Ticker

6/recent/ticker-posts

ಕಿಡ್ನಿ ಸ್ಟೋನ್ ಎಂದರೇನು?


ಕಿಡ್ನಿ ಸ್ಟೋನ್ [Kidney Stoneಎಂದರೇನು? : ಕಿಡ್ನಿ [ಮೂತ್ರ ಪಿಂಡಗಳು ] ಗಳೆಂದರೆ ಮುಷ್ಟಿ -ಗಾತ್ರದ ಒಂದು ಜೊತೆ ಅವಯವಗಳು. ಇವು ಶರೀರದ ಹಿಂಭಾಗದ ಎರಡೂ ಬದಿಯಲ್ಲಿ ಸೊಂಟದಿಂದ ಸ್ವಲ್ಪ ಮೇಲಕ್ಕಿದೆ ಮತ್ತು ಪಕ್ಕೆಲುಬುಗಳಿಂದ ರಕ್ಷಿಸಲ್ಪಟ್ಟಿವೆ.

ಕಿಡ್ನಿಗಳ ಕಾರ್ಯಗಳೇನು?

ಕಿಡ್ನಿಗಳನ್ನು ಶರೀರದ ಮಾಸ್ಟರ್-ಕೆಮಿಸ್ಟ್ ಎಂದು ಪರಿಗಣಿಸಬಹುದು.

  • ಇವುಗಳು ಶರೀರದಲ್ಲಿನ ನೀರಿನ ಪ್ರಮಾಣವನ್ನು ಮತ್ತು ಶರೀರದ ರಾಸಾಯನಿಕಗಳನ್ನು ಸಮತೋಲನಗೊಳಿಸುತ್ತವೆ.
  • ಇವು ರಕ್ತದಿಂದ ತ್ಯಾಜ್ಯ ಉತ್ಪನ್ನಗಳನ್ನು ಹೊರ ಹಾಕುತ್ತವೆ.
  • ಇವುಗಳು ರಕ್ತದಲ್ಲಿರುವ ಕೆಂಪು ರಕ್ತಕಣಗಳನ್ನು ಉತ್ಪಾದಿಸಲು ನೆರವಾಗುವಂತಹ ವಿವಿಧ ಹಾರ್ಮೋನುಗಳನ್ನು ಮತ್ತು ರಾಸಾಯನಿಕಗಳನ್ನು ತಯಾರಿಸುತ್ತವೆ.
  • ಇವುಗಳು ನಿಮ್ಮ ಮೂಳೆಗಳನ್ನು ಬಲವಾಗಿ ಮತ್ತು ಆರೋಗ್ಯವಾಗಿಡಲು ಶರೀರಕ್ಕೆ ಬೇಕಾದ ವಿಟಮಿನ್ ಡಿ ಬಳಕೆಯಲ್ಲಿ ಸಹಾಯ ಮಾಡುತ್ತವೆ.
  • ಇವುಗಳು ನಿಮ್ಮ ಬ್ಲಡ್ ಪ್ರೆಶರ್ ಅನ್ನು (ರಕ್ತದ ಒತ್ತಡವನ್ನು) ನಿಯಂತ್ರಣದಲ್ಲಿ ಇರಿಸುತ್ತವೆ.

ಮೂತ್ರಜನಕಾಂಗ ವ್ಯವಸ್ಥೆ (ಯುರಿನರಿ ಸಿಸ್ಟಮ್) ಹೇಗೆ ಕೆಲಸ ಮಾಡುತ್ತದೆ?

ಯೂರಿನರಿ ಸಿಸ್ಟಮ್ ಒಂದು ಜೊತೆ ಕಿಡ್ನಿಗಳು ಮತ್ತು ಯೂರೇಟರ್ಗಳು(ಮೂತ್ರ ನಾಳ), ಬ್ಲಾಡರ್ (ಮೂತ್ರಚೀಲ) ಮತ್ತು ಯುರೆಥಾಗಳನ್ನು (ಮೂತ್ರ ವಿಸರ್ಜನಾ ನಾಳ) ಒಳಗೊಂಡಿದೆ.

ಕಿಡ್ನಿಗಳು ರಕ್ತದಿಂದ ತ್ಯಾಜ್ಯಗಳನ್ನು ಹೊರ ಹಾಕುತ್ತವೆ; ಯೂರೇಟರ್ಗಳು ತ್ಯಾಜ್ಯಗಳನ್ನು ಮೂತ್ರದ ರೂಪದಲ್ಲಿ ಕಿಡ್ನಿಗಳಿಂದ ಮೂತ್ರ ಚೀಲಕ್ಕೆ ಒಯ್ಯುತ್ತವೆ. ಯೂರೆಥಾ ಮೂತ್ರವನ್ನು ಅಂತಿಮವಾಗಿ ಶರೀರದಿಂದ ಹೊರ ಹಾಕುತ್ತದೆ.

