ಆರಾತಿ ಹೊರಟಾವು | ಕನ್ನಡ ಜಾನಪದ ಭಕ್ತಿ ಗೀತೆಗಳು #4 [Arathi Horatevu Kannada Janapada Song Lyrics]
ಹೆಡೇಲ್ಲಣ್ಣು ಬಂದು ಗಡಿಗೇಲುತ್ತಾ ಬಂದೋ
ಆರಾತಿ ಹೊರಟಾವು ಕೀರ್ತಿ ಉಳ್ಳೊಳ್ಗೆ
ಕೇರಿ ಕೇರೀಲಿ ಮೆರೆಯೋಳ್ಗೆ । ಮಾರಮ್ಗೆ
ಆರ್ತಿ ಹೊರಟಾವು ಐನೂರು
ಮಾರಿ ಗುಡಿ ಸುತ್ತ ನೂರೊಂದು
ಗಿಡ ಹುಟ್ಟಿ
ಕಳ್ಳ ಕೊಯ್ವಗ ಕಸಿಗಾಯಿ । ಮಾರವ್ವ
ಗಂಡ ಕುಯ್ವಾಗ ಗಜನಿಂಬೆ
ಅಮ್ಮನ ಗುಡಿಯ ಮುಂದೆ ಘಮ್ಮನ್ನೋದಿದು
ಏನೆ
ಗಂಡು ಭೂತಾಳೆ ಗಜನಿಂಬೆ । ಗಮನಕ್ಕೆ
ಹಿಂಡು ಮರವೆಲ್ಲ ಫಲ ಬಿಟ್ಟೋ
ತಾಯೇ ದೊಡ್ಡಮ್ಮ ಏನುಟ್ಟು ಮೆರೆದಾಳು
ಕಾಗುಟ್ಟು
ಕರೆದು ಮಸಕುಟ್ಟು । ಹಾರುವರ
ಹೂಬಣ್ಣನ್ನುಟ್ಟು,
ಮೆರೆದಾಳು
ಹಾರುವ ಕೇರಿಗೆ ಹೋದಾ ಳು ಮಾರಮ್ಮ
ನಾಗಳ
ಹುವ್ವ ಮಡಲಲ್ಲಿ । ಕಟ್ಕೊಂಡು
ನಾರೀರೊಂದೊಂದ
ಕೊಡುತಾಳೆ
ಚಂದ್ರಗಾವಿ
ಸೀರೆ ಚಂದ್ಕಾಣೆ ದೊಡ್ಡಮ್ಮ
ಚಂಡಿ ಕೂತವಳೇ ಹೊಳೆಯಲ್ಲಿ । ದೊಡ್ಡಮ್ಮ
ಗೊಂಡೆಯ
ಸೀರೆ ಮರೆಮಾಡೆ
ಗಡ್ಡೆಯಾ ಮೇಗ್ಲಿಂದ ಎದ್ದರೆ ದೊಡ್ಡಮ್ಮ
ಸೀರ್ಯಾದ ಮಗ್ಗ ತಂದೀವ್ನಿ । ಮುಡಿಬಾರೆ
ಜಾಜಿಯ ಮೊಗ್ಗು ಅರಳ್ಯಾವೆ
ಹೆಡೇಲ್ಲಣ್ಣು ಬಂದು ಗಡಿಗೇಲುತ್ತಾ ಬಂದೋ
ಇಟ್ಟಾಡಿ
ಬಂದು ಇಡಗಾಯಿ । ದೊಡ್ಡಮ್ಗೆ
ಒತ್ತಲಿಸಿ ಬಂದೋ ಕುರಿಗೋಳು
ರಾಗಿ ಮಾಡೋ ಬೀದಿ ರಯಾರ್ಕುರೋ ಬೀದಿ
ತಾಯಿ ದೊಡ್ಡಮ್ಮ ನಲಿದಾಡೋ । ಬೀದೀಲಿ
ಸಾಲಿಟ್ಟು
ಬಂದೋ ಮಡಲಕ್ಕಿ
ಕಬ್ಬಿಣದ
ಬಂಡೆ ಮೇಲೆ ಬರುವ ದೊಡ್ಡಮ್ಮನ
ಓಲೆ ಹೊಳೆದಾವೆ ಬಿಸಲೀಗೆ । ಕಬ್ಬಿಣದ
ಬಂಡಿ ಹೊಳೆದಾವೆ ಬೆಳಕೀಗೆ
ಒಕ್ಳ್ಹೂವ ಹಾಸ್ಯವಳೇ ಒಕ್ಳ್ಹೂವ ಹೊದ್ಧವಳೇ
ಪುತ್ರನ
ತೂಗಿ ಮಲಗಿಸಿ । ಮಾರಮ್ಮ
ಕಿತ್ತೂರ್ಗೆ ದಾಳಿ ಹೊರಾಟಳು
ಮಾರಮ್ಮ
ನುಟ್ಟವಳೆ ಮಂಜೀರದುಡುಗೆಯ
ಸುತ್ತ ಹಾಕುವಳೆ ಸರ್ಪಾಸ । ನಾಗವ್ವ
ಹೆಡೆಯ ತಿದವಳೆ ಸಿರಿ ಲಕ್ಷ್ಮಿ
ಗುಡ್ಡದ
ಪಾರಾಗ ಗುಲಗಂಜಿ ಬನದಾಗ
ಒಬ್ಬನೆ
ಹ್ಯಾಂಗಿದ್ದಿ ಧರಿಧೂಳ । ನಿನ್ನ ಮುಂದ
ಅಬ್ಬರಿಸಿ
ಗಂಗೆ ಹರಿಧಾಳ
0 Comments
Comment is awaiting for approval