IPL Mega Auction 2025 - ಎಲ್ಲಿ ಮತ್ತು ಯಾವಾಗ? | TATA IPL Player Regulations 2025-2027
ಐಪಿಎಲ್ 18ನೇ ಸೀಸನ್ ೨೦೨೫ ಮಾರ್ಚ್ ಅಂತ್ಯದಲ್ಲಿ ಆರಂಭವಾಗಲಿದೆ. ಪ್ರತಿ 3 ವರ್ಷಗಳಿಗೊಮ್ಮೆ ಐಪಿಎಲ್ ಮೆಗಾ ಹರಾಜು ನಡೆಯುವುದರಿಂದ ಈ ಮೆಗಾ ಹರಾಜಿನ ನಿರೀಕ್ಷೆಗಳು ಹೆಚ್ಚಾಗುತ್ತಿವೆ.ನವೆಂಬರ್ 24 ಮತ್ತು 25ರಂದು ಎರಡು ದಿನಗಳ ಕಾಲ ಸೌದಿ ಅರೇಬಿಯಾದ ಜೆಡ್ಡಾದಲ್ಲಿ ಕ್ರಿಕೆಟಿಗರ ಮೆಗಾ ಹರಾಜು ನಡೆಯಲಿದೆ ಎಂದು ಭಾರತ ಕ್ರಿಕೆಟ್ ಮಂಡಳಿ ಅಧಿಕೃತವಾಗಿ ಪ್ರಕಟಿಸಿದೆ.
ಈ ಹರಾಜಿನಲ್ಲಿ ಒಟ್ಟು 1,574 ಆಟಗಾರರು ಭಾಗವಹಿಸುವ ನಿರೀಕ್ಷೆಯಿದೆ. ಇವರಲ್ಲಿ 1165 ಭಾರತೀಯರು ಮತ್ತು 409 ವಿದೇಶಿ ಆಟಗಾರರಿದ್ದಾರೆ. ಈ ಪಟ್ಟಿಯಲ್ಲಿ 320 ಕ್ಯಾಪ್ಡ್ ಆಟಗಾರರು, 1,224 ಅನ್‌ಕ್ಯಾಪ್ಡ್ ಆಟಗಾರರು ಮತ್ತು 30 ಅಸೋಸಿಯೇಟ್ ನೇಷನ್ಸ್ ಆಟಗಾರರು ಸೇರಿದ್ದಾರೆ.
ಈ ವರ್ಷದ ಹರಾಜಿನಲ್ಲಿ ಭಾರತದ ಇನ್ನೂ ಹಲವು ಸ್ಟಾರ್ ಆಟಗಾರರು ಹರಾಜಿನಲ್ಲಿ ಕಾಣಿಸಿಕೊಳ್ಳಲಿದ್ದಾರೆ. ರಿಷಬ್ ಪಂತ್, ಕೆಎಲ್ ರಾಹುಲ್, ಶ್ರೇಯಸ್ ಅಯ್ಯರ್, ಮೊಹಮ್ಮದ್ ಶಮಿ, ಅರ್ಷದೀಪ್ ಸಿಂಗ್, ಮೊಹಮ್ಮದ್ ಸಿರಾಜ್, ಇಶಾನ್ ಕಿಶನ್, ಭಾರತ ತಂಡದ ಪರ 48 ಮಂದಿ ಆಡುವ ಬ್ರ್ಯಾಂಡ್ ಮೌಲ್ಯದ ಆಟಗಾರರೂ ಹರಾಜಿನಲ್ಲಿ ಭಾಗವಹಿಸಲಿದ್ದಾರೆ.
ಒಟ್ಟು 1574 ಆಟಗಾರರು ಬಿಡ್‌ಗೆ ಮುಂದಾಗಿದ್ದಾರೆ ಆದರೆ ತಂಡಗಳಿಗೆ ಕೇವಲ 204 ಆಟಗಾರರ ಅಗತ್ಯವಿದೆ. ಈ ಮೆಗಾ ಹರಾಜಿಗಾಗಿ ಹಲವು ತಂಡಗಳು ತಿಂಗಳುಗಳಿಂದ ತಯಾರಿ ನಡೆಸುತ್ತಿವೆ. ಈ ಹರಾಜಿಗೆ ರಿಜಿಸ್ಟ್ರೇಷನ್ ನವೆಂಬರ್ ೪ ಕ್ಕೆ ಕೊನೆಗೊಂಡಿದೆ. ಪ್ರತಿ ಫ್ರಾಂಚೈಸಿಯು ಗರಿಷ್ಠ 25 ಆಟಗಾರರ ತಂಡವನ್ನು (ಆಯಾ ಉಳಿಸಿಕೊಂಡಿರುವ ಆಟಗಾರರನ್ನು ಒಳಗೊಂಡಂತೆ) ರೂಪಿಸಲು ಸಾಧ್ಯವಾಗುತ್ತದೆ ಮತ್ತು ಒಟ್ಟು 204 ಸ್ಲಾಟ್‌ಗಳು ಹರಾಜಿನಿಂದ ಪಡೆದುಕೊಳ್ಳಲಿವೆ.
