Ticker

6/recent/ticker-posts

ಹಿಂದೆ ಹೇಗೆ ಚಿಮ್ಮುತಿತ್ತು - ಎನ್. ಎಸ್. ಲಕ್ಷ್ಮೀನಾರಾಯಣ ಭಟ್ಟ

ಹಿಂದೆ ಹೇಗೆ ಚಿಮ್ಮುತಿತ್ತು -  ಎನ್. ಎಸ್. ಲಕ್ಷ್ಮೀನಾರಾಯಣ ಭಟ್ಟ [Hinde Hege Chimmutittu Lyrics -  Lakshminarayana Bhatta]









ಹಿಂದೆ ಹೇಗೆ ಚಿಮ್ಮುತಿತ್ತು

ಕಣ್ಣ ತುಂಬ ಪ್ರೀತಿ !

ಈಗ ಯಾಕೆ ಜ್ವಲಿಸುತ್ತಿದೆ

ಏನೋ ಶಂಕೆ ಭೀತಿ !


ಜೇನು ಸುರಿಯುತಿತ್ತು ನಿನ್ನ

ದನಿಯ ಧಾರೆಯಲ್ಲಿ,

ಕುದಿಯುತಿದೆ ಈಗ ವಿಷ

ಮಾತು ಮಾತಿನಲ್ಲಿ.


ಒಂದು ಸಣ್ಣ ಮಾತಿನಿರಿತ

ತಾಳದಾಯ್ತೆ ಪ್ರೇಮ ?

ಜೀವವೆರಡು ಕೂಡಿ ಉಂಡ

ಸ್ನೇಹವಾಯ್ತೆ ಹೋಮ ?


ಹಮ್ಮು ಬೆಳೆದು ನಮ್ಮ ಬಾಳು

ಆಯ್ತು ಎರಡು ಹೋಳು,

ಕೂಡಿಕೊಳಲಿ ಮತ್ತೆ ಪ್ರೀತಿ

ತಬ್ಬಿಕೊಳಲಿ ತೋಳು


Post a Comment

0 Comments