Ticker

6/recent/ticker-posts

ಕುಂತ್ರೆ ನಿಂತ್ರೆ ಅವ್ನ್ದೆ ಧ್ಯಾನ | ಕನ್ನಡ ಜಾನಪದ ಗೀತೆಗಳು #17

ಕುಂತ್ರೆ ನಿಂತ್ರೆ ಅವ್ನ್ದೆ ಧ್ಯಾನ | ಕನ್ನಡ ಜಾನಪದ ಗೀತೆಗಳು  | Kuntre Nintre Avnde Dhyana Lyrics in Kannada: ಜಾನಪದ ಗೀತೆಗಳು ಸಾಮಾನ್ಯ ಜನರು ರಚಿಸಿದ ಹಾಡುಗಳು ಆದರೆ ಅವುಗಳಲ್ಲಿ ಅಸಾಧಾರಣ ಭಾವನೆ ಮತ್ತು ಭಕ್ತಿ ಇದೆ. ಅವರು ಎಲ್ಲಾ ರೀತಿಯ ಭಾವನೆಗಳು, ಸನ್ನಿವೇಶಗಳು ಮತ್ತು ಆಚರಣೆಗಳಿಗೆ ಹಾಡುಗಳನ್ನು ರಚಿಸಿದ್ದಾರೆ. ಈ ಜಾನಪದ ಹಾಡುಗಳನ್ನು ಪೀಳಿಗೆಯಿಂದ ಪೀಳಿಗೆಗೆ ರವಾನಿಸಲಾಗಿದೆ. 

ಕುಂತ್ರೆ ನಿಂತ್ರೆ ಅವ್ನ್ದೆ ಧ್ಯಾನ ಸಾಹಿತ್ಯ

ಪ್ರಕಾರ: ಜಾನಪದ
ಭಾಷೆ: ಕನ್ನಡ
ಸಂಗೀತ: ಜನಪದ
ಸಾಹಿತ್ಯ: ಜನಪದ
ಗಾಯನ:  ವಿವಿಧ ಗಾಯಕರು


ಕುಂತ್ರೆ ನಿಂತ್ರೆ ಅವ್ನ್ದೆ ಧ್ಯಾನ | ಕನ್ನಡ ಜಾನಪದ ಗೀತೆಗಳು  | Kuntre Nintre Avnde Dhyana Lyrics in Kannada:

ಕುಂತ್ರೆ ನಿಂತ್ರೆ
ಅವ್ನ್ದೆ ಧ್ಯಾನ
ಜೀವಕ್ಕಿಲ್ರಿ ಸಮಧಾನ
ಅವನಿಗೆ ಎಂಥ ಬಿಗುಮಾನ
ಅವ್ನೆ ನನ್ನ ಗೆಣೆಕಾರ

ಕುಂತ್ರೆ ನಿಂತ್ರೆ
ಅವ್ನ್ದೆ ಧ್ಯಾನ
ಜೀವಕ್ಕಿಲ್ರಿ ಸಮಧಾನ
ಅವನಿಗೆ ಎಂಥ ಬಿಗುಮಾನ
ಅವ್ನೆ ನನ್ನ ಗೆಣೆಕಾರ
ಅವ್ನೆ ನನ್ನ ಗೆಣೆಕಾರ

ಇಂದ್ರಲೋಕ್ದಲ್ ಇಲ್ಲ ಕಣ್ರಿ
ಚಂದ್ರಲೋಕ್ದಲ್ ಇಲ್ಲ ಕಣ್ರಿ

ಇಂದ್ರಲೋಕ್ದಲ್ ಇಲ್ಲ ಕಣ್ರಿ
ಚಂದ್ರಲೋಕ್ದಲ್ ಇಲ್ಲ ಕಣ್ರಿ
ಮೂರುಲೋಕ್ದಲ್ ಇಲ್ಲ ಕಣ್ರಿ
ಅವ್ನೆ ನನ್ನ ಗೆಣೆಕಾರ

