ಅಪ್ಪಾ ಅಪ್ಪಾ ನಂಗೆ ನೀನು ಬೇಕಪ್ಪಾ - ಮನೆ ದೇವ್ರು[Appa Appa Nange Lyrics in Kannada - Mane Devru]
ಅಪ್ಪಾ ಅಪ್ಪಾ ನಂಗೆ ನೀನು ಬೇಕಪ್ಪಾ
ಅಪ್ಪಾ ಅಪ್ಪಾ ನಂಗೆ ನೀನು ಬೇಕಪ್ಪಾ
ಅಪ್ಪ ಅಮ್ಮಂಗೇ ನೀನು ಯಾಕೆ ಬೇಡಪ್ಪಾ
ಅಪ್ಪ ಅಲ್ಲ ಬೆಪ್ಪ ತಿಂದಾ ಬಿಸಿ ತುಪ್ಪ
ಅದೇ ತಪ್ಪಾಗಿ ಹೋಯ್ತಪ್ಪಾ
ಮಗನೇ ಮಗನೇ ನಂಗೆ ನೀನು ಬೇಕಪ್ಪಾ
ಬೇಡ ಅನ್ನೋ ಅಮ್ಮ ಕೂಡ ಬೇಕಪ್ಪಾ
ಬರ್ತಾಳಪ್ಪ ಬಂದು ಬೈತಾಳಪ್ಪ
ಬೈದು ಅತ್ಕೊಂಡು ಎಂದು ಸೇರುತ್ತಾಳಪ್ಪಾ
ಅಪ್ಪಾ ಅಪ್ಪಾ ತಮಾಷೆ ಕೇಳಪ್ಪಾ
ಯಾರಪ್ಪ ನಿಮ್ಮಪ್ಪ ಅಂತಾ ಇದ್ರಪ್ಪಾ
ಈಗ ಕಾಟ ಇಲ್ಲಪ್ಪಾ
ಮಗನೇ ಮಗನೇ ಆನಂದ ತಂದಪ್ಪ
ಆ ನಿನ್ನ ಅಮ್ಮನಿಗೇ ಕಾವಲು ನಾನಪ್ಪ
ನನ್ನ ಲೋಕವೇ ನೀವಪ್ಪಾ
ಅಪ್ಪಾ ಅಪ್ಪ ಬೇಜಾರಪ್ಪ
ಅಮ್ಮ ನೀನು ಒಂದಾಗ್ರಪ್ಪಾ
ಅಪ್ಪ ಅಲ್ಲ ಬೆಪ್ಪ ತಿಂದಾ ಬಿಸಿ ತುಪ್ಪ
pದೇ ತಪ್ಪಾಗಿ ಹೋಯ್ತಪ್ಪಾ
ಅಪ್ಪಾ ಅಪ್ಪಾ ನಂಗೆ ನೀನು ಬೇಕಪ್ಪಾ
ಮಗನೇ ಮಗನೇ ನಂಗೆ ನೀನು ಬೇಕಪ್ಪಾ
ಗಂಡ ಹೆಂಡ್ತಿ ಜಗಳನ ಬಿಡಿಸೋಕೆ
ಆ ದೇವರು ಮಕ್ಕಳಿಗೆ ಶಕ್ತಿಯ ಕೊಡುತಾನೇ
ನ್ಯಾಯ ಹೇಳಲೂ ಬಿಡುತಾನೇ
ಉಂಡು ತಿಂದು ಮಲಗೋಕೆ ಮುಂಚೆನೇ
ಶ್ರೀ ಶ್ರೀಮತಿ ಜಗಳಗಳು ಮುಗಿಯಲೇಬೇಕಲ್ಲಾ
ನಿಮ್ದು ಹಾಗ್ಯಾಕ್ ಆಗಲಿಲ್ಲಾ
ಎಲ್ಲಾ ಕೇಸು ಹಾಗೇ ಕಂದ
ನನ್ನಾ ಕಥೆ ಹೀಗೆ ಕಂದ
ಒಳ್ಳೆ ಅಮ್ಮ ಅವಳೂ ಒಳ್ಳೇ ಅಪ್ಪ ನೀನು
ಜಗಳ ಇಲ್ಯಾಕೆ ಬಂತಪ್ಪಾ
ಮಗನೇ ಮಗನೇ ನಂಗೆ ನೀನು ಬೇಕಪ್ಪಾ
ಅಪ್ಪಾ ಅಪ್ಪಾ ನಂಗೆ ನೀನು ಬೇಕಪ್ಪಾ
ಅಪ್ಪ ಅಲ್ಲ ಬೆಪ್ಪ ತಿಂದಾ ಬಿಸಿ ತುಪ್ಪ
ಅದೇ ತಪ್ಪಾಗಿ ಹೋಯ್ತಪ್ಪಾ
ಅಪ್ಪಾ ಅಪ್ಪಾ ನಂಗೆ ನೀನು ಬೇಕಪ್ಪಾ
ಮಗನೇ ಮಗನೇ ನಂಗೆ ನೀನು ಬೇಕಪ್ಪಾ
ಬರ್ತಾಳಪ್ಪ ಅಮ್ಮ ಬೈತಾಳಪ್ಪ
ಬೈದು ಅತ್ಕೊಂಡು ಎಂದು ಸೇರುತ್ತಾಳಪ್ಪಾ
0 Comments
Comment is awaiting for approval