Ticker

6/recent/ticker-posts

ಆನೆಯ ಈ ಹೃದಯ ವಿದ್ರಾವಕ ಚಿತ್ರವನ್ನು ಒಮ್ಮೆ ನೋಡಿ

ಆನೆಯ ಹೃದಯ ವಿದ್ರಾವಕ ಚಿತ್ರವನ್ನು ಒಮ್ಮೆ ನೋಡಿ [Tikiri Elephant Srilanka] : ಮಾನವ ತನ್ನ ಸ್ವಾರ್ಥ ಸಾಧನೆಗಾಗಿ ಈ ಭೂಮಿ, ಪರಿಸರ, ಇತರೆ ಜೀವಿಗಳನ್ನು ಉಪಯೋಗಿಸಿಕೊಂಡು ಅವುಗಳನ್ನು ಅಳಿವಿನ ಅಂಚಿಗೆ ತಂದು ನಿಲ್ಲಿಸಿದ್ದಾನೆ. ಮಾನವರ ಈ ಆಧುನಿಕ ಜಗತ್ತಿನಲ್ಲಿ ಪ್ರಾಣಿಗಳಿಗೆ ಅತಿಯಾದ ತೊಂದರೆಗಳು ಉಂಟಾಗುತ್ತಿದೆ. ಪರಿಣಾಮವಾಗಿ ವಿವಿಧ ಅಪರೂಪದ ಜೀವಿಗಳು ಅಳಿವಿನ ಅಂಚಿನಲ್ಲಿವೆ. ಕೆಲವು ಜೀವಿಗಳು ನಿರ್ನಾಮವಾಗಿವೆ. ಪ್ರಪಂಚದಾದ್ಯಂತ ಪ್ರಾಣಿಗಳ ಸಂಖ್ಯೆಯನ್ನು ಬೆರಳೆಣಿಕೆಯಲ್ಲಿ ಎಣಿಸಬಹುದು ಎಂದು ಹೇಳಬೇಕಾಗಿಲ್ಲ.

ಮಾನವ ಕಿರುಕುಳ, ಅರಣ್ಯ ಆಕ್ರಮಣ, ಆಹಾರದ ಕೊರತೆ ಮತ್ತು ಬೇಟೆಯಾಡುವಿಕೆಯಿಂದಾಗಿ, ಅನೇಕ ಪ್ರಭೇದಗಳು ತಮ್ಮ ನೈಸರ್ಗಿಕ ನೆಲೆಯನ್ನು  ತೊರೆದು ಸಂಪೂರ್ಣವಾಗಿ ವಿಭಿನ್ನ ವಾತಾವರಣದಲ್ಲಿ ವಾಸಿಸುತ್ತಿವೆ. ಹಿನ್ನೆಲೆಯಲ್ಲಿ ಸೇವ್ ಎಲಿಫೆಂಟ್ ಫೌಂಡೇಶನ್ [Save Elephant Foundation] ತಮ್ಮ ಫೇಸ್ಬುಕ್ ಪುಟದಲ್ಲಿ ಇತ್ತೀಚಿಗೆ ಒಂದು ಫೋಟೋವನ್ನು ಪೋಸ್ಟ್ ಮಾಡಿದೆ. ಮನಕಲಕುವ ಚಿತ್ರದ ಕಥೆ ಹೃದಯ ವಿದ್ರಾವಕವಾಗಿದೆ.

