Ticker

6/recent/ticker-posts

ನನ್ನ ಹಣೆಯಲ್ಲಿ ನಿನ್ನ ಹೆಸರಿಲ್ಲ - ಹಿಟ್ಲರ್ ಕಲ್ಯಾಣ

ನನ್ನ ಹಣೆಯಲ್ಲಿ  ನಿನ್ನ ಹೆಸರಿಲ್ಲ - ಹಿಟ್ಲರ್ ಕಲ್ಯಾಣ [Nanna Haneyalli Ninna Hesarilla Kannada Lyrics | Hitler Kalyana]

ನನ್ನ ಹಣೆಯಲ್ಲಿ ನಿನ್ನ ಹೆಸರಿಲ್ಲ

ಧಾರವಾಹಿ: ಹಿಟ್ಲರ್ ಕಲ್ಯಾಣ 
ಸಂಗೀತ: ಸುನಾದ ಗೌತಮ್ 
ಸಾಹಿತ್ಯ: ಕವಿರಾಜ್ 
ಗಾಯನ: ಶಮೀರ್ ಮುಡಿಪು , ನಿನಾದ ನಾಯಕ್ , ರಜತ್ ಹೆಗ್ಡೆ 
ತಾರಾಗಣ: ದಿಲೀಪ್ ರಾಜ್, ಮಲೈಕಾ ವಸುಪಲ್ 

ನನ್ನ ಹಣೆಯಲ್ಲಿ 
ನಿನ್ನ ಹೆಸರಿಲ್ಲ
ಈ ನಿನ್ನ ಪಡೆಯುವ 
ಪುಣ್ಯ ನನಗಿಲ್ಲ

ನೀ ವಿಶಾಲ ಗಗನ
ನಾ ಅನಾಥ ಕವನ
ಈ ನಮ್ಮ ನಡುವೆ
ಈಗೊಂದು ಮೌನ

ಆ ಹೂವಿನ ಎದೆಗೆ ಅಂಟು
ಮಂಜಿನ ಹನಿಯೂ
ಬಿಸಿಲಾದ ಕೂಡಲೇ ಕರಗೋ
ಕಹಿ ಸತ್ಯವೇ ಕೊನೆಯು

ನೀ ಬೆಟ್ಟದ ಹೂವು
ನಾ ಮರಳಿನ ಮುಳ್ಳು
ನಮ್ಮಿಬ್ಬರ ಮಿಲನ 
ಇಬ್ಬರಿಗೂ ನೋವು

ಬಿರುಗಾಳಿ ಎದುರಲಿ
ಗಂಧ ಇದ್ದರು ಕಂಪು ಬೀರದು
ನಮ್ಮ ಪ್ರೇಮ ದೋಣಿಯು
ಏನೇ ಆದರು ತೀರ ಸೇರದು

ನೀ ಬೆಳಕಿನ ಹಕ್ಕಿ
ನಾ ಇರುಳಿನ ಚುಕ್ಕಿ
ನಮ್ಮಿಬ್ಬರ ಬೆಸುಗೆ 
ಕಲ್ಪನೆಗೂ ದೂರ

ಕೊನೆಯೆಂದು ಇರದ
ಕವಲುದಾರಿಯಲಿ
ನಮ್ಮಿಬ್ಬರ ಪಯಣ
ಗುರಿ ಕಾಣದು ಎಂದು

ಮತ್ತೆ ಬರಬೇಡ
ಎದುರಲ್ಲಿ ಎಲ್ಲೂ
ಬಂದರು ತಿರುಗಿ ನೀ
ನೋಡದೆ ತೆರಳು

ನೀ ಕಾಮನ ಬಿಲ್ಲು
ನಾ ಬೇಲಿಯ ಕೋಲು
ನಾ ತಲುಪಲು ನಿನ್ನ 
ಸಾಧ್ಯವೇ ಹೇಳು?

