Ticker

6/recent/ticker-posts

ತಿರುಪತಿ ಹಾದೀಲಿ | ಕನ್ನಡ ಜಾನಪದ ಭಕ್ತಿ ಗೀತೆಗಳು #3


ತಿರುಪತಿ ಹಾದೀಲಿ | ಕನ್ನಡ ಜಾನಪದ ಭಕ್ತಿ ಗೀತೆಗಳು #3 [Tirupati Haadili Kannada Janapada Song Lyrics]


ತಿರುಪತಿ ಹಾದೀಲಿ ಕಲ್ಲಿಲ್ಲ ಮುಳ್ಳಿಲ್ಲ

ಸಾಸೀವೆ ತೋರ ಗಿಡವಿಲ್ಲ ತಿಮ್ಮಪ್ಗೆ
ಸೋಸಿ ಬಿತ್ತಪ್ಪ ಜವನಾವ

ತಿರುಪತಿ ಹಾದೀಲಿ ತಿರುತುಳಸಿ ಮರ ಹುಟ್ಟಿ
ಬೇಲೂರು ಬೇರು ಹರಿದಾವೊ ತಿಮ್ಮಪ್ನ
ಕಲ್ಯಾಣ್ಕೆ ಮಗ್ಗು ಸುರಿದಾವೋ

ಮೂಡಾಲ ತಿಮ್ಮಪ್ಪ ಮುತ್ತ ಮಾರುತ ಬಂದ
ಬೇಲೂರ ಚೆನ್ನ ಬೆಲೆ ಮಾಡೊ | ಕೊಟ್ಟರೆ
ಬೇಡವೆ ಗಿಡ್ಡಿ ಕೊರಳೀಗಿ

ಯಾಲಕ್ಕಿ ಹೂವಾಯ್ತು ಎಲೆಗೊಂದು ಕಾಯಾಯ್ತು
ಹೋಗೊ ದಾಸರಿಗೆ ಹೊರೆಯಾಯ್ತು | ತಿಮ್ಮಪ್ಗೆ
ಯಾಲಕ್ಕಿಯಾಯ್ತು ಮುಡುಪಿಗೆ

ಮೂಡ ಮುತ್ತಿನ ಗಿರಿಯೋ ಪಡುವ ಚಿನ್ನದ ಗಿರಿಯೊ
ಸೋಲಿಗರ ಸೀಮೆ ಸಿರಿ ಹರಿ | ವೆಂಕಟರಮಣ
ಸೋಲಿಸಬೇಡ ಗೆಲಿಸಯ್ಯ

ಬೆಟ್ಟ ಹತ್ತೂತ ಕಿರುಬೆವರು ಬೆವರೂತ
ನಡೆ ನಡೆಗೆ ಸಂಕ ನುಡಿ ಸೂತ | ತಿಮ್ಮಪ್ನ
ಬೆಟ್ಟ ಹತ್ತುವುದೆ ಬೆಳಗಾಯ್ತು

ಅಣ್ಣ ತಿಮ್ಮಪ್ಪಾನ ಹಣೆಯ ಮೇಲಿನ ನಾಮ
ಇಟ್ಟ ನೂಲೆಸಳು ತೆಗೆದ್ಹಂಗೆ | ತಿಮ್ಮಪ್ಪ
ನಾಮ ಧರಿಸೋದೆ ಬೆಳಗಾಯ್ತು
ವೆಂಕಟರಮಣನೆ ಎಳೆಯ ಗೋವಿಂದಾನೆ
ಸೂಳೇರಿಗೊಲಿಯೊ ಸುಗುಣಾನೆ | ತಿಮ್ಮಯ್ಯ
ಸೋಲಿಸಬೇಡ ಗೆಲಿಸಯ್ಯ

ಬೆಟ್ಟದ ಮೇಲೆ ನಮಗಿಷ್ಟಾರು ಯಾರುಂಟು
ಶ್ರೇಷ್ಠ ತಿಮ್ಮಪ್ಪ ನಮ್ಮಾವ | ಆದಾರೆ
ಇಷ್ಟಾರ್ಥವಿತ್ತು ಸಲಹೂವ

ತಿರುಪತೀ ಹಾದೀಲಿ ತಿದಿದ್ದಯ್ಯ ಹೋರಿಯ
ಗೆಜ್ಜೆಯ ಸರಪಾಣಿ ಧರಿಸಯ್ಯ  | ಮೂಡಾಣ
ದೊಡ್ಡನಿಗೆ ದಂಡ ನಡೆಸಯ್ಯ

ಸ್ವಾಮಿ ಮದುವೆ ಭೂಮಿ ಚಪ್ಪರ ಹೂಡಿ
ಗಾಳಿ ಪಂಜರದ ಗಳ ಬೀಸಿ | ತಿಮ್ಮಪ್ಪ
ಸ್ವಾಮಿ ನಿನ ಮದುವೆ ಶನಿವಾರ

ಬೆಟ್ಟಾದ ತಿಮ್ಮಪ್ಪ ಬೇಲೂರ ಚೆನ್ನೀಗ |
ನಾಗಮಂಗಲದ ನರಸಿಂಹ | ಇವರ್ಮೂವೋರು
ನಾಡೆ ಲೋಕಾದ ಚೆಲುವಾರು



Post a Comment

0 Comments