Ticker

6/recent/ticker-posts

ಶರವು ಮಹಾ ಗಣಪತಿ ನಮಗೆ ನಿನ್ನದೇ ಸ್ತುತಿ | ಗಣೇಶ ಭಕ್ತಿ ಗೀತೆಗಳು

 ಶರವು ಮಹಾ ಗಣಪತಿ ನಮಗೆ ನಿನ್ನದೇ ಸ್ತುತಿ | ಗಣೇಶ ಭಕ್ತಿ ಗೀತೆಗಳು [Sharavu Maha Ganapati Namage Ninnade Sthuthi Lyrics]: ಸರ್ವರಿಗೂ ಗೌರಿ ಗಣೇಹ ಹಬ್ಬದ ಹಾರ್ಥಿಕ ಶುಭಾಶಯಗಳು.



ಶರವು ಮಹಾ ಗಣಪತಿ ನಮಗೆ ನಿನ್ನದೇ ಸ್ತುತಿ 
ಶರವು ಮಹಾ ಗಣಪತಿ ನಮಗೆ ನಿನ್ನದೇ ಸ್ತುತಿ 
ಅನುದಿನವು ಭಕ್ತರು ನಿನ್ನ ನಂಬಿ ಇರುವರು 
ಅನುದಿನವು ಭಕ್ತರು ನಿನ್ನ ನಂಬಿ ಇರುವರು

ಶರವು ಮಹಾ ಗಣಪತಿ ನಮಗೆ ನಿನ್ನದೇ ಸ್ತುತಿ 
ಅನುದಿನವು ಭಕ್ತರು ನಿನ್ನ ನಂಬಿ ಇರುವರು 

ಗಜಮುಖದ ದೇವನೆ ನಿನಗೆ ವಂದನೆ  
ಭಕ್ತಿಯ ಸೇವೆಯಲಿ ಆರಾಧನೆ 
ಕಷ್ಟ ಪರಿಹಾರಕೆ ಮಾರ್ಗದರ್ಶಕ 
ಕಾಪಾಡು ಕರುಣಾಳು ವಿಘ್ನನಾಶಕ
ಕಾಪಾಡು ಕರುಣಾಳು ವಿಘ್ನನಾಶಕ

ಶರವು ಮಹಾ ಗಣಪತಿ ನಮಗೆ ನಿನ್ನದೇ ಸ್ತುತಿ 
ಅನುದಿನವು ಭಕ್ತರು ನಿನ್ನ ನಂಬಿ ಇರುವರು 

ಶರವು ಶಿವಾಲಯದ ತೆಂಕು ದಿಕ್ಕಿನಲ್ಲಿ 
ದಿವ್ಯ ಮಹಾ ಗಣೇಶ ಅವತರಿಸಿದನಿಲ್ಲಿ 
ನಿತ್ಯವೂ ಎಡೆಬಿಡದೆ ನಾವು ವಂದಿಸೆ 
ಸಕಲ ಇಷ್ಟಾರ್ಥವ ಪರಿ ಪಾಲಿಸೋ
ಸಕಲ ಇಷ್ಟಾರ್ಥವ ಪರಿ ಪಾಲಿಸೋ  

ಶರವು ಮಹಾ ಗಣಪತಿ ನಮಗೆ ನಿನ್ನದೇ ಸ್ತುತಿ 
ಅನುದಿನವು ಭಕ್ತರು ನಿನ್ನ ನಂಬಿ ಇರುವರು 

ಪುಣ್ಯ ಪ್ರಸಾದವೇ ಪಂಚಕಜ್ಜಾಯ 
ಸತ್ಯ ಧರ್ಮದಿ ತೋರೋ ನಿನ್ನ ಮಾಯೆಯ
ಶಾಸ್ತ್ರಿ ಸುಪೂಜಿತ ಸಿದ್ಧಿ ವಿನಾಯಕ 
ಶಾಸ್ತ್ರಿ ಸುಪೂಜಿತ ಸಿದ್ಧಿ ವಿನಾಯಕ 
ಮುಕ್ತಿಯನ್ನು ನೀಡುವ ಭಕ್ತ ಜನಪ್ರಿಯ 

ಶರವು ಮಹಾ ಗಣಪತಿ ನಮಗೆ ನಿನ್ನದೇ ಸ್ತುತಿ 
ಅನುದಿನವು ಭಕ್ತರು ನಿನ್ನ ನಂಬಿ ಇರುವರು 

Post a Comment

0 Comments