ಆ ನದಿ ದಂಡೆಲಿ
ಬೀಸುವುದೆ ಈಗಲು
ದಿನವು ಅಂದಿನಂತೆ
ತಂಗಾಳಿಯ ಅಲೆಗಳು

ಆ ನದಿ ದಂಡೆಲಿ
ಬೀಸುವುದೆ ಈಗಲು
ದಿನವು ಅಂದಿನಂತೆ
ತಂಗಾಳಿಯ ಅಲೆಗಳು

ಯಾಕದೆ ನನ್ನ ಭೇಟಿ
ನೀ ಹೋದೆ ನನ್ನ ದಾಟಿ
ಕನಸೆಲ್ಲ ಆಯಿತಲ್ಲ 
ಕಣ್ಣಲ್ಲೇ ಆಹುತಿ

ನೀ ನಿನಾದವಾಗಿ
ಈ ಎದೇಲಿ ಕರಗಿ 
ಆಗಾಗ ಬರುವೆ
ನಿಟ್ಟುಸಿರು ಆಗಿ

ಹಾ ಅಳಿಸಲೆ ಬೇಕು
ಆ ಗುರುತುಗಳನ್ನು 
ನಾ ಮರೆಯಲೇ ಬೇಕು
ಪಿಸು ನುಡಿಗಳನ್ನು 

ಏಕಾಂಗಿಯಾ ಎದೆಯ ತುಂಬ
ನೋವಿನ ಬಲುಕು 
ನಡುದಾರಿಯಲ್ಲಿ ನಿಂತ
ಬಡಪಾಯಿ ಬದುಕು

ನಾ ವಿಶಾಲ ಗಗನ 
ನೀ ಅನಾಥ ಕವನ
ಈ ನಮ್ಮ ನಡುವೆ
ಈಗೊಂದೆ ಮೌನ

ಅನಲಾರೆ ಈಗ 
ಹಾ ಸಿಗೋಣ ಮುಂದೆ
ಎದೆಯಲ್ಲಿ ಇನ್ಮುಂದೆ 
ಬರಿ ವಿಷಾದ ಒಂದೇ

ಆ ಹೂವಿನ ಎದೆಗೆ ಅಂಟು
ಮಂಜಿನ ಹನಿಯೂ
ಬಿಸಿಲಾದ ಕೂಡಲೇ ಕರಾಗೋ
ಕಹಿ ಸತ್ಯವೇ ಕೊನೆಯೂ

ನನ್ನ ಹಣೆಯಲ್ಲಿ 
ನಿನ್ನ ಹೆಸರಿಲ್ಲ
ಈ ನಿನ್ನ ಪಡೆವ
ಪುಣ್ಯ ನನಗಿಲ್ಲ

ನೀ ವಿಶಾಲ ಗಗನ
ನಾ ಅನಾಥ ಕವನ
ಈ ನಮ್ಮ ನಡುವೆ 
ಈಗೊಂದೇ ಮೌನ

ಆ ಹೂವಿನ ಎದೆಗೆ ಅಂಟು
ಮಂಜಿನ ಹನಿಯೂ
ಬಿಸಿಲಾದ ಕೂಡಲೇ ಕರಗೊ
ಕಹಿ ಸತ್ಯವೇ ಕೊನೆಯೂ

ನೀ ನಿನಾದವಾಗಿ 
ಈ ಎದೆಲಿ ಕರಗಿ
ಆಗಾಗ ಬರುವೆ
ನಿಟ್ಟುಸಿರು ಆಗಿ

ಹಾ ಅಳಿಸಲೇ ಬೇಕು 
ಆ ಗುರುತುಗಳನ್ನು
ನಾ ಮರೆಯಲೇ ಬೇಕು
ಪಿಸು ನುಡಿಗಳನ್ನು

ಏಕಾಂಗಿಯ ಎದೆಯ ತುಂಬಾ
ನೋವಿನ ಬಲುಕು
ನಡುದಾರಿಯಲ್ಲಿ ನಿಂತ
ಪರದೇಸಿ ಬದುಕು

ಹೀಗೆ ಒಮ್ಮೊಮ್ಮೆ
ಈ ಹಾಡು ಖಯಾಲಿ
ನೊಂದಿರುವ ಹೃದಯಕೆ
ನಿಂದೆ ನೆನಪಲ್ಲಿ

ಯಾಕಾದೆ ನನ್ನ ಭೇಟಿ
ನೀ ಹೋದೆ ನನ್ನ ದಾಟಿ
ಕನಸೆಲ್ಲ ಆಯಿತಲ್ಲ 
ಕಣ್ಣಲ್ಲೇ ಆಹುತಿ

ನಿನ್ನ ಕೆಲವೊಮ್ಮೆ
ನಾ ಭೇಟಿ ಆದೆ
ಏನ್ನುವಾ ಖುಷಿ ನನಗೆ
ನೋವಲ್ಲು ಕೊನೆಗೆ

ನೀ ಕಾಮನ ಬಿಲ್ಲು
ನಾ ಬೇಲಿಯ ಕೋಲು
ನಾ ತಲುಪಲು ನಿನ್ನ 
ಸಾಧ್ಯವೇ ಹೇಳು

ಆ ಹೂವಿನ ಎದೆಗೆ ಅಂಟು
ಮಂಜಿನ ಹನಿಯೂ
ಬಿಸಿಲಾದ ಕೂಡಲೆ ಕರಾಗೊ
ಕಹಿ ಸತ್ಯವೇ ಕೊನೆಯೂ...

Post a Comment

0 Comments