Ticker

6/recent/ticker-posts

ಯೋಗದಲ್ಲಿ ಶಿಕ್ಷಣ ಮತ್ತು ಉದ್ಯೋಗ ಅವಕಾಶಗಳು | ವಿಶ್ವ ಯೋಗ ದಿನ

 ಯೋಗದಲ್ಲಿ ಶಿಕ್ಷಣ ಮತ್ತು ಉದ್ಯೋಗ ಅವಕಾಶಗಳು | ವಿಶ್ವ ಯೋಗ ದಿನ [Yoga Courses & Job Opportunities | International Day of Yoga]: ದೈಹಿಕ, ಮಾನಸಿಕ ಮತ್ತು ಆಧ್ಯಾತ್ಮಿಕ ಮತ್ತು ಮಾನವ ಜೀವನದ ಉನ್ನತಿಗೆ, ಪ್ರಾಚೀನ ಭಾರತದಲ್ಲಿ  ರೂಪಗೊಂಡ ಅಭ್ಯಾಸವೇ ಯೋಗ. ಹಿಂದೂ ಧರ್ಮದ ಆರು ಸಾಂಪ್ರದಾಯಿಕ ತಾತ್ವಿಕ ಶಾಲೆಗಳಲ್ಲಿ ಯೋಗವೂ ಒಂದು [ಸಂಖ್ಯಾ, ಯೋಗ, ನ್ಯಾಯ, ವೈಶೇಷಿಕಾ, ಮೀಮಾಂಸ ಮತ್ತು ವೇದಾಂತ.]

2014 ರಲ್ಲಿ ವಿಶ್ವಸಂಸ್ಥೆಯ ಸಾಮಾನ್ಯ ಸಭೆಯಲ್ಲಿ ಯೋಗಾಗೇ ಮಾನ್ಯತೆ ದೊರೆತ ನಂತರ ಅಂತರರಾಷ್ಟ್ರೀಯ ಯೋಗ ದಿನವನ್ನು 2015 ರಿಂದ ಪ್ರತಿ ವರುಷ ಜೂನ್ 21 ರಂದು ಆಚರಿಸಲಾಗುತ್ತಿದೆ.

ಯೋಗವು ಬರಿ ಅಭ್ಯಾಸ ಮಾತ್ರವಲ್ಲದೆ, ಒಂದು ಉತ್ತಮ ಜೀವನ ವಿಧಾನವೂ ಆಗಿದೆ. ಭಾರತದಲ್ಲಿ ಮಾತ್ರವಲ್ಲದೆ ಪ್ರಪಂಚದಾದ್ಯಂತ ಯೋಗಕ್ಕೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. ಅನೇಕ ಜನರು ಯೋಗವನ್ನು ಕಲಿಯುತ್ತಿದ್ದಾರೆ,  ಆ ಮೂಲಕ ಅವರ ದೇಹ ಮತ್ತು ಮನಸ್ಸನ್ನು ಆರೋಗ್ಯವಾಗಿಟ್ಟುಕೊಂಡಿದ್ದಾರೆ. ಆದ್ದರಿಂದ ಯೋಗದ ಬೇಡಿಕೆ ನಿರಂತರವಾಗಿ ಹೆಚ್ಚುತ್ತಿದೆ. ಕರೋನಾ ವೈರಸ್ ಸಮಯದಲ್ಲಿ, ಜನರು ಉತ್ತಮ ಆರೋಗ್ಯಕ್ಕಾಗಿ ಇದನ್ನು ಹೆಚ್ಚು ಹೆಚ್ಚು ಸ್ವೀಕರಿಸಿದರು.

ಇಂತಹ ಸನ್ನಿವೇಶದಲ್ಲಿ, ಯೋಗವನ್ನು ಕಲಿಸುವ ತರೆಬೇತಿ ಪಡೆದ ಶಿಕ್ಷಕರ  ಅವಶ್ಯಕತೆ ಮತ್ತು ಯೋಗವನ್ನು ಕಲಿಸುವ ಯೋಗ ತರಬೇತಿ ಕೇಂದ್ರಗಳ ಅಗತ್ಯವು ಹೆಚ್ಚಾಗಲು ಪ್ರಾರಂಭಿಸಿದೆ ಮತ್ತು ಯೋಗ ಕ್ಷೇತ್ರದಲ್ಲಿ ಉದ್ಯೋಗಾವಕಾಶಗಳು, ಶೈಕ್ಷಣಿಕ ಅವಕಾಶಗಳು ಮತ್ತು ವ್ಯಾಪಾರದ  ಅವಕಾಶಗಲು ಕೂಡ ಸೃಷ್ಟಿಯಾಗುತ್ತಿದೆ.

ದೇಶದ ವಿವಿಧ ವಿಶ್ವವಿದ್ಯಾಲಯಗಳಲ್ಲಿ ಯೋಗದ ಹಲವು ಕೋರ್ಸ್‌ಗಳನ್ನು ನೀಡಲಾಗುತ್ತದೆ. ಅಲ್ಪಾವಧಿಯ ಪ್ರಮಾಣಪತ್ರ ಕೋರ್ಸ್‌ಗಳಿಂದ ಸ್ನಾತಕೋತ್ತರ ಮತ್ತು ಡಿಪ್ಲೊಮಾ  ಕೋರ್ಸ್‌ಗಳು  ಲಭ್ಯವಿದೆ. 


