Ticker

6/recent/ticker-posts

ಸೊಜುಗದ ಸೂಜು ಮಲ್ಲಿಗೆ | ಮಲೆ ಮಹದೇಶ್ವರ ಸ್ವಾಮಿ | ಕನ್ನಡ ಭಕ್ತಿ ಗೀತೆಗಳು

ಸೊಜುಗದ  ಸೂಜು  ಮಲ್ಲಿಗೆ | ಮಲೆ ಮಹದೇಶ್ವರ ಸ್ವಾಮಿ | ಕನ್ನಡ ಭಕ್ತಿ ಗೀತೆಗಳು [Sojugada Sooju Mallige Song Lyrics in Kannada | Devotional Song]



ಸೊಜುಗದ  ಸೂಜು  ಮಲ್ಲಿಗೆ  ಮಾದೇವ  ನಿಮ್ಮ 
ಮಂಡೆ ಮ್ಯಾಲೆ  ದುಂಡು  ಮಲ್ಲಿಗೆ ..
ಸೊಜುಗದ  ಸೂಜು  ಮಲ್ಲಿಗೆ  ಮಾದೇವ  ನಿಮ್ಮ 
ಮಂಡೆ ಮ್ಯಾಲೆ  ದುಂಡು  ಮಲ್ಲಿಗೆ ..

ಅಂದಾವರಿ ಮುಂದಾವರಿ ಮತ್ತೆ ತಾವರೆ ಪುಷ್ಪ 
ಚಂದಕ್ಕಿ ಮಾಲೆ ಬಿಲ್ಪತ್ರೆ 
ಮಾದೇವಾ ನಿಮ್ಗೆ ಚಂದಕ್ಕಿ ಮಾಲೆ ಬಿಲ್ಪತ್ರೆ
ಚಂದಕ್ಕಿ ಮಾಲೆ ಬಿಲ್ಪತ್ರೆ ತುಳಸಿ ದಳವ 
ಮಾದಪ್ಪನ   ಪೂಜೆಗೆ  ಬಂದು  ಮಾದೇವ  ನಿಮ್ಮ 
ಸೊಜುಗದ  ಸೂಜು  ಮಲ್ಲಿಗೆ  ಮಾದೇವ  ನಿಮ್ಮ 
ಮಂಡೆ ಮ್ಯಾಲೆ  ದುಂಡು  ಮಲ್ಲಿಗೆ .

ತಪ್ಪಾಲೆ ಬೆಳಗಿವ್ನಿ ತುಪ್ಪವಾ ಕಾಸಿವ್ನಿ   
ತಪ್ಪಾಲೆ ಬೆಳಗಿವ್ನಿ ತುಪ್ಪವಾ ಕಾಸಿವ್ನಿ 
ಕಿತ್ತಾಳೆ   ಹಣ್ಣು  ತಂದೀವ್ನಿ  ಮಾದೇವ ನಿಮ್ಗೆ
ಕಿತ್ತಾಳೆ   ಹಣ್ಣ  ತಂದೀವ್ನಿ ಮಾದಪ್ಪ 
ಕಿತ್ತಾಡಿ  ಬರುವ  ಪರಸೆಗೆ  ಮಾದೇವ  ನಿಮ್ಗೆ
ಹೆಚ್ಚಳಗಾರ  ಮಾದೇವ  ಮಾದೇವ  ನಿಮ್ಮ 
ಮಂಡೆ  ಮ್ಯಾಲೆ  ಮಂಡೆ  ಮ್ಯಾಲೆ  ದುಂಡು  ಮಲ್ಲಿಗೆ 
ಸೊಜುಗದ  ಸೂಜು  ಮಲ್ಲಿಗೆ  ಮಾದೇವ  ನಿಮ್ಮ 
ಮಂಡೆ ಮ್ಯಾಲೆ  ದುಂಡು  ಮಲ್ಲಿಗೆ .

ಉಚ್ಛೆಳ್ಳು ಹೂವಿನ್ ಹಾಂಗೆ  ಹೆಚ್ಚ್ಯಾವೋ ನಿಮ್ಮ ಪರುಸೆ
ಉಚ್ಛೆಳ್ಳು  ಹೂವಿನ್ ಹಾಂಗೆ  ಹೆಚ್ಚ್ಯಾವೋ ನಿಮ್ಮ ಪರುಸೆ
ಹೆಚ್ಚಳಗಾರ  ಮಾದೇವ ..
ಹೆಚ್ಚಳಗಾರ  ಮಾದಪ್ಪ  ಬರುವಾಗ 
ಹಟ್ಟೀ ಹಂಬಲವ  ಮರೇತ್ಯಾರೋ ಮಾದೇವ  ನಿಮ್ಮ 
ಮಂಡೆ  ಮ್ಯಾಲೆ  ಮಂಡೆ  ಮ್ಯಾಲೆ  ದುಂಡು  ಮಲ್ಲಿಗೆ 
ಸೊಜುಗದ  ಸೂಜು  ಮಲ್ಲಿಗೆ  ಮಾದೇವ  ನಿಮ್ಮ 
ಮಂಡೆ ಮ್ಯಾಲೆ  ದುಂಡು  ಮಲ್ಲಿಗೆ ...

ಬೆಟ್ ಹತ್ಕೊಂಡು ಹೋಗೋರ್ಗೆ  ಹಟ್ಟೀ  ಹಂಬಲವ್ಯಾಕ 
ಬೆಟ್ಟದ್  ಮಾದೇವ  ನೀವೇ  ಗತಿ  ಎಂದು  ಮಾದೇವ  ನೀವೇ ..
ಬೆಟ್ಟದ್  ಮಾದೇವ  ನೀವೇ  ಗತಿ  ಎಂದು ಅವರಿನ್ನೂ 
ಹಟ್ಟೀ ಹಂಬಲವ  ಮರೇತ್ಯಾರೋ ಮಾದೇವ  ನಿಮ್ಮ 

ಸೊಜುಗದ  ಸೂಜು  ಮಲ್ಲಿಗೆ  ಮಾದೇವ  ನಿಮ್ಮ 

ಮಂಡೆ ಮ್ಯಾಲೆ  ದುಂಡು  ಮಲ್ಲಿಗೆ ...

Post a Comment

0 Comments