Ticker

6/recent/ticker-posts

Tiktok ಸಂಸ್ಥಾಪಕ ಜಾಂಗ್ ಯಿಮಿಂಗ್ ಜೀವನಚರಿತ್ರೆ | Zhang Yiming Biography

ಟಿಕ್‌ಟಾಕ್ ಸಂಸ್ಥಾಪಕ ಜಾಂಗ್ ಯಿಮಿಂಗ್ ಜೀವನಚರಿತ್ರೆ | Tiktok Founder Zhang Yiming Biography

1. ವಿಶ್ವದ ಯುವಜನತೆಯನ್ನು ಸೂರೆಗೊಂಡಿರುವ ಟಿಕ್ ಟಾಕ್ ಮಾಲೀಕ ಝಾಂಗ್ ಯಿಮಿಂಗ್ [Zhang Yiming]ಅವರು ಏಪ್ರಿಲ್ 1, 1983 ರಂದು ಚೀನಾದ ಫುಜಿಯಾನ್ [Fujian] ಪ್ರಾಂತ್ಯದಲ್ಲಿ ಜನಿಸಿದರು. ಇವರ ತಂದೆ ತಾಯಿ ಇಬ್ಬರೂ ಸರ್ಕಾರಿ ನೌಕರರು. ಝಾಂಗ್ ಯಿಮಿಂಗ್  ಒಬ್ಬನೇ  ಮಗ.

2. ಶಾಲೆಯನ್ನು ಮುಗಿಸಿದ ನಂತರ, ಅವರು ಟಿಯಾಂಜಿನ್‌ನ ನಂಕೈ ವಿಶ್ವವಿದ್ಯಾಲಯದಲ್ಲಿ [Nankai University, Tianjin] ಎಲೆಕ್ಟ್ರಾನಿಕ್ಸ್ ಎಂಜಿನಿಯರಿಂಗ್ ಮತ್ತು ಸಾಫ್ಟ್‌ವೇರ್ ಎಂಜಿನಿಯರಿಂಗ್ ಅಧ್ಯಯನವನ್ನು ಪ್ರಾರಂಭಿಸಿದರು. ಅಲ್ಲಿ ಓದುತ್ತಿರುವಾಗಲೇ ಭಾವಿ ಪತ್ನಿಯನ್ನೂ ಭೇಟಿಯಾದರು.

3. ಇಂಜಿನಿಯರಿಂಗ್ ಮುಗಿಸಿದ ತಕ್ಷಣ, ಅವರು ಕುಕ್ಸನ್ [Kuxun]ಎಂಬ ಟ್ರಾವೆಲ್ ವೆಬ್‌ಸೈಟ್‌ನಲ್ಲಿ ಕೆಲಸ ಪಡೆದರು. ಅವರು ಕಂಪನಿಗೆ ಸೇರಿದ 5 ನೇ ವ್ಯಕ್ತಿ ಮತ್ತು ಕಂಪನಿಯ ಮೊದಲ ಇಂಜಿನಿಯರ್.

4. ಯಿಮಿಂಗ್ ಕಂಪನಿಯಲ್ಲಿ ತಂತ್ರಜ್ಞಾನದಲ್ಲಿ ತೊಡಗಿಸಿಕೊಂಡರು ಮತ್ತು ಅವರ ಕೌಶಲ್ಯದಿಂದಾಗಿ ಒಂದು ವರ್ಷದೊಳಗೆ ತಾಂತ್ರಿಕ ನಿರ್ದೇಶಕರಾಗಿ ಬಡ್ತಿ ಪಡೆದರು. ಅದರ ನಂತರ, ಅವರು ವಿಶ್ವದ ಪ್ರಮುಖ ಕಂಪ್ಯೂಟರ್ ಮತ್ತು ಸಾಫ್ಟ್‌ವೇರ್ ಕಂಪನಿಯಾದ ಮೈಕ್ರೋಸಾಫ್ಟ್‌ನಲ್ಲಿ ಕೆಲಸ ಮಾಡಿದರು.

