Ticker

6/recent/ticker-posts

ಅಪರಂಜಿ ಚಿನ್ನವೋ - ಮನೆ ದೇವ್ರು

ಅಪರಂಜಿ ಚಿನ್ನವೋ - ಮನೆ ದೇವ್ರು [Aparanji Chinnavo Lyrics in Kannada - Mane Devru]


ಅಪರಂಜಿ ಚಿನ್ನವೋ ಚಿನ್ನವೋ
ನನ್ನಾ ಮನೆಯ ದೇವರು
ಗುಲಗಂಜೀ ದೋಷವೋ ದೋಷವೋ
ಇರದಾ ಸುಗುಣ ಶೀಲರು
ಉರಿಯೋ ಸೂರ್ಯನು ಅವನ್ಯಾಕೇ
ಕರಗೋ ಚಂದ್ರನು ಅವನ್ಯಾಕೆ ಹೋಲಿಕೆ
 
ಅಪರಂಜಿ ಚಿನ್ನವೋ ಚಿನ್ನವೋ
ನನ್ನಾ ಮನೆಯ ದೇವತೆ
ಗುಲಗಂಜೀ ದೋಷವೋ ದೋಷವೋ
ಇರದಾ ಬಾಳ ಸ್ನೇಹಿತೆ
ಬಾಡೋ ಮಲ್ಲಿಗೆ ಹೂವ್ಯಾಕೇ
ಶಿಲೆಯಾ ಬಾಲಿಕೆ ಅವಳ್ಯಾಕೆ ಹೋಲಿಕೆ

ಅಪರಂಜಿ ಚಿನ್ನವೋ ಚಿನ್ನವೋ
ನನ್ನಾ ಮನೆಯ ದೇವರು
 
ಮನದಲ್ಲಿ ನಲಿದಾಡೋ ನಾಯಕ
ನೆನೆದಂತೆ ತಾ ಹಾಡೊ ಗಾಯಕ
ಕಣ್ಣಲ್ಲೇ ಮಾತಡೋ ನಾಯಕಿ
ನಿಜ ಹೇಳಿ ನನ್ನಳೋ ಪಾಲಕಿ
ನಡೆಯಲ್ಲೂ ನುಡಿಯಲ್ಲೂ
ಒಂದೇ ವಿಧವಾದ ಹೋಲಿಕೆ
ನಗುವಲ್ಲೂ ಮುನಿಸಲ್ಲೂ
ಪ್ರೀತಿ ಒಂದೇನೆ ಕಾಣಿಕೆ
 
ಅಪರಂಜಿ ಚಿನ್ನವೋ ಚಿನ್ನವೋ
ನನ್ನಾ ಮನೆಯ ದೇವತೆ
ಗುಲಗಂಜೀ ದೋಷವೋ ದೋಷವೋ
ಇರದಾ ಬಾಳ ಸ್ನೇಹಿತೆ
ಬಾಡೋ ಮಲ್ಲಿಗೆ ಹೂವ್ಯಾಕೇ
ಶಿಲೆಯಾ ಬಾಲಿಕೆ ಅವಳ್ಯಾಕೆ ಹೋಲಿಕೆ
 
ಅಪರಂಜಿ ಚಿನ್ನವೋ ಚಿನ್ನವೋ
ನನ್ನಾ ಮನೆಯ ದೇವರು

ಸುಖವಾದ ಸಂಸಾರ ನಮ್ಮದು
ನಮ್ಮಲ್ಲಿ ಅನುಮಾನ ಸುಳಿಯದು
ಪ್ರತಿ ರಾತ್ರಿ ಆರಂಭ ವಿರಸವೇ
ವಿರಸಕ್ಕೆ ಕೊನೆಯಂದು ಸರಸವೇ
ಕೋಪಕ್ಕೇ ತಾಪಕ್ಕೇ ಎಣ್ಣೆ ಎರೆಯೊಲ್ಲ ಇಬ್ಬರೂ
ಬಡತನವೇ ಸುಖವೆಂದು ಒಬ್ಬರ ಪರವಾಗಿ ಒಬ್ಬರು
 
ಅಪರಂಜಿ ಚಿನ್ನವೋ ಚಿನ್ನವೋ
ನನ್ನಾ ಮನೆಯ ದೇವರು
ಗುಲಗಂಜೀ ದೋಷವೋ ದೋಷವೋ
ಇರದಾ ಸುಗುಣ ಶೀಲರು
ಉರಿಯೋ ಸೂರ್ಯನು ಅವನ್ಯಾಕೇ
ಕರಗೋ ಚಂದ್ರನು ಅವನ್ಯಾಕೆ ಹೋಲಿಕೆ
 
ಅಪರಂಜಿ ಚಿನ್ನವೋ ಚಿನ್ನವೋ
ನನ್ನಾ ಮನೆಯ ದೇವತೆ 

Post a Comment

0 Comments