Ticker

6/recent/ticker-posts

ತಿರುಪತಿ ಬ್ರಹ್ಮೋತ್ಸವ: ಭಕ್ತರಿಂದ 26 ಕೋಟಿ ರೂ ಕಾಣಿಕೆ ಮತ್ತು 8 ದಿನದಲ್ಲಿ 30 ಲಕ್ಷ ಲಾಡು ಮಾರಾಟ

ತಿರುಪತಿ ಬ್ರಹ್ಮೋತ್ಸವ: ಭಕ್ತರಿಂದ 26 ಕೋಟಿ ರೂ ಕಾಣಿಕೆ ಮತ್ತು 8 ದಿನದಲ್ಲಿ 30 ಲಕ್ಷ ಲಾಡು ಮಾರಾಟ. | Tirupati Brahmotsavam: Devotees donate Rs 26 crores

ತಿರುಮಲ, ತಿರುಪತಿ ಶ್ರೀ ವೆಂಕಟೇಶ್ವರ ಸ್ವಾಮಿ ದೇವಸ್ಥಾನದಲ್ಲಿ 9 ದಿನಗಳ ವಾರ್ಷಿಕ ಬ್ರಹ್ಮೋತ್ಸವ ಉತ್ಸವವು ನಿನ್ನೆ ಚಕ್ರತಾಳ್ವಾರ್ ತೀರ್ಥವಾರಿ ಎಂಬ `ಚಕ್ರ ಸ್ನಾನಂ ' ನೊಂದಿಗೆ ಮುಕ್ತಾಯವಾಯಿತು.

ವೈದಿಕ ಪಂಡಿತರು ಶಾಸ್ತ್ರಾನುಸಾರ ಚಕ್ರತಾಳ್ವಾರ್ ಗೆ ತಿರುಮಂಜನ ಮಾಡಿದರು. ನಂತರ ಪುಷ್ಕರಣಿಯಲ್ಲಿ ಪುಣ್ಯಸ್ನಾನ ಮಾಡಿದರು. ಒಂಬತ್ತು ದಿನಗಳ ಕಾಲ ಶ್ರೀ ವೆಂಕಟೇಶ್ವರ ಸ್ವಾಮಿ ವಿವಿಧ ವಾಹನಗಳಲ್ಲಿ ಭಕ್ತರಿಗೆ ದರ್ಶನ ನೀಡಿದರು. ತೀರ್ಥವಾರಿಯ ನಂತರ ಬ್ರಹ್ಮೋತ್ಸವದ ಧ್ವಜವನ್ನು ಕೆಳಗಿಳಿಸಲಾಯಿತು. 

ಹೀಗಿರುವಾಗ ಬ್ರಹ್ಮೋತ್ಸವದ ಮೊದಲ 8 ದಿನದಲ್ಲಿ 30 ಲಕ್ಷ ಲಡ್ಡುಗಳು ಮಾರಾಟವಾಗಿವೆ. ಅಲ್ಲದೇ  ಭಕ್ತರಿಂದ ಸುಮಾರು 26 ಕೋಟಿ ರೂಪಾಯಿ ದೇಣಿಗೆಯಾಗಿ ಬಂದಿದೆ ಎಂದು ದೇವಸ್ತಾನ ತಿಳಿಸಿದೆ.

ಬ್ರಹ್ಮೋತ್ಸವ ಆರಂಭವಾದ 4ರಿಂದ 12ರವರೆಗೆ ನಡೆದ ವಾಹನ ಸೇವೆಯಲ್ಲಿ 15 ಲಕ್ಷ ಭಕ್ತರು ಸ್ವಾಮಿಯ ದರ್ಶನ ಪಡೆದರು. ವಿಶೇಷವಾಗಿ ಕಳೆದ ೮ನೆ ತಾರೀಖು ರಾತ್ರಿ ಗರುಡ ವಾಹನದಲ್ಲಿ ಕಾಣಿಸಿಕೊಂಡ ಶ್ರೀ ಮಹಾವಿಷ್ಣುವಿನ ದರ್ಶನ ಪಡೆಯಲು 3.5 ಲಕ್ಷ ಭಕ್ತರು ತಿರುಮಲಕ್ಕೆ ಆಗಮಿಸಿದ್ದರು. ಅವರಿಗಾಗಿ 2,800 ಸರ್ಕಾರಿ ಬಸ್‌ಗಳನ್ನು ಆಂಧ್ರ ಪ್ರದೇಶ ಸರ್ಕಾರ ಒದಗಿಸಿತ್ತು ಎಂದು ವರದಿಯಾಗಿದೆ.

Post a Comment

0 Comments