ಅಕ್ಟೋಬರ್ ೩೧ ರಂದು ರಿಟೆಂಷನ್ ಪ್ರಕ್ರಿಯೆ ಮುಗಿದಿದ್ದು, ತಂಡಗಳು ತಮಗೆ ಬೇಕಾದ ಆಟಗಾರರನ್ನು ಉಳಿಸಿಕೊಂಡು, ಉಳಿದವರನ್ನು ಬಿಡುಗಡೆ ಮಾಡಿವೆ. ಬೆಂಗಳೂರಿನ ಆರ್ ಸಿ ಬಿ ತಂಡ ವಿರಾಟ್ ಕೋಲಿ [21 ಕೋಟಿ], ರಜತ್ ಪಟಿದಾರ್, ಯಶ ದಯಾಳ್ ಸೇರಿದಂತೆ ಮೂರು ಆಟರಗಾರರನ್ನು ಉಳಿಸಿಕೊಂಡಿದೆ. ಒಟ್ಟು ೩೭ ಕೋತಿ ಖರ್ಚು ಮಾಡಿ, ೮೩ ಕೋಟಿ ಉಳಿಸಿಕೊಂಡಿದೆ.
ಪಂಜಾಬ್ ಕಿಂಗ್ಸ್ ತಂಡ ಇಬ್ಬರು ಅನ್‌ಕ್ಯಾಪ್ಡ್ ಆಟಗಾರರಾದ ಶಶಾಂಕ್ ಸಿಂಗ್ ಮತ್ತು ಪ್ರಭಾಸಿಮ್ರಾನ್ ಸಿಂಗ್ ಉಳಿಸಿಕೊಂಡಿದ್ದು 9.5 ಕೋಟಿ ವೆಚ್ಚಮಾಡಿದೆ. 110.5 ಕೋಟಿ ಉಳಿಸಿಕೊಂಡಿರುವ ಪಂಜಾಬ್ ಅತಿ ಹೆಚ್ಚು ಪರ್ಸ್ ಹೊಂದಿರುವ ತಂಡವಾಗಿದ್ದು ಈ ಮೆಗಾ ಆಕ್ಷನ್ ನಲ್ಲಿ ಎಲ್ಲರ ಗಮನ ಸೆಳೆಯಲಿದೆ. ಅದೇ ರೀತಿ ರಾಜಸ್ಥಾನ್ ರಾಯಲ್ಸ್ ತಂಡವಿ ಅತಿ ಕಡಿಮೆ ಪರ್ಸ್ ಹೊಂದಿದೆ. ಆರು ಆಟಗಾರರನ್ನು ಉಳಿಸಿಕೊಂಡಿರುವ ರಾಜಸ್ಥಾನ್ 41 ಕೋಟಿ ರೂ ಹೊಂದಿದೆ. ಕೋಲ್ಕತ್ತಾ ನೈಟ್ ರೈಡರ್ಸ್ ಕೂಡ ಆರು ಆಟಗಾರರನ್ನು ಉಳಿಸಿಕೊಂಡಿದೆ ಆದರೆ ಅವರ ಬಳಿ 51 ಕೋಟಿ ರೂ. ಇದೆ.
ಕೆಲ ತಂಡಗಳು ತಮ್ಮ ತಮ್ಮಲ್ಲೇ ಅಣಕು ಹರಾಜು ನಡೆಸಿ ರಣತಂತ್ರ ರೂಪಿಸುತ್ತಿವೆ ಎನ್ನಲಾಗುತ್ತಿದೆ. ಇದರಿಂದಾಗಿ ಮೆಗಾ ಹರಾಜಿನಲ್ಲಿ ಯಾವ ತಂಡ ಯಾವ ಆಟಗಾರನನ್ನು ಖರೀದಿಸಲಿದೆ ಎಂಬ ನಿರೀಕ್ಷೆ ಹೆಚ್ಚುತ್ತಿದೆ. ಸತತ 2ನೇ ಬಾರಿಗೆ ವಿದೇಶದಲ್ಲಿ ಐಪಿಎಲ್ ಹರಾಜು ನಡೆಯಲಿದೆ. ಇದೆ ವರ್ಷ ಐಪಿಎಲ್ ಮಿನಿ ಆಕ್ಷನ್ ದುಬೈನಲ್ಲಿ ನಡೆದಿತ್ತು.
0 Comments
Comment is awaiting for approval