Ticker

6/recent/ticker-posts

ಐದು ಬೆರಳು ಕೂಡಿ ಒಂದು ಮುಷ್ಠಿಯು ಸಾಹಿತ್ಯ

ಐದು ಬೆರಳು ಕೂಡಿ ಒಂದು ಮುಷ್ಠಿಯು ಸಾಹಿತ್ಯ | Aidu Beralu Koodi Lyrics in Kannada: ಐದು ಬೆರಳು ಕೂಡಿ ಒಂದು ಮುಷ್ಠಿಯು  ಕವಿ ಡಾ. ಎಚ್.ಎಸ್.ವೆಂಕಟೇಶಮೂರ್ತಿ ಬರೆದ ಕನ್ನಡ ದೇಶಭಕ್ತಿ ಗೀತೆ.

ಎಚ್.ಎಸ್.ವೆಂಕಟೇಶಮೂರ್ತಿ, ಕವಿತೆ, ನಾಟಕ, ಪ್ರಬಂಧ, ಕಾದಂಬರಿ, ಮಕ್ಕಳ ಸಾಹಿತ್ಯ, ಅನುವಾದ, ವಿಮರ್ಶೆ, ಮೊದಲಾದ ಪ್ರಕಾರಗಳಲ್ಲಿ ತಮ್ಮ ಕೊಡುಗೆಯನ್ನು ಕೊಟ್ಟು ಕನ್ನಡ ಸಾಹಿತ್ಯ ಕ್ಷೇತ್ರವನ್ನು , ಹಳೆಯ ಸಂಪ್ರದಾಯದಲ್ಲಿ ಕೃಷಿಮಾಡಿ, ಆಧುನಿಕ ಸಾಹಿತ್ಯದ ಕೃತಿಗಳನ್ನು ಸಾಹಿತ್ಯ ಪ್ರಿಯರಿಗೆ ಕೊಟ್ಟ ಮಹತ್ವದ ಲೇಖಕರಲ್ಲೊಬ್ಬರು.

ಶಿವಮೊಗ್ಗ ಜಿಲ್ಲೆ ಚನ್ನಗಿರಿ ತಾಲೂಕಿನ ಹೊದಿಗೆರೆ ಗ್ರಾಮದಲ್ಲಿ ನಾಗರತ್ನಮ್ಮ ಮತ್ತು ನಾರಾಯಣ ಭಟ್ಟ ದಂಪತಿಗಳಿಗೆ ಎಚ್.ಎಸ್.ವೆಂಕಟೇಶಮೂರ್ತಿ ಜನಿಸಿದರು. ಎಚ್.ಎಸ್.ವೆಂಕಟೇಶಮೂರ್ತಿಯವರು ನವ್ಯೋತ್ತರ ಬರಹಗಾರರು. 2020 ರ ಹೊತ್ತಿಗೆ, ಅವರು ಕನ್ನಡದಲ್ಲಿ 100 ಕ್ಕೂ ಹೆಚ್ಚು ಪುಸ್ತಕಗಳನ್ನು ಪ್ರಕಟಿಸಿದ್ದಾರೆ.

ಐದು ಬೆರಳು ಕೂಡಿ ಒಂದು ಮುಷ್ಠಿಯು ಹಾಡಿನ ಸಾಹಿತ್ಯವನ್ನು ಡಾ. ಎಚ್.ಎಸ್.ವೆಂಕಟೇಶಮೂರ್ತಿ ಬರೆದಿದ್ದು, ಸಿ.ಅಶ್ವಥ್ ಅವರ ಸಂಗೀತ ಸಂಯೋಜನೆಯಲ್ಲಿ ಕಿಕ್ಕೇರಿ ಕೃಷ್ಣಮೂರ್ತಿ, ರಮೇಶ್ ಚಂದ್ರ, ವೈಷ್ಣವರಾವ್, ಕೆ.ಎಸ್.ಸುರೇಖಾ, ಮಂಗಳಾ ರವಿ ಮತ್ತು ಬೃಂದಾ ಎಸ್.ರಾವ್ ಹಾಡಿದ್ದಾರೆ.

