ಶರಣು ಶರಣುವಯ್ಯ ಗಣನಾಯ್ಕ | ಕನ್ನಡ ಜಾನಪದ ಭಕ್ತಿ ಗೀತೆಗಳು #1 [Sharanu Sharanayya Gananayaka Lyrics In Kannada] :
ಶರಣು ಶರಣುವಯ್ಯ ಗಣನಾಯ್ಕ
ನಮ್ಮ ಕರುಣಾದಿಂದಲಿ ಕಾಯೋ ಗಣನಾಯ್ಕ
ಎಳ್ಳುಂಡೆ
ಜೇನುತುಪ್ಪ ಗಣನಾಯ್ಕ
ನಮಗೆ ವಿದ್ಯಾವ ಕಲಿಸಯ್ಯ ಗಣನಾಯ್ಕ ||
ಉಸಲಿ ಕಾಯಿ ಕಡುಬು ಗಣನಾಯ್ಕ
ನಿಮಗೆ ತಪ್ಪದೇ ಒಪ್ಪಿಸುವೆ ಗಣನಾಯ್ಕ
ಗೊನೆಮೇಗ್ಲ
ಬಾಳೆಹಣ್ಣು ಗಣನಾಯ್ಕ
ನಿಮಗೆ ಚಿಗುರೆಲೆ ಕಳಿ ಅಡ್ಕೆ ಗಣನಾಯ್ಕ
||
ಕೊಂಬೆಮೇಗ್ಲ
ನಿಂಬೆಹಣ್ಣು ಗಣನಾಯ್ಕ
ನಿಮಗೆ ಜೋಡಿ ಈಡುಗಾಯಿ ಗಣನಾಯ್ಕ
ಕರ್ಪೂರ
ಸಾಮ್ರಾಣಿ ಗಣನಾಯ್ಕ
ನಿಮಗೆ ಮರುಗ ಮಲ್ಲಿಗೆ ಜಾಜಿ
ಗಣನಾಯ್ಕ ||
ಮೂಷಿಕ ವಾಹನ ಗಣನಾಯ್ಕ
ನಮ್ಮ ಶಿವನ ಕುಮಾರನಯ್ಯ
ಗಣನಾಯ್ಕ
ಹೆಂಡ್ರಿಲ್ಲ
ಮಕ್ಕಳಿಲ್ಲ ಗಣನಾಯ್ಕ
ನಮ್ಮ ಧ್ಯಾನಕ್ಕೆ ಒಲಿಯಯ್ಯ ಗಣನಾಯ್ಕ ||
1 Comments
ಚಿಕ್ಕಂದಿನಿಂದಲೂ ಕೇಳಿ ಬೆಳೆದ ಆಪ್ತಗಾನ. ಕಾಳಿಂಗರಾಯರು ಪ್ರಸಿದ್ಧಿಗೆ ತಂದ ಹಾಡು. ಧನ್ಯವಾದ 🙏
ReplyDeleteComment is awaiting for approval