ಕಿಡ್ನಿ ಸ್ಟೋನ್ ಎಂದರೇನು?

ಕಿಡ್ನಿಸ್ಟೋನ್ ಎನ್ನುವುದು ಒಂದು ಗಟ್ಟಿಯಾದ ಹರಳುಗಳಂತಿರುವ ಸಮೂಹ. ಇದು ಮೂತ್ರದಿಂದ ಬೇರ್ಪಟ್ಟಿರುವ ಸಣ್ಣ ಪುಟ್ಟ ಕಣಗಳಿಂದ ಉಂಟಾಗಿ ಕಿಡ್ನಯೊಳಗೆ ಸಂಗ್ರಹವಾಗುತ್ತದೆ.

ಕಿಡ್ನಿ ಸ್ಟೋನ್ ಗಾತ್ರವು ಹಲವು ಬಗೆಯಲ್ಲಿರುತ್ತದೆ. ಇದು ಮರಳಿನ ಕಣದಂತೆ ಸಣ್ಣದಾಗಿಯೂ ಇರಬಹುದು ಅಥವಾ ಟೇಬಲ್ ಟೆನ್ನಿಸ್ ಬಾಲಿನಷ್ಟು ದೊಡ್ಡದಾಗಿಯೂ ಇರಬಹುದು.
ಯೂರಿನರಿ ಸಿಸ್ಟಮ್ನಲ್ಲಿನ ಯಾವುದೇ ಭಾಗದಲ್ಲಾದರೂ ಕಾಣಿಸಕೊಳ್ಳಬಹುದು.

ಕಿಡಿ ಸ್ಟೋನ್ ರೂಪಗೊಳ್ಳಲು ಯಾವ ಅಂಶಗಳು ಕಾರಣವಾಗುತ್ತವೆ?

ಕಿಡ್ನಿ ಸ್ಟೋನ್ ರೂಪಗೊಳ್ಳಲು ಅನೇಕ ಕಾರಣಗಳಿವೆ:

  • ಮರುಕಳಿಸುವ ಮೂತ್ರದ ಸೋಂಕುಗಳು.
  • ಅತಿ ಕಡಿಮೆ ಪ್ರಮಾಣದಲ್ಲಿ ದ್ರವ ಆಹಾರಗಳ ಸೇವನೆ.
  • ಮೂತ್ರ ಸಾಗುವ ಹಾದಿಯಲ್ಲಿ ತಡೆ ಉಂಟಾಗುವುದು.
  • ಆಹಾರದೊಂದಿಗೆ ಅತಿಯಾಗಿ ಕ್ಯಾಲ್ಸಿಯಂ, ಕೆಂಪು ಮಾಂಸಾಹಾರಗಳು ವಿಟಮಿನ್ 'ಸಿ'ಗಳನ್ನು ಸೇವಿಸುವುದು.
  • ಡೈಯುರೆಟಿಕ್ಸ್ ಅಥವಾ ಕ್ಯಾಲ್ಸಿಯಂ ಆಧಾರಿತ ಅಂಟಾಸಿಡ್ ಔಷಧಿಗಳನ್ನು ತೆಗೆದುಕೊಳ್ಳುವುದು,
  • ಹೈಪರ್ಥೈರಾಯಿಸಮ್ನಂತಹ ಮೆಟಾಬಾಲಿಕ್ (ಜೀವಕೋಶ ರಚನೆಗಳ) ಅವ್ಯವಸ್ಥೆಗಳು.
  • ಸಂಧಿವಾತ ಮತ್ತು ಕರುಳಿನಲ್ಲಿ ಸತತವಾಗಿ ಉರಿ ಉಂಟಾಗುವುದು.
  • ಬೆನ್ನಿನ ಕೆಳ ಭಾಗದಲ್ಲಿ ಅಥವಾ ಹೊಟ್ಟೆಯ ಕೆಳ ಭಾಗದಲ್ಲಿ ಒಡನೆಯೇತೀವ್ರವಾದ ನೋವು ಉಂಟಾಗುವುದು ಮತ್ತು ನೋವು ತೊಡೆ ಸಂದಿನಲ್ಲಿ ಸಾಗಿದಂತಾಗುವುದು, ಕಲ್ಲು ಮೂತ್ರದ ಹಾದಿಯಲ್ಲಿ ಸಾಗಿದಾಗ ನೋವು ಕೆಲವು ನಿಮಿಷಗಳವರೆಗೆ ಅಥವಾ ಗಂಟೆಗಳವರೆಗೆ ಇರಬಹುದು ಮತ್ತು ನೋವು ಹೊರಟುಹೋದ ಬಳಿಕ ತುಂಬಾ ಆರಾಮವಾದಂತಾಗುತ್ತದೆ.
  • ನೋವಿನ ಜೊತೆಯಲ್ಲಿ ಹೊಟ್ಟೆ ತೊಳೆಸುವಿಕೆ ಮತ್ತು ವಾಂತಿ ಉಂಟಾಗುತ್ತದೆ. ಇದರ ಜೊತೆಯಲ್ಲಿ ಮೂತ್ರದ ಹಾದಿಯಲ್ಲಿ ರೋಗದ ಸೋಂಕು ಇದ್ದಲ್ಲಿ ಜ್ವರ, ಚಳಿ, ಬೆವರುವಿಕೆ ಮತ್ತು ಮೂತ್ರ ಮಾಡುವಾಗ ನೋವು ಉಂಟಾಗುತ್ತವೆ.
  • ಮೂತ್ರದೊಂದಿಗೆ ರಕ್ತವೂ ಕೂಡಾ ಸ್ರಾವವಾಗಿರುವ ಬಗ್ಗೆ ಪುರಾವೆಗಳಿರಬಹುದು.
  • ಮಾತ್ರ ಮಾಡುವಾಗ ಉರಿಯುವುದು, ಆಗಾಗ ಮೂತ್ರ ಮಾಡಬೇಕೆಂದು ಅನಿಸುವುದು ಮತ್ತು ದುರ್ವಾಸನೆಯಿಂದ ಕೂಡಿದ ಮೂತ್ರ ಇವೆಲ್ಲವೂ ಮೂತ್ರದ ಹಾದಿಯ ಸೋಂಕಿನ ಲಕ್ಷಣಗಳು.

