ಪ್ರೇಯಸಿ ಪ್ರೀತಿಸಿ ಮರೆತೆಯಾ - ಎಚ್.ಎಸ್.ವೆಂಕಟೇಶಮೂರ್ತಿ [H. S. Venkateshamurthy - Preyasi Preethisi Maretheya Lyrics]
ಪ್ರೇಯಸಿ ಪ್ರೀತಿಸಿ ಮರೆತೆಯಾ…
ಒಣಗಿಸಿ ಒಲವಿನ ಹೊರತೆಯಾ…
ಹೊರಳಿ ಹೊರಳಿ ನೀ ಸಾಗಿದೆ
ಮನವೋ ಮಸಣ ತಾನಾಗಿದೆ
ಪ್ರೇಯಸಿ ಪ್ರೀತಿಸಿ ಮರೆತೆಯಾ…
ಒಣಗಿಸಿ ಒಲವಿನ ಹೊರತೆಯಾ…
ಕಣ್ಣೀರ ಕೊಳದಲ್ಲಿ ಹುಟ್ಟಿರದ ದೋಣಿಯಲಿ
ಏಕಾಂಗಿ ಕುಳಿತಿರಲು, ನಕ್ಷತ್ರ ಅಳುತಿರಲು
ಕಣ್ಣೀರ ಕೊಳದಲ್ಲಿ ಹುಟ್ಟಿರದ ದೋಣಿಯಲಿ
ಏಕಾಂಗಿ ಕುಳಿತಿರಲು, ನಕ್ಷತ್ರ ಅಳುತಿರಲು
ಇರುಳಿನ ಗಾಳಿ ನರಳಿ
ಗಾನದ ಗಾಯಕೆ ಮಾಯದ ನೋವಿದೆ
ಗಾನದ ಗಾಯಕೆ ಮಾಯದ ನೋವಿದೆ
ಪ್ರೀತಿಯ ಹೂವಿಗೆ ಆಳದ ಅಳಲಿದೆ
ಪ್ರೇಯಸಿ ಪ್ರೀತಿಸಿ ಮರೆತೆಯಾ…
ಒಣಗಿಸಿ ಒಲವಿನ ಹೊರತೆಯಾ…
ಕಾರಿರುಳ ಕಾಡಿನಲಿ ಗುರಿಯಿರದ ಜಾಡಿನಲಿ
ಏಕಾಂಗಿ ಅಲೆದಿರಲು, ಬಿರುಗಾಳಿ ಮೊರೆದಿರಲು
ಕಾರಿರುಳ ಕಾಡಿನಲಿ ಗುರಿಯಿರದ ಜಾಡಿನಲಿ
ಏಕಾಂಗಿ ಅಲೆದಿರಲು, ಬಿರುಗಾಳಿ ಮೊರೆದಿರಲು
ಕರುಳಿನ ಕಾತರ ಕೆರಳಿ
ವಿರಹದ ದಳ್ಳುರಿ ದೇಹವ ದಹಿಸಿದೆ
ವಿರಹದ ದಳ್ಳುರಿ ದೇಹವ ದಹಿಸಿದೆ
ಕುದಿದಿದೆ ಎದೆಗೋಳ ಬೇಗೆಯ ಸಹಿಸದೆ
ಪ್ರೇಯಸಿ ಪ್ರೀತಿಸಿ ಮರೆತೆಯಾ…
ಒಣಗಿಸಿ ಒಲವಿನ ಹೊರತೆಯಾ…
ಹೊರಳಿ ಹೊರಳಿ ನೀ ಸಾಗಿದೆ
ಮನವೋ ಮಸಣ ತಾನಾಗಿದೆ
ಪ್ರೇಯಸಿ ಪ್ರೀತಿಸಿ ಮರೆತೆಯಾ
0 Comments
Comment is awaiting for approval