ರೂಪ್ದಲ್ ಅವ್ನು ಚಂದ್ರ ಕಣ್ರಿ
ರೂಪ್ದಲ್ ಅವ್ನು ಇಂದ್ರ ಕಣ್ರಿ

ರೂಪ್ದಲ್ ಅವ್ನು ಚಂದ್ರ ಕಣ್ರಿ
ರೂಪ್ದಲ್ ಅವ್ನು ಇಂದ್ರ ಕಣ್ರಿ
ಕೇರಿಗೆಲ್ಲ ಒಬ್ಬ್ನೆ ಕಣ್ರಿ
ಅವ್ನೆ ನನ್ನ ಗೆಣೆಕಾರ

ಕುಂತ್ರೆ ನಿಂತ್ರೆ
ಅವ್ನ್ದೆ ಧ್ಯಾನ
ಜೀವಕ್ಕಿಲ್ರಿ ಸಮಧಾನ
ಅವನಿಗೆ ಎಂಥ ಬಿಗುಮಾನ
ಅವ್ನೆ ನನ್ನ ಗೆಣೆಕಾರ
ಅವ್ನೆ ನನ್ನ ಗೆಣೆಕಾರ

ಜಾತ್ರೆಲ್ ಅವನ ಕಂಡೆ ಕಣ್ರಿ
ಛತ್ರಿ ಮುಚ್ಚಿ ನಿಂತ ಕಣ್ರಿ
ಪಕ್ಕಕೆ ಬಂದು ನಿಂತ ಕಣ್ರಿ....
ಅವನೆ ನನ್ನ.. ಗೆಣೆಕಾರ
ನನ್ನ ಪಕ್ಕಕೆ ಬಂದು ನಿಂತ ಕಣ್ರಿ
ಅವನೆ ನನ್ನ.. ಗೆಣೆಕಾರ

ಮೊಲ್ಲೆ ಹೂವ ತಂದ ಕಣ್ರಿ
ತುರುಬಿನಲ್ಲಿ ಇಟ್ಟ ಕಣ್ರಿ
ಮೈಯೆಲ್ಲ ಜುಂ ಜುಂ ಅಂತ್ರಿ
ಅವನೆ ನನ್ನ.. ಗೆಣೆಕಾರ
ಅವನೆ ನನ್ನ.. ಗೆಣೆಕಾರ

ಕುಂತ್ರೆ ನಿಂತ್ರೆ
ಅವ್ನ್ದೆ ಧ್ಯಾನ
ಜೀವಕ್ಕಿಲ್ರಿ ಸಮಧಾನ
ಅವನಿಗೆ ಎಂಥ ಬಿಗುಮಾನ
ಅವ್ನೆ ನನ್ನ ಗೆಣೆಕಾರ
ಅವ್ನೆ ನನ್ನ ಗೆಣೆಕಾರ

ಚಾವಡಿಗ್ ಬಂದು ನಿಂತ ಕಣ್ರಿ
ತಾಳಿ ಚಿನ್ನ ತಂದ ಕಣ್ರಿ

ಚಾವಡಿಗ್ ಬಂದು ನಿಂತ ಕಣ್ರಿ
ತಾಳಿ ಚಿನ್ನ ತಂದ ಕಣ್ರಿ
ನಂಗು ಅವನ್ಗು ಮದುವೆ ಕಣ್ರಿ
ಅವನೆ ನನ್ನ.. ಯಜಮಾನ
ಅವನೆ ನನ್ನ.. ಯಜಮಾನ

ಕುಂತ್ರೆ ನಿಂತ್ರೆ
ಅವ್ನ್ದೆ ಧ್ಯಾನ
ಜೀವಕ್ಕಿಲ್ರಿ ಸಮಧಾನ
ಅವನಿಗೆ ಎಂಥ ಬಿಗುಮಾನ
ಅವ್ನೆ ನನ್ನ ಗೆಣೆಕಾರ
ಅವ್ನೆ ನನ್ನ ಗೆಣೆಕಾರ

ಕುಂತ್ರೆ ನಿಂತ್ರೆ
ಅವ್ನ್ದೆ ಧ್ಯಾನ
ಜೀವಕ್ಕಿಲ್ರಿ ಸಮಧಾನ
ಅವನಿಗೆ ಎಂಥ ಬಿಗುಮಾನ
ಅವ್ನೆ ನನ್ನ ಗೆಣೆಕಾರ
ಅವ್ನೆ ನನ್ನ ಗೆಣೆಕಾರ

Post a Comment

0 Comments