Ticker

6/recent/ticker-posts

ನಾನು ಎಂಬುದು ಸತ್ತರೆ ಯಾರಿಗೂ ಭಯಪಡಬೇಕಾಗಿಲ್ಲ - ನೀತಿ ಕಥೆಗಳು

ನಾನು ಎಂಬುದು ಸತ್ತರೆ ಯಾರಿಗೂ ಭಯಪಡಬೇಕಾಗಿಲ್ಲ - ನೀತಿ ಕಥೆಗಳು | Moral Stories in Kannada

ಒಂದು ಊರಿನಲ್ಲಿ ಒಬ್ಬ ಶ್ರೀಮಂತನಿದ್ದ. ಅವನು ಸಾವಿಗೆ ಹೆದರುತಿದ್ದನು. ತನ್ನ ಜೀವಕ್ಕೆ ಯಾವುದೇ ರೀತಿಯ ಅಪಾಯವಾಗಬಾರದು ಎಂದು ಸದಾ ಭಯಪಡುತ್ತಿದನು. ಆದ್ದರಿಂದ, ಅವನು ಒಂದು ಸುರಕ್ಷಿತವಾದ ಹೊಸ ಭವನವನ್ನು ನಿರ್ಮಿಸಿದನು. ಆ ಭವನಕ್ಕೆ ಒಂದೇ ಒಂದು ಪ್ರವೇಶ ದ್ವಾರವನ್ನು ನಿರ್ಮಿಸಿದನು. ಅದೇ ರೀತಿ ಆ ಭವನದಲ್ಲಿ ಯಾವುದೇ ಕಿಟಕಿಗಳಿರಲಿಲ್ಲ. ಆ ಒಂದು ದ್ವಾರಕ್ಕೆ ಏಳು ಮಂದಿ ಕಾವಲುಗಾರರನ್ನು ನೇಮಿಸಿದನು.

ಇದನ್ನು ಕೇಳಿ ಸ್ನೇಹಿತರೊಬ್ಬರು ಈ ಶ್ರೀಮಂತನನ್ನು ನೋಡಲು ಬಂದರು. ಮಹಲಿನ ಸುತ್ತಲೂ ನೋಡಿದ ನಂತರ ಇಬ್ಬರೂ ಪ್ರೇವೇಶ ದ್ವಾರದ ಬಳಿಗೆ ಬಂದರು.

ಈಗ ಸ್ನೇಹಿತ ಶ್ರೀಮಂತನನ್ನು ಕೇಳಿದ, “ಸ್ನೇಹಿತ! ಮಹಲು ಹೆಚ್ಚಿನ ಭದ್ರತಾ ರಚನೆಯನ್ನು ಹೊಂದಿದೆ. ನೀವು ತೃಪ್ತಿ ಹೊಂದಿದ್ದೀರಾ? ನೀವು ಇನ್ನು ಮುಂದೆ ಹೆದರುವುದಿಲ್ಲ, ಅಲ್ಲವೇ?

ಶ್ರೀಮಂತನು ಉತ್ತರಿಸಿದನು, "ನನಗೆ ಇನ್ನೂ ಭಯವಾಗಿದೆ. ಈ ಏಳು ಕಾವಲುಗಾರರು ನನಗೆ ನಂಬಿಗಸ್ತರಾಗಿ ಮತ್ತು ಎಚ್ಚರಿಕೆಯಿಂದ ನನ್ನನ್ನು ಕಾಪಾಡುತ್ತಾರೆಯೇ? ಇವರಲ್ಲಿ ಯಾರಾದರೂ ನನ್ನ ಮೇಲೆ ದಾಳಿ ಮಾಡಿದರೆ?  ಎಂಬ ಭಯವಿದೆ!’’