Image: Save Elephant Foundation/Facebook
ಶ್ರೀಲಂಕಾದ ಕ್ಯಾಂಡಿಯಲ್ಲಿ ಪ್ರತಿ ವರ್ಷ ಇಸಾಲಾ ಪೆರೆಹೆರಾ [Perahera Festival] ಎಂಬ ವಾರ್ಷಿಕ ಉತ್ಸವ ನಡೆಯುತ್ತದೆ. ಹತ್ತು ದಿನಗಳ ಉತ್ಸವವು ವರ್ಷದ ಆಗಸ್ಟ್ 5 ರಂದು ಪ್ರಾರಂಭವಾಗಿ 15  ರಾತ್ರಿ ಕೊನೆಗೊಂಡಿತು. ಉತ್ಸವದಲ್ಲಿ 60 ಕ್ಕೂ ಹೆಚ್ಚು ಆನೆಗಳು ಮತ್ತು 200 ಕ್ಕೂ ಹೆಚ್ಚು ಕಲಾವಿದರು ಭಾಗವಹಿಸಿದ್ದರು. ಉತ್ಸವದಲ್ಲಿ ಪಾಲ್ಗೊಂಡಿದ್ದ ಆನೆಗಳಲ್ಲಿ 70 ವರ್ಷದ ಟಿಕಿರಿ [Tikiiri] ಎಂಬ ಹೆಣ್ಣು ಆನೆ ಸಹ ಒಂದು. ಅನಾರೋಗ್ಯದಿಂದ  ಬಳಲುತ್ತಿರುವ ಆನೆಯ ಬಡಕಲು ದೇಹ ನೋಡುವವರ ಮನವನ್ನು ಕಲಕುತ್ತದೆ.  

ಟಿಕಿರಿಯನ್ನು ಉಲ್ಲೇಖಿಸಿಸೇವ್ ಎಲಿಫೆಂಟ್ ಫೌಂಡೇಶನ್’ ಹೇಳಿರುವುದೇನೆಂದರೆ,
ಟಿಕಿರಿ ಅನಾರೋಗ್ಯದಿಂದ  ಬಳಲುತ್ತಿದ್ದಾಳೆ. ಉತ್ಸವದಲ್ಲಿ ಭಾಗವಹಿಸುವ ಆನೆಗಳಲ್ಲಿ ಇದು ಒಂದು. ಹಬ್ಬವು ಪ್ರಾರಂಭವಾದಾಗ, ಸಂಜೆ ಮೆರವಣಿಗೆಯಲ್ಲಿ ಪಾಲ್ಗೊಳ್ಳುವ ಟಿಕಿರಿ ಕೆಲಸ ಮುಗಿಸಿ  ತನ್ನ ಸ್ಥಳಕ್ಕೆ ಹಿಂದಿರುಗಲು ಮಧ್ಯರಾತ್ರಿ ಆಗುತ್ತದೆ. ದೇಹದ ತೂಕಿ ಕಳೆದುಕೊಂಡು ಮೂಳೆ ಹಾಗು  ಚರ್ಮದಲ್ಲಿ ಬಡಕಳ್ಳಿಗಿ ಕಾಣುವ ಟಿಕಿರಿಯ ಸ್ಥಿತಿ ತುಂಬಾ ಕೆಟ್ಟದಾಗಿದೆ. ಆದರೆ ಅದನ್ನೆಲ್ಲ ಲೆಕ್ಕಿಸದೆ  ಜನರ ಕಿರುಚಾಟ, ಹೊಗೆ ಮತ್ತು ಪಟಾಕಿಗಳ ನಡುವೆ ಅದನ್ನು ಒಯ್ಯುತ್ತಾರೆ.

ಟಿಕಿರಿಯನ್ನು ಪ್ರತಿದಿನ ಹಲವಾರು ಕಿಲೋಮೀಟರ್ಗಳಷ್ಟು ದೂರ ನಡೆಸಲಾಗುತ್ತದೆ. ಹಾಗೆ ನಡೆಯುವಾಗ ದಾರಿಯಲ್ಲಿ ಸಿಗುವ ಸಹಸ್ರಾರು ಜನರಿಗೆ ಆಶೀರ್ವಾದ ಮಾಡುವಂತೆ ಆದೇಶಿಸುತ್ತಾರೆ. ಅವಳ ಇಡೀ ದೇಹವು ಅಲಂಕಾರದಿಂದ ಮುಚ್ಚಲ್ಪಟ್ಟಿದೆ. ಆದ್ದರಿಂದ ಆನೆಯ ನಿಜವಾದ ದೈಹಿಕ ಸ್ಥಿತಿ ಜನರಿಗೆ ತಿಳಿದಿಲ್ಲ. ಹೆಚ್ಚು ಬೆಳಕು ಇರುವುದರಿಂದ ಅವಳ ಕಣ್ಣಲ್ಲಿ ನೀರು ಬರುತ್ತಿರುವುದನ್ನು ಯಾರೂ ಗಮನಿಸುವುದಿಲ್ಲ.