5. ಅವರಿಗೆ ಅಲ್ಲಿನ ಕಾರ್ಪೊರೇಟ್ ನಿಯಮಗಳು ಇಷ್ಟವಾಗಲಿಲ್ಲ. ಅಲ್ಲಿ ಸ್ವತಂತ್ರವಾಗಿ ಕಾರ್ಯನಿರ್ವಹಿಸಲು ಸಾಧ್ಯವಿಲ್ಲ ಎಂದು ಅರಿತ ಇಮಿಂಗ್ ಮೈಕ್ರೋಸಾಫ್ಟ್ ತೊರೆದರು. ನಂತರ  ಫ್ಯಾಂಫೌ [Fanfou] ಎಂಬ ಸ್ಟಾರ್ಟ್-ಅಪ್ ಕಂಪನಿ ಸೇರಿದರು. ಆದರೆ ಆ ಕಂಪನಿ ಕೆಲವೇ ದಿನಗಳಲ್ಲಿ ವಿಫಲವಾಯಿತು.

6. ಅದರ ನಂತರ 2009 ರಲ್ಲಿ, ಅವರು ಏನು ಮಾಡಬೇಕೆಂದು ತಿಳಿಯದೆ ಯೋಚಿಸುತ್ತಿದ್ದಾಗ,  ಅವರು ಮೊದಲು ಕೆಲಸ ಮಾಡಿದ ಕುಕ್ಸನ್ [Kuxun] ಕಂಪನಿಯನ್ನು ಎಕ್ಸ್‌ಪೀಡಿಯಾ  ಖರೀದಿಸಲಿದೆ ಎಂಬ ವಿಷಯ ತಿಳಿಯಿತು. ಯಿಮಿಂಗ್ ಅವರು ಕುಕ್ಸನ್ ಅವರ ರಿಯಲ್ ಎಸ್ಟೇಟ್ ಹುಡುಕಾಟ [real estate search business] ವ್ಯವಹಾರವನ್ನು ಮಾತ್ರ ಖರೀದಿಸಿ ತಮ್ಮ ಮೊದಲ ಕಂಪನಿ 99fang.com ಅನ್ನು ಪ್ರಾರಂಭಿಸಿದರು.

7.   ಆದರೆ ಆ ಕಂಪನಿ ನಷ್ಟ ಅನುಭವಿಸಿದ್ದರಿಂದ, ಮೂರೇ ವರ್ಷಗಳಲ್ಲಿ ಆ ಕಂಪನಿಯನ್ನು ಮುಚ್ಚಲಾಯಿತು.  ಆ ಸಮಯದಲ್ಲಿ  ಮೊಬೈಲ್, ಇಂಟರ್ ನೆಟ್ ಬಳಕೆ ಎಲ್ಲೆಲ್ಲೂ ಜೋರಾಗಿತ್ತು. ಹಾಗಾಗಿ ಅದನ್ನೇ ಆಧಾರವಾಗಿಟ್ಟುಕೊಂಡು ಹೊಸ ಉದ್ಯಮ ಆರಂಭಿಸಲು ಯೋಚಿಸಿದ್ದರು.

8. ಆಗ ವೆಬ್‌ಸೈಟ್‌ಗಳಲ್ಲಿ ಅನಗತ್ಯ ಜಾಹೀರಾತುಗಳು ಮತ್ತು ಅನಗತ್ಯ ಮಾಹಿತಿಯಂತಹ ಹಲವಾರು ಸಮಸ್ಯೆಗಳಿದ್ದವು. ಈ ಸಮಸ್ಯೆಗಳಿಲ್ಲದೆ ಜನರಿಗೆ ಬೇಕಾದುದನ್ನು ನೀಡುವ ವೆಬ್‌ಸೈಟ್ ಅನ್ನು ರಚಿಸಲು ಝಾಂಗ್ ಯಿಮಿಂಗ್ ಬಯಸಿದ್ದರು.