ಕಿಡ್ನಿ ಸ್ಟೋನ್ಗಳು ಯಾರ ಮೇಲೆ ಪರಿಣಾಮ ಬೀರುತ್ತದೆ?

20 ರಿಂದ 40 ವರ್ಷ ಪ್ರಾಯಗಳ ನಡುವಿನ ಪುರುಷರು ಮಹಿಳೆಯರಿಗಿಂತ ಅಧಿಕವಾಗಿ (3 1) ಕಿಡ್ನಿ ಸ್ಟೋನ್ಗಳ ಪರಿಣಾಮಕ್ಕೆ ಈಡಾಗುತ್ತಾರೆ. ಬೇಸಿಗೆ ಕಾಲದಲ್ಲಿ, ಶರೀರದಲ್ಲಿ ನೀರಿನ ಅಂಶ ಕಡಿಮೆಯಾಗುವುದರಿಂದ (ಡಿಹೈಡ್ರೇಯೇಷನ್) ಸ್ಟೋನ್ ಗಳು ಉಂಟಾಗುತ್ತವೆ,

ಕಿಡ್ನಿ ಸ್ಟೋನ್ಗಳ ಬಗ್ಗೆ ಏಕೆ ಚಿಂತಿಸಬೇಕು?

ಕಿಡ್ನಿ ಸ್ಟೋನ್ ಸಂಬಂಧಿತ ನೋವನ್ನು ತಡೆಯಲು ಸಾಧ್ಯ ಇಲ್ಲ. ಸ್ಟೋನ್ ಗಳಿಂದಾಗಿ ಕಿಡ್ನಿಯ ವಿಫಲತೆ ಕೂಡಾ ಉಂಟಾಗಬಹುದು ಮತ್ತು ಇದು ಜೀವಕ್ಕೆ ಮಾರಕ.
ಕಿಡ್ನಿಯನ್ನು ತಡೆಗಟ್ಟುವ ಸ್ಫೋನ್ಗಳಿಂದ ನೋವು ಉಂಟಾಗುತ್ತದೆ. ತಡೆಯನ್ನು ತೆಗೆಯದಿದ್ದಲ್ಲಿ, ಕೆಲವು ದಿನಗಳಲ್ಲಿ ನೋವು ಕಡಿಮೆಯಾಗಿ ರೋಗಿಗೆ ಬಿಕ್ಕಟ್ಟುಪರಿಹಾರವಾಯಿತೆಂದು ದಾರಿತಪ್ಪಿಸಬಹುದು ಆದರೆ ನಿಜ ಹೇಳಬೇಕೆಂದರೆ, ತಡೆ ಹೊಂದಿರುವ ಕಿಡ್ನಿ ಮುಚ್ಚಲ್ಪಟ್ಟಿರುತ್ತವೆ. ಒಂದು ವೇಳೆ ಅವುಗಳಿಗೆ ಶುಶ್ರುಷೆ ಮಾಡದೆಯೇ ಹಾಗೆ ಬಿಟ್ಟಲ್ಲಿ, ಕಿಡ್ನಿಗೆ ಶಾಶ್ವತವಾಗಿ ಹಾನಿಯುಂಟಾಗುತ್ತದೆ.

