Ticker

6/recent/ticker-posts

ಆಕಾಶ ಭೂಮಿಗಳ ಒಂದು ಮಾಡಿ ಸಾಹಿತ್ಯ

ಆಕಾಶ ಭೂಮಿಗಳ ಒಂದು ಮಾಡಿ ಸಾಹಿತ್ಯ | Aakaasha Bhoomigala Ondu Maadi Lyrics in Kannada

 ಹಾಡು: ಆಕಾಶ ಭೂಮಿಗಳ ಒಂದು ಮಾಡಿ
 ರಚನೆ: ಚಿ. ಉದಯಶಂಕರ್ 
 ಸಂಗೀತ: ಉಪೇಂದ್ರ ಕುಮಾರ್ 
 ಗಾಯಕ: ಡಾ. ರಾಜಕುಮಾರ್ 
 ಪ್ರಕಾರ: ಭಕ್ತಿ ಗೀತೆ 
 ಭಾಷೆ: ಕನ್ನಡ 


ಆಕಾಶ ಭೂಮಿಗಳ ಒಂದು ಮಾಡಿ ಸಾಹಿತ್ಯ | Aakaasha Bhoomigala Ondu Maadi Lyrics in Kannada

ಜಗದ ಶಕ್ತಿಗಳೆಲ್ಲ ಒಂದಾಗಿ ನಿಂತಿತೋ
ಜಗವೆಲ್ಲಾ ಆಕ್ರಮಿಸಿ ಈ ಆಕಾರ ಬಂದಿತೋ
ಕರಿಮುಗಿಲೆ ಕೇಶವೊ
ಸೂರ್ಯ-ಚಂದ್ರರೇ ನಯನಗಳೊ
ಸುಳಿವ ಮಿಂಚಿಗಳೆ ನಗೆಯೊ
ಸಿಡಿಲಿಗುಡುಗಳೆಲ್ಲ ನೀನಾಡುವ ನುಡಿಯೊ
ಮೇರುಪರ್ವತವೇ ನೀ ಹಿಡಿದ ಗದೆಯೊ
ಪಾದಕಮಲಗಳೆರಡು ಪಾತಾಳದಲ್ಲಿದೆಯೊ
ಅಂಜನಾಥನಯ್ಯ
ವೀರಾಂಜನೇಯ
ಮಾರುತಿರಾಯ
ಆಕಾಶ ಭೂಮಿಗಳ ಒಂದು ಮಾಡಿ
ನಿಂತ ನಿನ್ನ ಈ ಆಕಾರವೇನು
ಆಕಾಶ ಭೂಮಿಗಳ ಒಂದು ಮಾಡಿ
ನಿಂತ ನಿನ್ನ ಈ ಆಕಾರವೇನು
ಕಣ್ಣುಗಳ ಕೋರೈಸುವ ಕಾಂತಿ
ಚೆಲ್ಲುವ ಈ ಭವ್ಯ ರೂಪವೇನು
ಆಕಾಶ ಭೂಮಿಗಳ ಒಂದು ಮಾಡಿ
ನಿಂತ ನಿನ್ನ ಈ ಆಕಾರವೇನು
ನೋಡುವ ಬಗೆ ಹೇಗೆ ನಿನ್ನ
ಬೇಡುವ ಬಗೆ ಹೇಗೆ ನಿನ್ನ
ಪಾದ ಹುಡುಕಲಾರೆ
ಹನುಮ ಮೊಗವ ಕಾಣಲಾರೆ
ನೋಡುವ ಬಗೆ ಹೇಗೆ ನಿನ್ನ
ಬೇಡುವ ಬಗೆ ನಿನ್ನ
ಪಾದ ಹುಡುಕಲಾರೆ
ಹನುಮ ಮೊಗವ ಕಾಣಲಾರೆ
ಕೋಟಿ ಕಣ್ಣು ಸಾಲದಯ್ಯ
ನಿನ್ನ ರೂಪ ತುಂಬಿಕೊಳಲು
ಹೇಗೆ ನಿನ್ನ ಕಾಣಲಯ್ಯ ಹೀಗೆ ನಿಲ್ಲಲು
ನಿಂತ ರೀತಿಯೋ ತನುವ ಕಾಂತಿಯೋ
ಉರಿವ ಸೂರ್ಯ ಹಣತೆ ದೀಪದಂತೆ ಕಾಣುತಿರಲು ಹೀಗೆ
ಆಕಾಶ ಭೂಮಿಗಳ ಒಂದು ಮಾಡಿ
ನಿಂತ ನಿನ್ನ ಈ ಆಕಾರವೇನೋ
ನಿನ್ನ ಉಸಿರ ಬಿಸಿಗೆ ಹೆದರಿ
ನದಿಗಳಾವಿಯಾಗುತಿರಲು
ದಿವ್ಯ ರೂಪ ಕಂಡ ಗಿರಿಗಳೆಲ್ಲ ನಡುಗುತಿರಲು
ನಿನ್ನ ಉಸಿರ ಬಿಸಿಗೆ ಹೆದರಿ
ನದಿಗಳಾವಿಯಾಗುತಿರಲು
ದಿವ್ಯ ರೂಪ ಕಂಡ ಗಿರಿಗಳೆಲ್ಲ ನಡುಗುತಿರಲು
ನಿನ್ನ ಭಾರ ತಾಳೆನೆಂದು
ಭೂಮಿ ಕುಸಿದು ಹೋಗುತಿರಲು
ಎಲ್ಲಿ ನಾನು ನಿಲ್ಲಲಯ್ಯ ನಿನ್ನ ನೋಡಲು
ರೋಮ ರೋಮದಿ ರಾಮನಾಮವು
ರೋಮ ರೋಮದಿ ರಾಮನಾಮವು
ಶಂಖನಾದ ತಾಳವಾದ್ಯ
ಶಂಖನಾದ ತಾಳವಾದ್ಯ ದಶದಿಕ್ಕಲು ಮೊಳಗುತಿರಲು…
ಆಕಾಶ ಭೂಮಿಗಳ ಒಂದು ಮಾಡಿ
ನಿಂತ ನಿನ್ನ ಈ ಆಕಾರವೇನು
ಆಕಾಶ ಭೂಮಿಗಳ ಒಂದು ಮಾಡಿ
ನಿಂತ ನಿನ್ನ ಈ ಆಕಾರವೇನು
ಕಣ್ಣುಗಳ ಕೋರೈಸುವ ಕಾಂತಿ
ಚೆಲ್ಲುವ ಈ ಭವ್ಯ ರೂಪವೇನು
ಆಕಾಶ ಭೂಮಿಗಳ
ಒಂದು ಮಾಡಿ ನಿಂತ
ನಿನ್ನ ಈ ಆಕಾರವೇನು
ನಿನ್ನ ಈ ಆಕಾರವೇನು..
ನಿನ್ನ ಈ ಆಕಾರವೇನು..

Post a Comment

0 Comments