ಹಾಡು:  ಐದು ಬೆರಳು ಕೂಡಿ ಒಂದು ಮುಷ್ಠಿಯು

ಪ್ರಕಾರ: ಕನ್ನಡ ಭಾವಗೀತೆ 
ಭಾಷೆ: ಕನ್ನಡ
ಸಂಗೀತ: ಸಿ. ಅಶ್ವಥ್
ಸಾಹಿತ್ಯ: ಡಾ. ಎಚ್.ಎಸ್.ವೆಂಕಟೇಶಮೂರ್ತಿ
ಗಾಯನ: ಕಿಕ್ಕೇರಿ ಕೃಷ್ಣಮೂರ್ತಿ, ರಮೇಶ್ ಚಂದ್ರ

ಐದು ಬೆರಳು ಕೂಡಿ ಒಂದು ಮುಷ್ಠಿಯು ಸಾಹಿತ್ಯ | Aidu Beralu Koodi Lyrics in Kannada

ಐದು ಬೆರಳು ಕೂಡಿ ಒಂದು ಮುಷ್ಠಿಯು
ಹಲವು ಮಂದಿ ಸೇರಿ ಈ ಸಮಷ್ಠಿಯು

ಐದು ಬೆರಳು ಕೂಡಿ ಒಂದು ಮುಷ್ಠಿಯು
ಹಲವು ಮಂದಿ ಸೇರಿ ಈ ಸಮಷ್ಠಿಯು

ಬೇರೆ ಬೇರೆ ಒಕ್ಕಲು
ಒಂದೇ ತಾಯ ಮಕ್ಕಳು

ಬೇರೆ ಬೇರೆ ಒಕ್ಕಲು
ಒಂದೇ ತಾಯ ಮಕ್ಕಳು

ಕೂಡಿ ಹಾಡಿದಾಗ ಗೆಲುವು ಗೀತೆಗೆ
ಭರತಮಾತೆಗೆ ಭರತಮಾತೆಗೆ

ಕೂಡಿ ಹಾಡಿದಾಗ ಗೆಲುವು ಗೀತೆಗೆ
ಭರತಮಾತೆಗೆ ಭರತಮಾತೆಗೆ

ಮೊಳಗಲಿ ಮೊಳಗಲಿ ನಾಡಗೀತವು..
ಮೂಡಲಿ ಮೂಡಲಿ ಸುಪ್ರಭಾತವು..
ಮೊಳಗಲಿ ಮೊಳಗಲಿ ನಾಡಗೀತವು..
ಮೂಡಲಿ ಮೂಡಲಿ ಸುಪ್ರಭಾತವು..

ಹಿಮಾಲಯದ ನೆತ್ತಿಯಲ್ಲಿ
ಕಾಶ್ಮೀರದ ಭಿತ್ತಿಯಲ್ಲಿ
ಅಸ್ಸಾಮಿನ ಕಾಡಿನಲ್ಲಿ
ಐದು ನದಿಯ ನಾಡಿನಲ್ಲಿ

ಹಿಮಾಲಯದ ನೆತ್ತಿಯಲ್ಲಿ
ಕಾಶ್ಮೀರದ ಭಿತ್ತಿಯಲ್ಲಿ
ಅಸ್ಸಾಮಿನ ಕಾಡಿನಲ್ಲಿ
ಐದು ನದಿಯ ನಾಡಿನಲ್ಲಿ

ಹೊತ್ತಿ ಉರಿವ ಬೆಂಕಿ ಆರಿ ತಣ್ಣಗಾಗಲಿ
ಬಂಜರಲ್ಲಿ ಬೆಳೆದು ಹಚ್ಚಹಸಿರು ತೂಗಲಿ

ಹೊತ್ತಿ ಉರಿವ ಬೆಂಕಿ ಆರಿ ತಣ್ಣಗಾಗಲಿ
ಬಂಜರಲ್ಲಿ ಬೆಳೆದು ಹಚ್ಚಹಸಿರು ತೂಗಲಿ

ಗಂಗೆ ತಂಗಿ ಕಾವೇರಿಯು ತಬ್ಬಿಕೊಳ್ಳಲಿ
ಗಂಗೆ ತಂಗಿ ಕಾವೇರಿಯು ತಬ್ಬಿಕೊಳ್ಳಲಿ

ಮೊಳಗಲಿ ಮೊಳಗಲಿ ನಾಡಗೀತವು..
ಮೂಡಲಿ ಮೂಡಲಿ ಸುಪ್ರಭಾತವು..
ಮೊಳಗಲಿ ಮೊಳಗಲಿ ನಾಡಗೀತವು..
ಮೂಡಲಿ ಮೂಡಲಿ ಸುಪ್ರಭಾತವು..