9. 2012 ರಲ್ಲಿ, ಅವರು ಕೃತಕ ಬುದ್ಧಿಮತ್ತೆ ಮತ್ತು ಅಲ್ಗಾರಿದಮ್‌ಗಳಂತಹ ತಂತ್ರಜ್ಞಾನಗಳ ಮೂಲಕ  ಜನರು ನಿರೀಕ್ಷಿಸುವ ರೀತಿಯಲ್ಲಿ ವಿಷಯಗಳನ್ನು ನೀಡುವ ಸಲುವಾಗಿ ಬೈಟೆಡಾನ್ಸ್ [ByteDance] ಕಂಪನಿಯ ಅಡಿಯಲ್ಲಿ ಟೌಟಿಯಾವೋ [Toutiao]ಎಂಬ  ನ್ಯೂಸ್ ಆಪ್ ಅನ್ನು ಪ್ರಾರಂಭಿಸಿದರು.

10. ಇದು ಕೇವಲ ಎರಡು ವರ್ಷಗಳಲ್ಲಿ 13 ಮಿಲಿಯನ್ ದೈನಂದಿನ ಬಳಕೆದಾರರನ್ನು ಗಳಿಸಿತು. ಆರಂಭದಲ್ಲಿ ಅವರ ಕಲ್ಪನೆಯನ್ನು ತಿರಸ್ಕರಿಸಿದವರೆಲ್ಲರೂ, ನಂತರ ಅವರ ಕಂಪನಿಯಲ್ಲಿ ಹೂಡಿಕೆ ಮಾಡಲು ಮುಂದಾದರು. ಸಿಕ್ವೊಯಾ ಕ್ಯಾಪಿಟಲ್, 2014 ರಲ್ಲಿ ಕಂಪನಿಯಲ್ಲಿ US $100 ಮಿಲಿಯನ್ ಹೂಡಿಕೆಯನ್ನು ಮಾಡಿತು.

11. ಚೀನಿಯರು ಸಾಮಾನ್ಯವಾಗಿ ತಮ್ಮ ವ್ಯವಹಾರವನ್ನು ಚೀನಾದೊಳಗೆ ಮಾತ್ರ ಮಾಡಲು ಯೋಚಿಸುತ್ತಾರೆ. ಆದರೆ ಯಿಮಿಂಗ್ ಪ್ರಪಂಚದಾದ್ಯಂತ ವ್ಯಾಪಾರವನ್ನು ವಿಸ್ತರಿಸಲು ಬಯಸಿದ್ದರು ಮತ್ತು ಅದನ್ನು ಸಾಧಿಸಿದರು.

12. ಸೆಪ್ಟೆಂಬರ್  2015 ರಲ್ಲಿ ಬಿಡುಗಡೆಯಾದ ಟಿಕ್‌ಟಾಕ್, ವೀಡಿಯೊ ಹಂಚಿಕೆ ಅಪ್ಲಿಕೇಶನ್, ಶಾಂಗ್ ಯಿಮಿಂಗ್ ಅವರನ್ನು ಜಾಗತಿಕ ಸೆಲೆಬ್ರಿಟಿಯನ್ನಾಗಿ ಮಾಡಿತು, ವಿಶ್ವದಾದ್ಯಂತ ಯುವ ಜನರನ್ನು ಆಕರ್ಷಿಸಿತು.

13. ByteDance ಒಂದು ವರ್ಷದ ನಂತರ Musical.ly ಅನ್ನು US$800 ಮಿಲಿಯನ್‌ಗೆ ಖರೀದಿಸಿತು ಮತ್ತು ಅದನ್ನು TikTok ಗೆ ಸಂಯೋಜಿಸಿತು. ಅಂದಿನಿಂದ, ಬೈಟ್ ಡ್ಯಾನ್ಸ್ ಕಂಪನಿಯ ಮೌಲ್ಯವು $75 ಶತಕೋಟಿಗೆ ಏರಿದೆ.