ಹಬ್ಬವು ಪ್ರತಿಯೊಬ್ಬರಿಗೂ ಸಂತೋಷವನ್ನು ನೀಡುವ ವಿಷಯ. ಆದರೆ ಅದು ಇತರರಿಗೆ ಯಾವುದೇ ತೊಂದರೆಗಳನ್ನು ಉಂಟುಮಾಡಬಾರದು. ಟಿಕಿರಿಯನ್ನು ಸಂಕಟಕ್ಕೆ ಗುರಿಮಾಡಿ ಆಶೀರ್ವಾದ ಪಡೆಯುವದರಿಂದ ಏನು ಪ್ರಯೋಜನ?. ಟಿಕಿರಿಯ ಫೋಟೋ ಸ್ವೀಕಾರಾರ್ಹವಾದರೆ, ನಾವು ಯಾವಾಗಲೂ ಶಾಂತಿಯಿಂದ  ಬದುಕಲು ಸಾಧ್ಯವಿಲ್ಲ. ಯಾವುದೇ ಹಾನಿ ಮಾಡದೆ ಸಹಾನುಭೂತಿಯ ಮಾರ್ಗವನ್ನು ಅನುಸರಿಸಿ ಎಂಬುದೇ ಬುದ್ದನು ಜಗಕ್ಕೆ ತೋರಿದ ಹಾದಿ. ಅದನ್ನು ಅನುಸರಿಸುವ ಸಮಯ ಇದು. ” 

ಈ ಭೂಮಿ ಬರಿ ಮಾನವರಿಗೆ ಮಾತ್ರವಲ್ಲ. ಪ್ರತಿ  ಒಂದು ಜೀವರಾಶಿಗೂ ಬದುಕುವ ಹಕ್ಕಿದೆ. ತಾನು ಇತರೆ ಪ್ರಾಣಿಗಳಿಗಿಂತ ಬುದ್ದಿವಂತ ಜೀವಿ ಎಂಬ ಒಂದೇ ಕಾರಣಕ್ಕೆ ಮಾನವ ಇತರೆ ಪ್ರಾಣಿಗಳನ್ನು ಶೋಷಿಸುವುದು ಸರಿಯಲ್ಲ. ಈ ಪ್ರಾಣಿಗಳ ಒಳಿತಿಗಾಗಿ ದುಡಿಯುತ್ತಿರುವ 'ಸೇವ್ ಎಲಿಫೆಂಟ್ ಫೌಂಡೇಶನ್’ ನಂತಹ ಸಂಸ್ಥೆಗಳಿಗೆ ನಾವು ಸಹಕಾರ ನೀಡಬೇಕು ಹಾಗು ಈ ಭೂಮಿ ಕೇವಲ ಮಾನವರ ವಾಸಸ್ಥಳ ಮಾತ್ರವಲ್ಲ, ಪ್ರತಿಯೊಂದು ಜೀವರಾಶಿಯ ನೆಲೆ ಎಂಬುದನ್ನು ಅರಿತು ನಡೆದುಕೊಳ್ಳಬೇಕಾಗಿದೆ. 

Post a Comment

2 Comments

  1. An act that is Destructive to the environment may be criminalized by statute

    ReplyDelete
  2. An act that is Destructive to the environment may be criminalized by statute

    ReplyDelete

Comment is awaiting for approval