Ticker

6/recent/ticker-posts

ರಿಚರ್ಡ್ ಬ್ರಾನ್ಸನ್ ಹಾಗು ತಮಿಳುನಾಡಿನ ನಡುವಿನ ರಕ್ತ ಸಂಬಂಧ


ರಿಚರ್ಡ್ ಬ್ರಾನ್ಸನ್ ಹಾಗು ತಮಿಳುನಾಡಿನ ನಡುವಿನ ರಕ್ತ ಸಂಬಂಧ - Richard Branson and Tamil Nadu Connection

ವಿಶ್ವದ ಖ್ಯಾತ ಬಿಸಿನೆಸ್ ಮ್ಯಾನ್ ಹಾಗು ಕೋಟ್ಯಾಧೀಶ್ವರರಲ್ಲಿ ಒಬ್ಬರಾದ ರಿಚರ್ಡ್ ಬ್ರಾನ್ಸನ್ 1950 ರಲ್ಲಿ ಲಂಡನ್ನಲ್ಲಿ ಜನಿಸಿದರು. ಅವರಿಗೆ ಪ್ರಸ್ತುತ 69 ವರ್ಷ. ಅವರ ಕಂಪನಿ ವರ್ಜಿನ್ ಗ್ರೂಪ್ ಟೆಲಿಕಾಂ, ಆಹಾರ, ವಿಮಾನಯಾನ ಮತ್ತು ಬಾಹ್ಯಾಕಾಶ ಪ್ರಯಾಣ ಸೇರಿದಂತೆ ವಿವಿಧ ಕ್ಷೇತ್ರಗಳಲ್ಲಿ ಕಾರ್ಯ ನಿರ್ವಹಿಸುತ್ತಿದೆ. 

ತಮ್ಮ ವರ್ಜಿನ್ ಅಟ್ಲಾಂಟಿಕ್ ವಿಮಾನ ಯಾನ ಸೇವೆಯು ಭಾರತದಲ್ಲಿ 'ಮುಂಬೈ - ಲಂಡನ್ ನಡುವೆ' ಆರಂಭವಾದ ಹಿನ್ನಲೆಯಲ್ಲಿ ಮುಂಬೈಗೆ ಆಗಮಿಸಿದ ರಿಚರ್ಡ್ ಬ್ರಾನ್ಸನ್ 'ಬಿಸಿನೆಸ್ ಐಸ್ ಎನ್ ಅಡ್ವೆಂಚರ್' ಎಂಬ ಕಾರ್ಯಕ್ರಮದಲ್ಲಿ ಭಾಗವಹಿಸಿ ಆನಂದ್ ಮಹಿಂದ್ರಾ ಅವರೊಂದಿಗೆ ಸಂವಾದ ನಡೆಸಿದರು. 

ವರ್ಜಿನ್ ಗ್ರೂಪ್ನ ಮಹತ್ವಾಕಾಂಕ್ಷೆಯ ಯೋಜನೆಗಳಲ್ಲೊಂದು ಹೈಪರ್‌ಲೂಪ್. ಈ ಯೋಜನೆಯನ್ನು ಭಾರತದಲ್ಲಿ ಮೊದಲ ಬಾರಿಗೆ 'ಮುಂಬೈ - ಪುಣೆ ' ಮಾರ್ಗದಲ್ಲಿ ರೂಪಿಸಲು ನಿರ್ಧರಿಸಲಾಗಿತ್ತು.  ಆದರೆ ಹೊಸದಾಗಿ ಮಹಾರಾಷ್ರದ್ದಲಿ ಆಳ್ವಿಕೆಗೆ ಬಂದಿರುವ ಉದ್ಧವ್ ಠಾಕ್ರೆ ನೇತೃತ್ವದ ಮಹಾರಾಷ್ಟ್ರ ಸರ್ಕಾರ ಬುಲೆಟ್ ರೈಲು ಮತ್ತು ಹೈಪರ್ ಲೂಪ್ ಯೋಜನೆಗಳನ್ನು ತ್ಯಜಿಸುವ ಹಾದಿಯಲ್ಲಿದೆ ಎಂದು ಹೇಳಲಾಗುತ್ತಿದೆ.