ಕಿಡ್ನಿ ಸ್ಟೋನ್ಗಳನ್ನು ಯಾವ ರೀತಿಯಲ್ಲಿ ಪತ್ತೆ ಹಚ್ಚಬಹುದು?

ಒಂದು ಸಂಪೂರ್ಣವಾದ ವೈದ್ಯಕೀಯ ಪರೀಕ್ಷೆ, ಕ್ಷ ಕಿರಣಗಳು(X- Ray) ಅಥವಾ ಸೋನೋಗ್ರಾಮ್, ಡೈ ಇಂಜೆಕ್ಷನ್ಗಳು ಮತ್ತು ಅಲ್ಪಾಸೌಂಡ್ಪರೀಕ್ಷೆಗಳು ಕಿಡ್ನಿ ಸ್ಟೋನ್ಗಳನ್ನು ಪತ್ತೆ ಹಚ್ಚಲು ಸಹಾಯ ಮಾಡುತ್ತವೆ.

ಕಿಡ್ನಿ ಸ್ಟೋನ್ಗಳಿಗೆ ಯಾವ ರೀತಿಯಲ್ಲಿ ಚಿಕಿತ್ಸೆ ನೀಡಲಾಗುತ್ತದೆ  

ಹಲವು ಸಣ್ಣ ಸ್ಟೋನ್ಗಳು ಕೆಲವು ಗಂಟೆಗಳು ಅಥವಾ ದಿನಗಳಲ್ಲಿ ತಾವಾಗಿಯೇ ಹೊರ ಹೋಗುತ್ತವೆ. ಪ್ರಕ್ರಿಯೆಗೆ ನೆರವಾಗಲು ಸಾಕಷ್ಟು ದ್ರವ ಆಹಾರಗಳನ್ನು ಅಥವಾ ಪಾನೀಯಗಳನ್ನು ಸೇವಿಸಬೇಕು ಮತ್ತು ವೈದ್ಯರು ಶಿಫಾರಸು ಮಾಡಿರುವ ಸಂತುಲಿತ ಆಹಾರಗಳನ್ನು ಸೇವಿಸಬೇಕು,

ತಾವಾಗಿಯೇ ಹೊರ ಹೋಗಲು ಸಾಧ್ಯವಾಗದ ಸಣ್ಣ ಸ್ಟೋನ್ಗಳನ್ನು ಅತ್ಯಧಿಕ-ಶಕ್ತಿಯ ಶಾಕ್ ವೇವ್ಗಳ ಮೂಲಕ ಚಿಕಿತ್ಸೆಸಬಹುದು. ಚಿಕಿತ್ಸೆಯಲ್ಲಿ ಕಲ್ಲುಗಳನ್ನು ಒಡೆದು ಸಣ್ಣ ಸಣ್ಣ ಹರಳುಗಳನ್ನಾಗಿ ಮಾಡಲಾಗತ್ತದೆ ಮತ್ತು ಇವುಗಳು ಮೂತ್ರದೊಂದಿಗೆ ಸುಗಮವಾಗಿ ಹೊರ ಹಾಕಲ್ಪಡುತ್ತವೆ. ಸಾಮಾನ್ಯವಾಗಿ ದೊಡ್ಡ ಸ್ಟೋನ್ಗಳನ್ನು ತೆಗೆಯಲು ಮಾತ್ರವೇ ಶಸ್ತ್ರ ಚಿಕಿತ್ಸೆಯ ಅಗತ್ಯವಿರುತ್ತದೆ.

 ಕಿಡ್ನಿ ಸ್ಟೋನ್ಗಳು ಮತ್ತೆ ರೂಪುಗೊಳ್ಳದಂತೆ ತಡೆಗಟ್ಟಲು ನೀವು ಹೇಗೆ ನೆರವಾಗಬಹುದು?