ಆಗ ಆ ಮಾರ್ಗವಾಗಿ ಹೋಗುತ್ತಿದ್ದ ದಾರಿಹೋಕನೊಬ್ಬ ಇವರು ಮಾತನಾಡುತ್ತಿದ್ದ ವಿಷಯನ್ನು ಕೇಳಿಸಿಕೊಂಡು,ಸಿರಿವಂತನನ್ನು ನೋಡಿ ನಗುತ್ತಾ ಹೇಳಿದ... “ಈ ಬಾಗಿಲನ್ನೂ ಸಹ ಮುಚ್ಚಿಬಿಡಿ , ಆಗ ನೀವು ಭಯಪಡಬೇಕಾಗಿಲ್ಲ!'' ಎಂದ..

ಆ ಬಾಗಿಲನ್ನೂ ಮುಚ್ಚಿದರೆ ನಾನು ಸಾಯುತ್ತೇನೆ ಎಂದನು ಶ್ರೀಮಂತ! 

ಅದಕ್ಕೆ ದಾರಿಹೋಕ, "ಹೌದು, ಅದು ಬೇಕು. ನಾನು ಸತ್ತರೆ, ಯಾರೂ ಭಯಪಡಬೇಕಾಗಿಲ್ಲ!" ಎಂದು ಹೇಳಿ ಹೊರತು ಹೋದನು. 

ಸಿರಿವಂತನಿಗೆ ಅವನು ಹೇಳಿದ ಮಾತಿನಲ್ಲಿ ಏನೋ ವಿಷಯವಿದೆ ಎನಿಸಿತು; ಆದರೆ ಅದು ಸ್ಪಷ್ಟವಾಗಿಲ್ಲ. 

ಗೆಳೆಯ ವಿವರಿಸಿದ. "ಸ್ನೇಹಿತ! ನಾನು, ನನ್ನದು, ನನ್ನಿಂದಲೇ ಎಲ್ಲಾ ಎಂಬ ಅಹಂಕಾರ ಇವುಗಳೇ ಎಲ್ಲ ಕಷ್ಟಗಳಿಗೂ ಕಾರಣ. ಇವುಗಳು ಸ್ವಾರ್ಥ ಮತ್ತು ಭಯವನ್ನು ಹುಟ್ಟುಹಾಕುತ್ತವೆ. 

ನಾವು ಗಳಿಸಿದ ಸಂಪತ್ತು ಮತ್ತು ಅದರಿಂದ ಬರುವ ಸೌಕರ್ಯಗಳನ್ನು ಅನುಭವಿಸಲಾಗದೆ ಸಾಯುತ್ತೇವೆ'' ಎಂಬಂತಹ ಆಲೋಚನೆಗಳು ನಿಮ್ಮಲ್ಲಿ ವೃಥಾ ಭಯವನ್ನು ಉಂಟುಮಾಡುತ್ತಿವೆ ಎಂದು ತಿಳಿಸಿದರು. ಆದ್ದರಿಂದ 'ನಾನು' ಎಂಬ ಭಾವವು ನಮ್ಮ ಮನದಲ್ಲಿ ಇದ್ದಾರೆ ಅದು ಅಳಿಯಬೇಕು. ಇದನ್ನೇ ಆ ದಾರಿಹೋಕ ನಾನು ಎಂಬುದು ಸತ್ತರೆ ಯಾರಿಗೂ ಭಯಪಡಬೇಕಾಗಿಲ್ಲ ಎಂದು ಹೇಳಿದ್ದಾರೆ ಎಂದು ವಿವರಿಸಿದರು.  

ಶ್ರೀಮಂತನಿಗೆ ಸತ್ಯ ಅರ್ಥವಾಯಿತು. ತನ್ನ ಅಜ್ಞಾನವನ್ನು ಅರಿತು ಪಶ್ಚಾತ್ತಾಪ ಪಟ್ಟನು.

ಮನುಷ್ಯನ ಮನಸಿನ್ನಲ್ಲಿ ಮೂಡುವ ನಾನು, ನನ್ನದು, ನನ್ನಿಂದಲೇ ಎಲ್ಲ ಎನ್ನುವ ಅಹಂಕಾರ ಅಳಿದರೆ ಮಾತ್ರ ಅವನು ನೆಮ್ಮದಿಯ ಜೀವನ ನಡೆಸಬಲ್ಲನು.  


Post a Comment

0 Comments