Ticker

6/recent/ticker-posts

ಪವಮಾನ ಪವಮಾನ ಜಗದ ಪ್ರಾಣ | ಕನ್ನಡ ಭಕ್ತಿ ಗೀತೆಗಳು

ಪವಮಾನ ಪವಮಾನ ಜಗದ ಪ್ರಾಣ | ಕನ್ನಡ ಭಕ್ತಿ ಗೀತೆಗಳು [Pavamana Pavamana Jagada Prana Kannada Lyrics | Kannada Devotional Songs | Hanuman Devotional Songs]

ಪವಮಾನ...  ಪವಮಾನ... 

ಪವಮಾನ ಪವಮಾನ ಜಗದ ಪ್ರಾಣ..
ಪವಮಾನ ಜಗದ ಪ್ರಾಣ
ಸಂಕರ್ಷಣ ಭವ ಭಯಾರಣ್ಯ ದಹನ ...
ದಹನ ...

ಶ್ರವಣವೆ ಮೊದಲಾದ ನವ ವಿಧ ಭಕ್ತಿ
ತವಕದಿಂದ ಕೊಡು ಕವಿ ಜನ ಪ್ರಿಯ

ಪವಮಾನ ಪವಮಾನ
ಪವಮಾನ ಪವಮಾನ ಜಗದ ಪ್ರಾಣ..
ಸಂಕರ್ಷಣ ಭವಭಯಾರಣ್ಯ ದಹನ ...
ದಹನ ...

ಹೇಮ ಕಚುಟ ಉಪವೀತ ಧರಿಪ ಮಾರುತ ಕಾಮಾದಿ ವರ್ಗ ರಹಿತ..
 ಕಾಮಾದಿ ವರ್ಗ ರಹಿತ..
ಮಾಡಿ ಸರ್ವವ್ಯಾಪಿ ಸತತ ನಿರ್ಭೀತ ರಾಮಚಂದ್ರ ನಿಜದೂತ
ರಾಮಚಂದ್ರ ನಿಜದೂತ
ಯಾಮ ಯಾಮ ಕೆ ನಿನ್ನಾರಾಧಿಪುದಕೆ
ಕಾಮಿಪೆ ಎನಗಿದು ನೇಮಿಸಿ ಪ್ರತಿದಿನ

ಈ ಮನಸಿಗೆ ಸುಖ ಸೋಮವ ತೋರುತ
ಪಾಮರ ಮತಿಯನು ನೀ ಮಾಣಿಪುದು

ಪವಮಾನ ಪವಮಾನ
ಪವಮಾನ ಜಗದ ಪ್ರಾಣ..
ಸಂಕರ್ಷಣ ಭವಭಯಾರಣ್ಯ ದಹನ ...
ದಹನಾ ...

ವಜ್ರ ಶರೀರ ಗಂಭೀರ ಮುಕುಟದರ  ದುರ್ಜನವನ ಕುಠಾರ
ನಿರ್ಜರ ಮಣಿದಯಾ ಪಾರ
ವಾರ ಉದಾರ ಸಜ್ಜನರಘವ ಪರಿಹಾರ
ಸಜ್ಜನರಘ ಪರಿಹಾರ
ಅರ್ಜುನಗೊಲಿದಂದುಧ್ವಜವಾನಿಸಿ ನಿಂದು
ಮೂರ್ಜಗವರಿವಂತೆ ಗರ್ಜನೆ ಮಾಡಿದಿ

ಹೆಜ್ಜೆ ಹೆಜ್ಜೆಗೆ ನಿನ್ನ ಅಜ್ಜ ಪಾದ ಧೂಳಿ
ಮಾರ್ಜನದ ಭವ ವರ್ಜಿತನೆನಿಸೊ

ಪವಮಾನ ಪವಮಾನ
ಪವಮಾನ ಜಗದ ಪ್ರಾಣ..
ಸಂಕರ್ಷಣ ಭವಭಯಾರಣ್ಯ ದಹನ ...
ದಹನಾ ...

ಪ್ರಾಣಪಾನ ವ್ಯಾನೋದಾನ ಸಮಾನ
ಆನಂದ ಭಾರತಿ ರಮಣ
ಆನಂದ ಭಾರತಿ ರಮಣ...
ನೀನೆ ಶರ್ವಾದಿ ಗೀರ್ವಾಣಾದ್ಯಮರರಿಗೆ
ಜ್ಞಾನಧನ ಪಾಲಿಪ ವರೇಣ್ಯ
ಜ್ಞಾನಧನ ಪಾಲಿಪ ವರೇಣ್ಯ
ನಾನು ನಿರುತದಲಿ ಏನೇನೆಸಗಿದೆ
ಮಾನಸಾದಿ ಕರ್ಮ ನಿನಗೊಪ್ಪಿಸಿದೆನೊ

ಪ್ರಾಣನಾಥ ಸಿರಿ ವಿಜಯ ವಿಠಲನ
ವಿಠಲ....  ವಿಠಲ....  ವಿಠಲ....
ಪ್ರಾಣನಾಥ ಸಿರಿ ವಿಜಯ ವಿಠಲನ
ಕಾಣಿಸಿ ಕೊಡುವುದು ಭಾನುಪ್ರಕಾಶ

ಪವಮಾನ ಪವಮಾನ
ಪವಮಾನ ಜಗದ ಪ್ರಾಣ..
ಸಂಕರ್ಷಣ ಭವಭಯಾರಣ್ಯ ದಹನ ...
ದಹನಾ ...

ಶ್ರವಣವೆ ಮೊದಲಾದ ನವ ವಿಧ ಭಕ್ತಿ
ತವಕದಿಂದ ಕೊಡು ಕವಿ ಜನ ಪ್ರಿಯ

ಪವಮಾನ ಪವಮಾನ
ಪವಮಾನ ಜಗದ ಪ್ರಾಣ..
ಸಂಕರ್ಷಣ ಭವಭಯಾರಣ್ಯ ದಹನ ...
ದಹನ ...
ಪವಮಾನ..  ಪವಮಾನ.. ಪವಮಾನ

Post a Comment

0 Comments