Ticker

6/recent/ticker-posts

ದಾರಿ ಕಾಣದಾಗಿದೆ ರಾಘವೇಂದ್ರನೇ | ದೀಪ [1997]

ದಾರಿ ಕಾಣದಾಗಿದೆ ರಾಘವೇಂದ್ರನೇ [Daari Kaanadaagide Lyrics in Kannada]: ದಾರಿ ಕಾಣದಾಗಿದೆ ರಾಘವೇಂದ್ರನೇ 1977 ರ ಬಿಡುಗಡೆಯಾದ 'ದೀಪ' ಚಲನಚಿತ್ರದ  ಪ್ರಸಿದ್ಧ ಹಾಡು. ಸಿ.ವಿ. ರಾಜೇಂದ್ರನ್ನಿ ರ್ದೇಶನದ ಮತ್ತು ಜಗತ್ ಪಿಕ್ಚರ್ಸ್ ಬ್ಯಾನರ್ ಅಡಿಯಲ್ಲಿ ರವಿಲಾಲ್ ಎಲ್ ಶಾ ನಿರ್ಮಿಸಿದ  ಚಲನಚಿತ್ರ ಇದಾಗಿದೆ.

'ದೀಪ' ಚಲನಚಿತ್ರದಲ್ಲಿ  ಮಂಜುಳಾ, ಅಶೋಕ್, ಲೀಲಾವತಿ, ಬಾಲಕೃಷ್ಣ, ಹೇಮಾ ಚೌಧರಿ, ಪಾಪಮ್ಮ, ಕೃಷ್ಣಕುಮಾರಿ, ಸೀತಾರಾಮ್, ಲೋಕನಾಥ್, ಜಯಕುಮಾರ್, ಗುಗ್ಗು, ಹನುಮಂತಾಚಾರ್, ಡಾ ಶ್ರೀಧರ್, ತಿಪಟೂರು ಸಿದ್ದರಾಮಯ್ಯ, ಸಂಜೀವಯ್ಯ, ವೀಡಲ್ ನಾಗರಾಜ್, ಯಶೋಧ, ವಸುತಿಬಾಯಿ, ಮಾಸ್ಟರ್ನ ಟರಾಜ್ ಮತ್ತು ಇತರರು ನಟಿಸಿದ್ದಾರೆ.

ದಾರಿ ಕಾಣದೆ ರಾಘವೇಂದ್ರನೆ ಹಾಡಿನ ಸಾಹಿತ್ಯವನ್ನು ಸಾಹಿತಿ ಚಿ. ಉದಯಶಂಕರ ಬರೆದಿದ್ದಾರೆ. ಸಂಗೀತ ಸಂಯೋಜನೆ ವಿಜಯ ಭಾಸ್ಕರ್. ಈ ಹಾಡನ್ನು ಹಿನ್ನೆಲೆ ಗಾಯಕಿ ವಾಣಿ ಜಯರಾಮ್ ಹಾಡಿದ್ದಾರೆ.

ದಾರಿ
 ಕಾಣದಾಗಿದೆ ರಾಘವೇಂದ್ರನೇ

ಚಿತ್ರ: ದೀಪ [1977]
ಸಂಗೀತ: ವಿಜಯ ಭಾಸ್ಕರ್
ಸಾಹಿತ್ಯ: ಚಿ. ಉದಯಶಂಕರ್ 
ಗಾಯಕಿ:  ವಾಣಿ ಜಯರಾಮ್ 
ತಾರಾಗಣ: ಮಂಜುಳಾ, ಅಶೋಕ್ 


ದಾರಿ ಕಾಣದಾಗಿದೆ ರಾಘವೇಂದ್ರನೇ [Daari Kaanadaagide Lyrics in Kannada]

ದಾರಿ ಕಾಣದಾಗಿದೆ ರಾಘವೇಂದ್ರನೇ
ಬೆಳಕ ತೋರಿ ನಡೆಸು ಬಾ
ಯೋಗಿವರ್ಯನೇ

ದಾರಿ ಕಾಣದಾಗಿದೆ ರಾಘವೇಂದ್ರನೇ
ಬೆಳಕ ತೋರಿ ನಡೆಸು ಬಾ
ಯೋಗಿವರ್ಯನೇ

|| ದಾರಿ ಕಾಣದಾಗಿದೆ ರಾಘವೇಂದ್ರನೇ…||

 

ಮನದ ಆಸೆ ತಿಳಿಸುವಾಸೆ ಹೇಗೆ ಹೇಳಲಿ
ನಾಳೆ ಹೇಗೆ ಎಂಬ ಚಿಂತೆ ಇಂದು ಎದೆಯಲಿ
ಮನದ ಆಸೆ ತಿಳಿಸುವಾಸೆ ಹೇಗೆ ಹೇಳಲಿ
ನಾಳೆ ಹೇಗೆ ಎಂಬ ಚಿಂತೆ ಇಂದು ಎದೆಯಲಿ
ಕಲ್ಲು ಮುಳ್ಳು ಏನೇ ಇರಲಿ ಬಾಳ ಹಾದೀಲಿ
ಕಲ್ಲು ಮುಳ್ಳು ಏನೇ ಇರಲಿ ಬಾಳ ಹಾದೀಲಿ
ನಿನ್ನ ಕರುಣೆಯಿಂದ ಎಲ್ಲಾ ಸುಗಮವಾಗಲಿ

ದಾರಿ ಕಾಣದಾಗಿದೆ ರಾಘವೇಂದ್ರನೇ
ಬೆಳಕ ತೋರಿ ನಡೆಸು ಬಾ
ಯೋಗಿವರ್ಯನೇ

ಯಾರ ಯಾರ ಸೇರಿಸುವೆಯೋ
ಯಾರೂ ಅರಿಯರು
ಯಾರ ನಗಿಸಿ ಅಳಿಸುವೆಯೋ
ಯಾರು ಬಲ್ಲರು…
ಯಾರ ಯಾರ ಸೇರಿಸುವೆಯೋ
ಯಾರೂ ಅರಿಯರು
ಯಾರ ನಗಿಸಿ ಅಳಿಸುವೆಯೋ
ಯಾರು ಬಲ್ಲರು…
ನೀನು ಕುಣಿಸಿದಂತೆ ತಾನೇ ಎಲ್ಲ ಕುಣಿವರು
ಜ್ಯೋತಿ ನೀನು ಬರಿಯ ಮಣ್ಣ ಹಣತೆ ಎಲ್ಲರು

ದಾರಿ ಕಾಣದಾಗಿದೆ ರಾಘವೇಂದ್ರನೇ
ಬೆಳಕ ತೋರಿ ನಡೆಸು ಬಾ
ಯೋಗಿವರ್ಯನೇ

  

Post a Comment

0 Comments