Ticker

6/recent/ticker-posts

Mumbai ರಸ್ತೆಯಲ್ಲಿ ಓವರ್‌ಟೇಕ್ ಮಾಡುವ ವಿಚಾರ - ಕೊಲೆಯಲ್ಲಿ ಅಂತ್ಯ

ಮುಂಬೈನ ರಸ್ತೆಯಲ್ಲಿ ಓವರ್‌ಟೇಕ್ ಮಾಡುವ ವಿಚಾರ ಕೊಲೆಯಲ್ಲಿ ಅಂತ್ಯ | Mumbai Overtaking Incident 

ಮುಂಬೈನ ರಸ್ತೆಯಲ್ಲಿ ಓವರ್‌ಟೇಕ್ ಮಾಡುವ ವಿವಾದ ಕೊಲೆಯಲ್ಲಿ ಅಂತ್ಯವಾಗಿದೆ. ಮುಂಬೈನ ಮಲಾಡುವಿನ [Dindoshi]  ದಿಂದೊಶಿಯಲ್ಲಿರುವ ಪುಷ್ಪಾ ಪಾರ್ಕ್ ಬಳಿ ಆಟೋ ಚಾಲಕ ಅವಿನಾಶ್ ಕದಮ್ [Avinash Kadam] ತನ್ನ ವಾಹನವನ್ನು ಚಾಲನೆ ಮಾಡುತ್ತಿದ್ದಾಗ ಮುಂದೆ ಹೋಗುತ್ತಿದ್ದ  ಒಂದು ಆಕ್ಟಿವಾ ಗಾಡಿಯನ್ನು ಹಿಂದಿಕ್ಕಲು ಪ್ರಯತ್ನಿಸಿದನು. 

ಆಕಾಶ್ ಮೇನ್ [Akash Maine] ಮತ್ತು ಅವರ ಪತ್ನಿ ತಮ್ಮ ಆಕ್ಟಿವಾ ಗಾಡಿಯಲ್ಲಿ ಕಾರ್ ಶೋರೂಮ್‌ನಿಂದ ಹಿಂತಿರುಗುತ್ತಿದ್ದರು. ರಸ್ತೆಯ ಕಿರಿದಾದ ಭಾಗದಲ್ಲಿ ಆಟೋ ಚಾಲಕ ಕದಮ್ ತನ್ನ ವಾಹನವನ್ನು ವೇಗವಾಗಿ ಚಲಾಯಿಸಿ ದ್ವಿಚಕ್ರ ವಾಹನವನ್ನು ಹಿಂದಿಕ್ಕಿದ್ದಾನೆ ಎಂದು ತೋರುತ್ತದೆ. ಆ ವೇಳೆ ಅಪಘಾತ ಸಂಭಿವಿಸುವ ಅವಕಾಶವಿದ್ದು ಅದೃಷ್ಟವಶಾತ್ ಅದು ತಪ್ಪಿದೆ. 


ಇದರಿಂದ ಆಟೋ ಚಾಲಕ ಕದಮ್  ಜೊತೆ ಆಕಾಶ್ ಈ ಬಗ್ಗೆ ವಾಗ್ವಾದ ನಡೆಸಿದ್ದಾನೆ. ಅವರ ನಡುವಿನ ವಾಗ್ವಾದವು ಮಾರಾಮಾರಿಯಲ್ಲಿ ಕೊನೆಗೊಂಡಿತು. ಆಕಾಶ್ ತನ್ನ ಬಳಿಯಿದ್ದ ಯಾವುದೋ ಆಯುಧದಿಂದ ಚಾಲಕ ಕದಮ್ ಗೆ ಹೊಡೆದು ಗಾಯಗೊಳಿಸಿದ್ದನಂತೆ. ಕೋಪಗೊಂಡ ಕದಮ್ ತನ್ನ ಸಹಚರರನ್ನು ಸ್ಥಳಕ್ಕೆ ಕರೆಯಿಸಿದ್ದಾನೆ.  ಕದಮ್ ಮತ್ತು ಅವನ ಸ್ನೇಹಿತರು ಆಕಾಶ್‌ನ ಮೇಲೆ ಹಲ್ಲೆ ಮಾಡಿದ್ದಾರೆ. ಆಕಾಶ್ ತನ್ನ ಪತ್ನಿಯೊಂದಿಗೆ ದ್ವಿಚಕ್ರ ವಾಹನದಲ್ಲಿ ಬಂದಿದ್ದ.

ಆಕಾಶ್ ಪತ್ನಿ ತನ್ನ ಗಂಡನನ್ನು ರಕ್ಷಿಸಲು ಹೋರಾಡಿದಳು. ಆಕಾಶ್ ನ ತಂದೆ-ತಾಯಿ [Dattatreya & Deepali] ಅವರ ಜೊತೆ ಇನ್ನೊಂದು ಆಟೋದಲ್ಲಿ ಬಂದಿದ್ದರು. ಅವರೂ ಆಟೋದಿಂದ ಇಳಿದು ಮಗನ ರಕ್ಷಣೆಗೆ ಹರಸಾಹಸ ಪಟ್ಟರು. ಆದರೆ ಕದಮ್ ಮತ್ತು ಅವನ 8 ಸ್ನೇಹಿತರು ಆಕಾಶ್‌ಗೆ ಹೊಡೆದು ಗಂಭೀರವಾಗಿ ಗಾಯಗೊಳಿಸಿದರು. ಕೂಡಲೇ ಪೋಷಕರು ಆತನನ್ನು ಆಸ್ಪತ್ರೆಗೆ [Balasaheb Thackeray Trauma Care Hospital] ದಾಖಲಿಸಿದ್ದಾರೆ. ಆದರೆ ಚಿಕಿತ್ಸೆ ಫಲಕಾರಿಯಾಗದೆ ಆಕಾಶ್ ಸಾವನ್ನಪ್ಪಿದ್ದಾನೆ. ಪೋಷಕರು ಮತ್ತು ಪತ್ನಿಯ ಎದುರೇ ಯುವಕನನ್ನು ಹೊಡೆದು ಕೊಂದಿರುವುದು ಆಘಾತಕಾರಿಯಾಗಿದೆ.

ಪೊಲೀಸರು ಆಟೋ ಚಾಲಕ ಕದಮ್ ಮತ್ತು ಆತನ 8 ಸ್ನೇಹಿತರ ವಿರುದ್ಧ ಕೊಲೆ ಪ್ರಕರಣ ದಾಖಲಿಸಿದ್ದಾರೆ. ಆಕಾಶ್ ನನ್ನು ರಕ್ಷಿಸಲು ಆತನ ತಾಯಿ ಥಳಿಸುವುದನ್ನು ನಿಲ್ಲಿಸುವಂತೆ ಬೇಡಿಕೊಂಡಳು. ಆದರೆ ಕದಮ್ ಮತ್ತು ಅವನ ಸಹಚರರು ಸತತವಾಗಿ ಆಕಾಶ್ ಮೇಲೆ ಹಲ್ಲೆ ಮಾಡಿದ್ದಾರೆ. ತಡೆಯಲು ಬಂದ ಆಕಾಶ್ ತಂದೆ ಮೇಲೂ ಹಲ್ಲೆ ನಡೆಸಿದ್ದಾರೆ. ಇದಕ್ಕೆ ಸಂಬಂಧಿಸಿದ ವಿಡಿಯೋವೊಂದು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ.


Post a Comment

0 Comments