Ticker

6/recent/ticker-posts

ತರಕಾರಿಗಳ ಹಾಡು - ಮಕ್ಕಳ ಗೀತೆಗಳು

ತರಕಾರಿಗಳ ಹಾಡು - ಮಕ್ಕಳ ಗೀತೆಗಳು [Vegetable Song - Kannada Rhymes for Kids]


ಅಡುಗೆ ಮನೆಯಲ್ಲೊಂದು ದಿನ ಫಂಕ್ಷನ್ ನಡೆದಿತ್ತು
ಸೊಪ್ಪುಗಳೆಲ್ಲಾ ಸೇರಿಕೊಂಡು ಚಪ್ಪರ ಹಾಕಿತ್ತು

ದಂಟಿನ ಸೊಪ್ಪು ತಾನೇ ನಿಂತು ತೋರಣ ಮಾಡಿತ್ತು
ಕುಂಬಳ ಕಾಯಿ ಕುರ್ಚಿಲಿ ಕೂತು ಅಧ್ಯಕ್ಷನಾಗಿತ್ತು

ಹಾರಿ ಬಂದ ಹಿರೇಕಾಯಿ ಒಲಗ ಊದಿತ್ತು
ನುಗ್ಗಿ ಬಂದ ನುಗ್ಗೆ ಕಾಯಿ ಡೋಲು ಬಾರಿಸಿತ್ತು

ಸೌತೆ ಕಾಯಿ ಥೈ ಥೈ ಮಾಡಿ ಸ್ವಾಗತ ಎಂದಿತ್ತು
ಟೊಮ್ಯಾಟೊ ತಾನೇ ಸುಂದ್ರಿ ಎಂದು ತಾಂಬೂಲ ಹಂಚಿತ್ತು

ಬಟಾ ಬಟಾ ಎಂದ ಬಟಾಟೆ ಜೋರು ಭಾಷಣ ಬಿಗಿದಿತ್ತು
ಪಟ ಪಟ ಎನ್ನುವ ಪಡವಲಕಾಯಿ ಚಪ್ಪಾಳೆ ತಟ್ಟಿತ್ತು

ಕ್ಯಾಬೇಜ್ ಕ್ಯಾರೇಟ್ ಒಟ್ಟಿಗೆ ಸೇರಿ ಮೇಕಪ್ ಮಾಡಿತ್ತು
ಕೆಂಪಗೆ ಇದ್ದ ಬಿಟ್ರೂಟ್ ಎಲ್ರಿಗೂ ಲಿಪ್ಸ್ಟಿಕ್ ಹಾಕಿತ್ತು

ಬೆಂಡೆಕಾಯಿ ಬಂಡೆ ಎತ್ತಿ ಸಾಹಸ ಮಾಡಿತ್ತು
ತಡವಾಗಿ ಬಂದ ತೊಂಡೆ ಕಾಯಿ ಹಾಡ ಹಾಡಿತ್ತು

ಮೂಲೆಲ್ ಇದ್ದ ಮೂಲಂಗಿ ಶೂಟಿಂಗ್ ಮಾಡಿತ್ತು
ಜೀನ್ಸ್ ಹಾಕಿದ ಬೀನ್ಸ್ ಬಂದು ಡಾನ್ಸ್ ಮಾಡಿತ್ತು

ಛೋಟು ಉದ್ದದ ಮೆಣಸಿನಕಾಯಿ ಥಕ ಥಕ ಕುಣಿದಿತ್ತು
ಬಾಳೆಹಣ್ಣು ಬಟ್ಟೆ ಬಿಚ್ಚಿ ಡಾನ್ಸ್ ಮಾಡಿತ್ತು

ಚಯ್ ಚಯ್ ಎನ್ನುತಾ ಚೀನೀ ಕಾಯಿ ಎಮ್ ಸಿ ಮಾಡಿತ್ತು
ಬದನೆಕಾಯಿ ಬಂದೊರಿಗೆಲ್ಲಾ ವಂದನೆ ಹೇಳಿತ್ತು

Post a Comment

0 Comments