ಭಾರತಕ್ಕೆ ಆಗಮಿಸಿರುವ ರಿಚರ್ಡ್ ಬ್ರಾನ್ಸನ್ ಅವರು ಇಂದು ಮಹಾರಾಷ್ಟ್ರ ಮುಖ್ಯಮಂತ್ರಿ ಉದ್ಧವ್ ಠಾಕ್ರೆ ಅವರನ್ನು ಭೇಟಿಯಾಗುತ್ತಾರೆ. ಹಾಗೆಯೇ ಭಾರತದ ಹಲವು ಉದ್ಯಮಿಗಳನ್ನೂ ಭೇಟಿಯಾಗಲಿದ್ದಾರೆ.

ಭಾರತಕ್ಕೂ ತನಗೂ ಇರುವ ಸಂಬಂಧದ ಬಗ್ಗೆ ತನ್ನ  ಇನ್ಸ್ಟಾಗ್ರಾಮ್ ಪೋಸ್ಟ್ನಲ್ಲಿ ಹೇಳಿಕೊಂಡಿರುವ  ರಿಚರ್ಡ್ ಬ್ರಾನ್ಸನ್ '"ನನ್ನ ಹಿಂದಿನ ತಲೆಮಾರಿನವರು ಭಾರತದಲ್ಲಿ ವಾಸಿಸುತ್ತಿದ್ದರು ಎಂಬ ವಿಷಯ ನನಗೆ ತಿಳಿದಿತ್ತು. ಆದರೆ ನಮ್ಮ ಸಂಬಂಧಗಳು ಇಷ್ಟು ಪ್ರಭಲವಾಗಿದೆ ಎಂದು ನಾನು ಮನಗಂಡಿರಲಿಲ್ಲ. 1793 ರಿಂದ, ನಮ್ಮ ಪೂರ್ವಜರು ನಾಲ್ಕು ತಲೆಮಾರುಗಳಿಂದ ತಮಿಳುನಾಡಿನ ಕಡಲೂರಿನಲ್ಲಿ ವಾಸಿಸುತ್ತಿದ್ದರು. ನನ್ನ ಮುತ್ತಜ್ಜಿಯರಲ್ಲಿ ಒಬ್ಬರು ಭಾರತೀಯರಾಗಿದ್ದ 'ಏರಿಯಾ' ಎಂಬವರು ನನ್ನ ಮುತ್ತಜ್ಜನನ್ನು ಮದುವೆಯಾಗಿದ್ದರು." 

"ನಾನು ಭಾರತೀಯರನ್ನು ಭೇಟಿಯಾದಾಗಲೆಲ್ಲಾ, ಒಂದು ವೇಳೆ ನಾವಿಬ್ಬರು ಸಂಭಂದಿಕರಾಗಿದ್ದರು ಇರಬಹುದು ಎಂದು ತಮಾಷೆ ಮಾಡುತಿದ್ದೆ " ಎಂದು ಬ್ರಾನ್ಸನ್ ಹೇಳಿದ್ದಾರೆ.  

ರಿಚರ್ಡ್ ಬ್ರಾನ್ಸನ್ ಪೂರ್ವಜರಲ್ಲಿ ಒಬ್ಬರಾದ ಜಾನ್ ಎಡ್ವರ್ಡ್ 1793 ರಲ್ಲಿ ಮೊದಲ ಬಾರಿಗೆ ಮದ್ರಾಸ್‌ಗೆ ಬಂದರು. ಇಲ್ಲಿಂದ ಅವರ ಕುಟುಂಬ ಕಡಲೂರಿಗೆ ಸ್ಥಳಾಂತರಗೊಂಡಿತು. ಅವರ ಪೀಳಿಗೆಯ ಪುರುಷನು ತಮಿಳುನಾಡಿನ ಮಹಿಳೆಯನ್ನು ಮದುವೆಯಾಗಿರಬಹುದು ಎಂದು ಹೇಳಲಾಗುತ್ತಿದೆ. 

ರಿಚರ್ಡ್ ಬ್ರಾನ್ಸನ್ ಟಿವಿ ಕಾರ್ಯಕ್ರಮ  ಒಂದಕ್ಕಾಗಿ ತಮ್ಮ ಡಿಎನ್‌ಎ  ಅನ್ನು ಪರೀಕ್ಷೆ ಮಾಡಿದಾಗ ತಮ್ಮ ಡಿಎನ್‌ಎ ಭಾರತದ ತಮಿಳುನಾಡಿಗೆ ಸೇರಿದೆ ಎಂದು ತಿಳಿದು ಬಂದಿತ್ತು ಎಂಬುದು ಇಲ್ಲಿ ಗಮನಾರ್ಹ.

Post a Comment

0 Comments