ಲಡಾಕ ನೇಪ ಗಡಿಗಳಲ್ಲಿ
ಮಂತ್ರಾಲಯ ಗುಡಿಗಳಲ್ಲಿ
ಭತ್ತ ಗೋಧಿ ಬೆಳೆಯುವಲ್ಲಿ
ಪ್ರೀತಿಯು ಮೈ ತಳೆಯುವಲ್ಲಿ

ಲಡಾಕ ನೇಪ ಗಡಿಗಳಲ್ಲಿ
ಮಂತ್ರಾಲಯ ಗುಡಿಗಳಲ್ಲಿ
ಭತ್ತ ಗೋಧಿ ಬೆಳೆಯುವಲ್ಲಿ
ಪ್ರೀತಿಯು ಮೈ ತಳೆಯುವಲ್ಲಿ

ದುಡಿವ ಹಿಂದೂ ಮುಸಲ್ಮಾನರೊಂದುಗೂಡಲಿ
ಆರದಿರಲಿ ಪ್ರೀತಿ ದೀಪ ಕಣ್ಣಗೂಡಲಿ

ದುಡಿವ ಹಿಂದೂ ಮುಸಲ್ಮಾನರೊಂದುಗೂಡಲಿ
ಆರದಿರಲಿ ಪ್ರೀತಿ ದೀಪ ಕಣ್ಣಗೂಡಲಿ

ಎದೆಯ ಕೊಳಗಳನ್ನು ಅಶ್ರುಧಾರೆ ತೊಳೆಯಲಿ
ಎದೆಯ ಕೊಳಗಳನ್ನು ಅಶ್ರುಧಾರೆ ತೊಳೆಯಲಿ

ಮೊಳಗಲಿ ಮೊಳಗಲಿ ನಾಡಗೀತವು..
ಮೂಡಲಿ ಮೂಡಲಿ ಸುಪ್ರಭಾತವು..
ಮೊಳಗಲಿ ಮೊಳಗಲಿ ನಾಡಗೀತವು..
ಮೂಡಲಿ ಮೂಡಲಿ ಸುಪ್ರಭಾತವು..

ಐದು ಬೆರಳು ಕೂಡಿ ಒಂದು ಮುಷ್ಠಿಯು
ಹಲವು ಮಂದಿ ಸೇರಿ ಈ ಸಮಷ್ಠಿಯು

ಐದು ಬೆರಳು ಕೂಡಿ ಒಂದು ಮುಷ್ಠಿಯು
ಹಲವು ಮಂದಿ ಸೇರಿ ಈ ಸಮಷ್ಠಿಯು

ಬೇರೆ ಬೇರೆ ಒಕ್ಕಲು
ಒಂದೇ ತಾಯ ಮಕ್ಕಳು

ಬೇರೆ ಬೇರೆ ಒಕ್ಕಲು
ಒಂದೇ ತಾಯ ಮಕ್ಕಳು

ಕೂಡಿ ಹಾಡಿದಾಗ ಗೆಲುವು ಗೀತೆಗೆ
ಭರತಮಾತೆಗೆ ಭರತಮಾತೆಗೆ

ಕೂಡಿ ಹಾಡಿದಾಗ ಗೆಲುವು ಗೀತೆಗೆ
ಭರತಮಾತೆಗೆ ಭರತಮಾತೆಗೆ

ಮೊಳಗಲಿ ಮೊಳಗಲಿ ನಾಡಗೀತವು..
ಮೂಡಲಿ ಮೂಡಲಿ ಸುಪ್ರಭಾತವು..
ಮೊಳಗಲಿ ಮೊಳಗಲಿ ನಾಡಗೀತವು..
ಮೂಡಲಿ ಮೂಡಲಿ ಸುಪ್ರಭಾತವು..
ಮೊಳಗಲಿ ಮೊಳಗಲಿ ನಾಡಗೀತವು..
ಮೂಡಲಿ ಮೂಡಲಿ ಸುಪ್ರಭಾತವು..

Post a Comment

0 Comments