ತಪ್ಪು ಮಾಡೋದು ಸಹಜ ಕಣೋ - ಮನೆ ದೇವ್ರು [Thappu Madodu Sahaja Kano Lyrics in Kannada]
ತಪ್ಪು ಮಾಡೋದು ಸಹಜ ಕಣೋ..
ತಿದ್ದಿ ನಡೆಯೋನು ಮನುಜ ಕಣೋ ಅಹ್ಹಹ್
ತಪ್ಪು ಮಾಡೋದು ಸಹಜ ಕಣೋ..
ತಿದ್ದಿ ನಡೆಯೋನು ಮನುಜ ಕಣೋ
ಅಪ್ಪ ಬೇಡ ಅಪ್ಪ
ಕುಡಿಬೇಡಪ್ಪಾ
ತಪ್ಪು ಮೇಲೊಂದು ತಪ್ಯಾಕಪ್ಪಾ
ಗಂಡು ಮಾಡಿದ್ದೇ ನೀತಿ ಕಣೋ
ತಪ್ಪು ಸರಿ ಅನ್ನೋ ಜಾತಿ ಕಣೋ
ಅಮ್ಮ ಬೇಡ ಅಮ್ಮಾ
ಅಳಬೇಡಮ್ಮಾ
ನೋವ ಮೇಲೊಂದು ನೋವ್ಯಾಕಮ್ಮಾ
ತಪ್ಪು ಮಾಡುವುದು ಸಹಜ ಕಣೋ..
ತಿದ್ದಿ ನಡೆಯೋನು ಮನುಜ ಕಣೋ
ನೇಣುಗಂಬ ಏರುವವನಿಗೂ..
ರಾಷ್ಟ್ರಪತಿಗಳ ಕ್ಷಮೆಯೂ ಇಲ್ಲವೇ
ಶೀಲ ಒಂದು ಶುದ್ಧ ಕನ್ನಡಿ
ಒಡೆದು ಹೋದರೇ ಬೆಸುಗೆ ಸಾಧ್ಯವೇ
ಕ್ಷಮೆ ಕೊಡು
ಇಲ್ಲ ಅದು
ಶಿಕ್ಷೇ ಕೊಡು
ಇದೇ ಅದು
ಸಾಯಲ್ಲ ಮುರಿಯಲಿಲ್ಲ
ಹಾವು ಕೋಲಿದು
ತಪ್ಪು ಮಾಡೋದು ಸಹಜ ಕಣೋ..
ತಿದ್ದಿ ನಡೆಯೋನು ಮನುಜ ಕಣೋ
ಅಪ್ಪ ಬೇಡ ಅಪ್ಪ
ಕುಡಿಬೇಡಪ್ಪಾ
ತಪ್ಪು ಮೇಲೊಂದು ತಪ್ಯಾಕಪ್ಪಾ
ಗಂಡು ಮಾಡಿದ್ದೇ ನೀತಿ ಕಣೋ
ತಪ್ಪು ಸರಿ ಅನ್ನೋ ಜಾತಿ ಕಣೋ
ರಾಮನಂತೇ ಬೆಂಕಿಗೆಸೆದೆನೇ
ಧರ್ಮನಂತೆ ನಾ ಜೂಜಿಗೆಳೆದೆನೇ
ಶಂಕೆ ಪಟ್ಟ ರಾಮನು ಉತ್ತಮ
ಶೀಲಗೆಟ್ಟರೆ ಶಿವನು ಕಾಮನೇ
ನನ್ನಾ ಬಿಡು
ಬಿಟ್ಟಾಯಿತು
ತಾಳಿ ಕೊಡು
ಗಂಡಾನೇ ಬೇಡದಾಗ ತಾಳಿ ಯಾತಕೇ
ತಪ್ಪು ಮಾಡೋದು ಸಹಜ ಕಣೋ..
ತಿದ್ದಿ ನಡೆಯೋನು ಮನುಜ ಕಣೋ
0 Comments
Comment is awaiting for approval