14. 2018 ರ ಅಂತ್ಯಕ್ಕೆ,ಬೈಟ್‌ಡ್ಯಾನ್ಸ್ ಅದರ ಮೊಬೈಲ್ ಅಪ್ಲಿಕೇಶನ್‌ಗಳಾದ್ಯಂತ ಒಂದು ಶತಕೋಟಿಗೂ ಹೆಚ್ಚು ಮಾಸಿಕ ಬಳಕೆದಾರರೊಂದಿಗೆ, US $75 ಶತಕೋಟಿ ಮೌಲ್ಯ ಹೊಂದುವ ಮೂಲಕ, ವಿಶ್ವದ ಅತ್ಯಂತ ಮೌಲ್ಯಯುತವಾದ ಖಾಸಗಿ ಸ್ಟಾರ್ಟ್‌ಅಪ್ ಆಗಿದ್ದ  Uber ಅನ್ನು ಮೀರಿಸಿತು. 

15. ಅದೇ ಸಮಯದಲ್ಲಿ, ಡೇಟಾ ಕಳ್ಳತನ ಮತ್ತು ರಾಷ್ಟ್ರೀಯ ಭದ್ರತೆಗೆ ಹಾನಿಯುಂಟುಮಾಡುವ ಆರೋಪದ ಕಾರಣ ರಾಜಕೀಯ ಒತ್ತಡದಿಂದಾಗಿ ಕೆಲವು ದೇಶಗಳಲ್ಲಿ ಟಿಕ್ ಟಾಕ್ ಅನ್ನು ನಿಷೇಧಿಸಲಾಯಿತು. ಆದರೆ ಪ್ರಸ್ತುತ ಜಗತ್ತಿನಾದ್ಯಂತ 100 ಕೋಟಿ ಜನ ಇದನ್ನು ಬಳಸುತ್ತಿದ್ದಾರೆ.

16. ಮೇ 2021 ರಲ್ಲಿ, ಝಾಂಗ್ ಅವರು ಸಿಇಒ ಸ್ಥಾನದಿಂದ ಕೆಳೆಗಿಳಿದು, ಲಿಯಾಂಗ್ ರುಬೊ ಅವರು ಹೊಸ ಸಿಇಒ ಆಗಿ ಆಯ್ಕೆಯಾದರು.  ಶಾಂಗ್ ಯಿಮಿಂಗ್ ಅವರ ಪ್ರಸ್ತುತ ನಿವ್ವಳ ಮೌಲ್ಯ $44 ಬಿಲಿಯನ್ ಆಗಿದೆ. ವಿಶ್ವದ ಶ್ರೀಮಂತರ ಪಟ್ಟಿಯಲ್ಲಿ ಅವರು 35 ನೇ ಸ್ಥಾನದಲ್ಲಿದ್ದಾರೆ! ಚೀನಾದ ಎರಡನೇ ಶ್ರೀಮಂತ ವ್ಯಕ್ತಿ ಕೂಡ!

17. ಫೋರ್ಬ್ಸ್ ತನ್ನ 2013 ಚೀನಾ 30 ಅಂಡರ್ 30 ಪಟ್ಟಿಯಲ್ಲಿ ಝಾಂಗ್ ಅವರನ್ನು ಹೆಸರಿಸಿತ್ತು. 2018 ರಲ್ಲಿ, ಫಾರ್ಚೂನ್ ನಿಯತಕಾಲಿಕದ 40 ವರ್ಷದೊಳಗಿನ 40 ಪಟ್ಟಿಯಲ್ಲಿ ಅವರನ್ನು ಸೇರಿಸಲಾಯಿತು. ಟೈಮ್ ನಿಯತಕಾಲಿಕದ 2019 ರ 100 ಅತ್ಯಂತ ಪ್ರಭಾವಶಾಲಿ ವ್ಯಕ್ತಿಗಳಲ್ಲಿ ಝಾಂಗ್ ಕೂಡ ಒಬ್ಬರಾಗಿದ್ದರು.

Post a Comment

0 Comments