ಸುಮಾರು ಶೇಕಡಾ 50ರಷ್ಟು ಪ್ರಕರಣಗಳಲ್ಲಿ ಕಿಡ್ನಿ ಸ್ಟೋನ್ಗಳು ಪುನಃ ಉಂಟಾಗುತ್ತವೆ. ಒಂದು ವೇಳೆ ನಿಮಗೆ ಒಂದಕ್ಕಿಂತ ಹೆಚ್ಚು ಕಿಡ್ನಿ ಸ್ಟೋನ್ಗಳು ಉಂಟಾಗಿದ್ದಲ್ಲಿ, ಹೆಚ್ಚು ಕಿಡ್ನಿ ಸ್ಟೋನ್ ರೂಪುಗೊಳ್ಳುವ ಸಾಧ್ಯತೆಯಿದೆ. ಆದ್ದರಿಂದ ಅದು ಆಗದಂತೆ ತಡೆಗಟ್ಟುವುದು ಅತ್ಯಂತ ಮುಖ್ಯ. ಇವುಗಳು ಉಂಟಾಗದಂತೆ ತಡೆಗಟ್ಟಲು ನಿಮ್ಮ ವೈದ್ಯರ ಸಲಹೆ ಪಡೆದು ಬೇಕಾದ ಕ್ರಮವನ್ನು ಕೈಗೊಳ್ಳಬಹುದು.
  • ಹಗಲಿನ ವೇಳೆಯಲ್ಲಿ ಪ್ರತಿ ಗಂಟೆಗೊಮ್ಮೆ ಸಾಕಷ್ಟು ನೀರು ಕುಡಿಯಬೇಕು. ರಾತ್ರಿಯ ವೇಳೆ ಎಚ್ಚರವಾದಾಗಲೆಲ್ಲಾ ಸಾಕಷ್ಟು ನೀರು ಕುಡಿಯಬೇಕು. ದಿನವೊಂದಕ್ಕೆ ಕನಿಷ್ಠ 3 ಲೀಟರಿನಷ್ಟು ನೀರು ಕುಡಿಯಬೇಕು.
  • ಅತಿಯಾದ ಪ್ರಮಾಣದಲ್ಲಿ ವಿಟಮಿನ್ ಸಿ (ದಿನವೊಂದಕ್ಕೆ 4 ಗ್ರಾಮ್ ಅಥವಾ ಅದಕ್ಕಿಂತ ಹೆಚ್ಚು ಸೇವಿಸಬಾರದು ಮತ್ತು ಕ್ಯಾಲ್ಸಿಯಂ ಆಧಾರಿತ ಆಂಟಾಸಿಡ್ ಗಳನ್ನು ಅತಿಯಾಗಿ ಸೇವಿಸಬಾರದು.
  • ಒಂದು ವೇಳೆ ನಿಮಗೆ ಈಗಾಗಲೇ ಕ್ಯಾಲ್ಸಿಯಂ ಸ್ಟೋನ್ಗಳು ಇದ್ದಲ್ಲಿ ಡೈರಿ ಉತ್ಪನ್ನಗಳು, ಚಹಾ, ಚಾಕೊಲೇಟ್, ಕಾಫಿ, ಪಾಲಕ್, ಇತ್ಯಾದಿಗಳನ್ನು ಸೇವಿಸಬಾರದು.
  • ತರಕಾರಿಗಳನ್ನು (ಮೂಲಂಗಿ, ಸೌತೆಕಾಯಿ), ಹಣ್ಣುಗಳನ್ನು (ಕಲ್ಲಂಗಡಿ ಹಣ್ಣು) ಮತ್ತು ಧವಸ-ಧಾನ್ಯಗಳನ್ನು (ಹಾರ್ಸ ಗ್ರಾಮ್ ಮತ್ತು ಬಾರಿ), ಆಗಾಗ್ಗೆ ಸೇವನೆ ಮಾಡುತ್ತಿರಬೇಕು.

ಮೇಲೆ ನೀಡಿರುವ ಅಂಶಗಳು ಕೇವಲ ಮಾಹಿತಿ ಮಾತ್ರ, ಪರಿಹಾರವಲ್ಲ . ಹೆಚ್ಚಿನ ಮಾಹಿತಿಗಾಗಿ ನಿಮ್ಮ ವೈದ್ಯರನ್ನು ಸಂಪರ್ಕಿಸಿ. ನುರಿತ ತಜ್ಞ ವೈದ್ಯರನ್ನು ಸಂಪರ್ಕಿಸಿ ನಿಮ್ಮ ಸಮಸ್ಯೆಗಳಿಗೆ ಸೂಕ್ತ ಚಿಕಿತ್ಸೆ ಪಡೆದುಕೊಳ್ಳಿ.  

Post a Comment

2 Comments

Comment is awaiting for approval