Ticker

6/recent/ticker-posts

ಬಯಸಿದೆ ನಿನ್ನನು ಭಾವದ ಮೇಳಕೆ - ಎಚ್.ಎಸ್.ವೆಂಕಟೇಶಮೂರ್ತಿ

ಬಯಸಿದೆ ನಿನ್ನನು ಭಾವದ ಮೇಳಕೆ - ಎಚ್.ಎಸ್.ವೆಂಕಟೇಶಮೂರ್ತಿ [H. S. Venkateshamurthy - Bayaside Ninnanu Lyrics in Kannada]













ಬಯಸಿದೆ ನಿನ್ನನು ಭಾವದ ಮೇಳಕೆ
ಮಿಡಿದಿದೆ ಎದೆಯಿದು ಯಾವುದೋ ತಾಳಕೆ
ಬಯಸಿದೆ ನಿನ್ನನು ಭಾವದ ಮೇಳಕೆ
ಮಿಡಿದಿದೆ ಎದೆಯಿದು ಯಾವುದೋ ತಾಳಕೆ

ನೆರಳಿಳಿದಾ ದಾರಿಯಲಿ ಜೀವದ ಬಂಡಿ ಸಾಗಿದೆ
ಮರಮರದ ಕರೆಯಿಂದ ಬಣ್ಣದ ಹೂವು ತೂಗಿದೆ
ನೆರಳಿಳಿದಾ ದಾರಿಯಲಿ ಜೀವದ ಬಂಡಿ ಸಾಗಿದೆ
ಮರಮರದ ಕರೆಯಿಂದ ಬಣ್ಣದ ಹೂವು ತೂಗಿದೆ

ಆ ಹೂವ ಮಕರಂದ ನಿನ್ನ ತುಟಿಯ ಸೇರಿ
ನೀ ಕೊಟ್ಟ ಚುಂಬನಕೆ ಸಿಹಿ ಜೇನ ಸವಿ ಇರಲು

ಬಯಸಿದೆ ನಿನ್ನನು ಭಾವದ ಮೇಳಕೆ
ಮಿಡಿದಿದೆ ಎದೆಯಿದು ಯಾವುದೋ ತಾಳಕೆ

ಸಾಲ್ಮರದ ರೆಂಬೆಯಲ್ಲಿ ಹಕ್ಕಿಗಳ ಗೂಡಿದೆ
ತೂಗಾಡೋ ಗೂಡಿನಲ್ಲಿ ಜೋಗುಳದ ಹಾಡಿದೆ

ಸಾಲ್ಮರದ ರೆಂಬೆಯಲ್ಲಿ ಹಕ್ಕಿಗಳ ಗೂಡಿದೆ
ತೂಗಾಡೋ ಗೂಡಿನಲ್ಲಿ ಜೋಗುಳದ ಹಾಡಿದೆ
ಆ ಹಾಡಿಗೊಂದು ಆಸೆ... ಹೊಂಗನಸ ತರಿಸಲು
ಈ ತೆಕ್ಕೆಗೊಂದೇ ತವಕ... ನಿನ್ನಾವರಿಸಲು

ಬಯಸಿದೆ ನಿನ್ನನು ಭಾವದ ಮೇಳಕೆ
ಮಿಡಿದಿದೆ ಎದೆಯಿದು ಯಾವುದೋ ತಾಳಕೆ

ಇರುಳಿಳಿದಾ ದಾರಿಯಲಿ ಬಂಡಿಯು ಕುಲುಕದೆ ಸಾಗಲೀ
ಬಾಂದಳದ ಸೂರಿಂದ ದಾರಿಯ ದೀಪ ತೂಗಲೀ
ಇರುಳಿಳಿದಾ ದಾರಿಯಲಿ ಬಂಡಿಯು ಕುಲುಕದೆ ಸಾಗಲೀ
ಬಾಂದಳದ ಸೂರಿಂದ ದಾರಿಯ ದೀಪ ತೂಗಲೀ

ಆ ಬೆಳಕು ತೋರಿರಲು ನಿನ್ನ ಕಣ್ಣ ಹರಳೂ
ನಮ್ಮೊಡನೆ ಈ ಹೊತ್ತು ಜಗವೆಲ್ಲ ಸಾಗಿರಲು

ಬಯಸಿದೆ ನಿನ್ನನು ಭಾವದ ಮೇಳಕೆ
ಮಿಡಿದಿದೆ ಎದೆಯಿದು ಯಾವುದೋ ತಾಳಕೆ
ಬಯಸಿದೆ ನಿನ್ನನು ಭಾವದ ಮೇಳಕೆ

Post a Comment

0 Comments