವ
ಒಪ್ಪಿಸಿಕೊಳ್ಳಿ ಹರಕೀಯ

ಹರಕೀಯ ಒಪ್ಪುವಾರೆ ಚಿಕ್ಕವನ ಮಗಳಲ್ಲ
ಬಳಸಿ ಬಾರವ್ವ ಪ್ರಾಕಾರ । ಬರದಿದ್ರೆ
ಮಾದೇವ ನಿನಗೆ ಮುನಿಯೂವ 

ಕಂಭದ ಬೋರೇಲಿ ನಿಂದು ನೋಡುವಳಾರ
ಕುಂಭಿ ದೋತ್ರಾದ ಕರಿಚೆಲುವೆ । ಮಾದೇವ
ನಿಂದು ನೋಡೀಯ ಪರಸೇಯ

ಗಂಡುಗಲ್ಲಿನ ಮೇಲೆ ಗಂಡುಲಿಯ ಕುಂಡಿರಿಸಿ
ಗೊಂಡೆ ಕೌದಿ ಬಿಗಿಮಾಡಿ  । ಮಾದೇವ
ಗಂಡುಲಿಯ ಮೇಲೆ ಮೆರೆದಾನೊ

ಓಣಿ ಓಣಿಗುಂಟ ಓಣೀಯ ಕರೆಗುಂಟ
ಚೇಣಿಯ ಹುಲ್ಲ ತುಳಕೊಂಡು । ಮಾದೇವ
ಈದ್ಗುಲಿಯ ಬೇಟೆ ಹೊರಟಾನೊ

ಅಪ್ಪ ಮಾದಯ್ಯನ  ಗುಡಿಯ ಬಾಗಿಲ ಮುಂದೆ
ಎಪ್ಪತ್ತೇಳು ಕವಲು ಮರ ಹುಟ್ಟಿ । ಮಾದೇವ
ತುಪ್ಪ ಮಾರೋರಿಗೆ ನೆರಳಾದೋ

ಅಪ್ಪ ಮಾದಯ್ಯನ ತೆಪ್ಪತೀರಿನ ಮೇಲೆ
ಎಪ್ಪತ್ತೇಳು ಕೋಟಿ ನವಿಲ್ಹಿಂಡು । ಕೂತ್ಕೊಂಡು
ಕಪ್ಪ ತುಂಬಿವೊ ಕಳಸಕ್ಕೆ

ಅಣ್ಣ ಮಾದಯ್ಯ ಸಣ್ಣ ತೇರಿನ ಮೇಲೆ
ಹನ್ನೆರಡಿ ಹೆಡೆಯ ಸರ್ಪಾದ । ಹೆಡೆ ಮೇಲೆ
ಅಣ್ಣ ಮಾಜಯ್ಯ ಒರಗ್ಯವರೆ

ಪಟ್ಟೆ ರುಮಾಲ್ಯಾವ  ಐಗಳಿಗೆ ಅಮರೀವೊ
ಬಟ್ಟೋರಿ ಮೇಲೆ ಬರುವೋರು । ಮಾದೇವ್ಗೆ 
ಪಟ್ಟೇರುಮಾಲು ಅಮರೀವೊ

ಮಾದಯ್ಯ ಬರುವಾಗ ಮಾಳೆಲ್ಲ ಘಮ್ಮೆಂದೊ
ಮಾಳದಲ್ಲಿ ಗರಿಕೆ ಚಿಗರೀವೊ । ಮಾದೇವ
ಮೂಡ್ಲಲ್ಲಿ  ಮಳೆ ಸುರಿದಾವೋ

ಅಣ್ಣ ತಮ್ಮ ಕೂಡಿ ನನ್ನ ಗುಡ್ಡಾ ಏರಿ
ಚನ್ನಂಗಿ ಬಿದಿರು ಕಡಿದಾರೊ । ಆವೂರ
ದ್ಯಾವಮ್ನ ತೇರು ಎಳೆದಾರೊ

ಜಾತ್ರೆಗೋಗ್ತಿನಂತ ಜರದ ರುಮಲ ಸುತ್ತಿ
ಮ್ಯಾಲೆ ಸುವರಾದ ಕೊಡಬೇಕು ।  ಬಾಲೆ
ಬಂದಿದಾಳೇನೋ ಜಾತ್ರೆಗೆ

ಎಲ್ಲವ್ವ  ಹೋಗುವರು ಎಳ್ಳು ಬೆಲ್ಲಾ ಒಯ್ರೋ 
ಮಲ್ಲಿಗೆ ಒಯ್ರೋ ತುರುಬೀಗೆ । ಪರಸ್ರಾಮ್ನ 
ಬಿಲ್ಲೀಗೆ ಒಯ್ರೋ ಬಿಳಿ ಮುತ್ತು

ಹೋಗುವವನ ಕೈಯಾಗ ಹೊಳೆವ ಎರಡುಂಗುರ
ಹೋಗು ನಿನ್ನ ದಾರಿ ಬಲು ದೂರ ।  ವೂರ
ತೇರು ನಿನಗಾಗಿ ತರುಬಯ್ತೋ

ಆಕಾಶದ ಡವ್ಯಾಗ ಧೂಪದ ಹೊಗೆ ಎದ್ದು
ಆಯ್ತು ಮಲ್ಲಯನ ಶಿವಪೂಜೆ । ಆಗಾಗ
ಆಕಾಶದ ಘಂಟೆ ಘಳಲೆಂದು

ನಿದ್ದೆಗಣ್ಣಲ್ಲಿ ಕಂಡೆ ಸುದ್ಧ ಗುರುವಿನ ಪಾದ
ಎದ್ದು ನೋಡಿದರೆ ನಿಬಯಲು । ಗುರುರಾಯ
ರುದ್ದರನ ಮಹಿಮೆ ತಿಳಿಯದೊ

ಹೊತ್ತು ಮುಳುಗಿದರೇನು ಕತ್ತಲಾದರೇನು
ಅಪ್ಪ ನಿನ್ನ ಗುಡಿಗೆ ಬರುವೆನು । ಮಾದಯ್ಯ
ಮುತ್ತಿನ ಬಾಗಿಲ ತೆರದೀರು

Post a Comment

0 Comments