ಯೋಗದಲ್ಲಿ ಶೈಕ್ಷಣಿಕ ಕೋರ್ಸ್‌ಗಳು [Yoga Courses & Job Opportunities]

1. ಯೋಗದಲ್ಲಿ ಪ್ರಮಾಣಪತ್ರ ಕೋರ್ಸ್‌ಗಳು [Certificate Courses in Yoga]: ಇವುಗಳು ಅಲ್ಪಾವಧಿಯ ಪ್ರಮಾಣಪತ್ರ ಕೋರ್ಸ್‌ಗಳಾಗಿವೆ. ಇದು 200 ಗಂಟೆ, 300 ಗಂಟೆ ಮತ್ತು 500 ಗಂಟೆಗಳ ಅಧ್ಯಯನವನ್ನು ಒಳಗೊಂಡಿದೆ. ಇವು ಅರೆಕಾಲಿಕ (ಶಿಕ್ಷಕರ ತರಬೇತಿ) ಡಿಟಿಸಿ ಕಾರ್ಯಕ್ರಮಗಳು. ವಿದ್ಯಾರ್ಥಿಗಳಿಗೆ ಬೋಧನಾ ಅಂಶಗಳು ಮತ್ತು ಯೋಗದ ವಿಜ್ಞಾನವನ್ನು ಕಲಿಸಲಾಗುತ್ತದೆ. ಭಾರತದ ಮಾನ್ಯತೆ ಪಡೆದ ಸಂಸ್ಥೆಗಳಿಂದ ಪ್ರಮಾಣಪತ್ರವನ್ನು ನೀಡಲಾಗುತ್ತದೆ. 

2. ಯೋಗದಲ್ಲಿ ಡಿಪ್ಲೊಮಾ [Diploma in Yoga]: ಯೋಗದಲ್ಲಿ ಡಿಪ್ಲೊಮಾ ಅಲ್ಪಾವಧಿಯ ಕೋರ್ಸ್ ಆಗಿದೆ. ಈ ಕೋರ್ಸ್‌ಗೆ ವಿದ್ಯಾರ್ಥಿ 12 ನೇ ತರಗತಿ  ಉತ್ತೀರ್ಣನಾಗಿರಬೇಕು. ವಿದ್ಯಾರ್ಥಿಗಳಿಗೆ ಯೋಗ ಮತ್ತು ಪತಂಜಲಿ ಯೋಗ ಸೂತ್ರಗಳು, ಔಷದಿ,  ಪ್ರಕೃತಿ ಚಿಕಿತ್ಸೆ, ಮಾನಸಿಕ ಆರೋಗ್ಯ ಇತ್ಯಾದಿ ವಿಷಯಗಳನ್ನು  ಕಲಿಸಲಾಗುತ್ತದೆ.

3. ಶಿಕ್ಷಕರ ತರಬೇತಿ ಕೋರ್ಸ್ [Teacher Training in Yoga]: ಶಿಕ್ಷಕರ ತರಬೇತಿ ತರಗತಿಯ ನಂತರ ವಿದ್ಯಾರ್ಥಿಗಳು ಯೋಗವನ್ನು ಕಲಿಸಬಹುದು. ಯೋಗದ ಅನುಭವ, ಶೈಕ್ಷಣಿಕ ಮತ್ತು ಪ್ರಾಯೋಗಿಕ ಜ್ಞಾನವು ಇತರರಿಗೆ ಕಲಿಸುವ ಮೊದಲು ತನ್ನೊಳಗೆ ಇರಬೇಕು. ಡಿಟಿಸಿ 3 ತಿಂಗಳು, 6 ತಿಂಗಳಿಂದ 1 ವರ್ಷದವರೆಗೆ ಇರುತ್ತದೆ.

4. ಯೋಗದಲ್ಲಿ ಬಿ.ಎಡ್ [B.Ed in Yoga]: - ಕಾಲೇಜುಗಳು ಮತ್ತು ವಿಶ್ವವಿದ್ಯಾಲಯಗಳಲ್ಲಿ ಯೋಗವನ್ನು ಶೈಕ್ಷಣಿಕ ವಿಷಯವಾಗಿ ಕಲಿಸಲು ಬಯಸುವವರು ಈ ಕೋರ್ಸ್ ಅನ್ನು ಆಯ್ಕೆ ಮಾಡಬಹುದು. ಯೋಗದಲ್ಲಿ ಪಿ.ಎಡ್ ಮಾಡಲು, 12 ನೇ ತರಗತಿ ಉತ್ತೀರ್ಣರಾಗುವುದು ಅವಶ್ಯಕ.

5. ಯೋಗದಲ್ಲಿ ಬಿ.ಎ. [B.A. in Yoga]: ಯೋಗದಲ್ಲಿ ಬಿಎ ಮಾಡಲು, ಶಾಲಾ ಶಿಕ್ಷಣವನ್ನು ಪೂರ್ಣಗೊಳಿಸುವುದು ಅವಶ್ಯಕ. ಈ ಪಠ್ಯದಲ್ಲಿ ಒಬ್ಬರು ಯೋಗದ ಹಲವು ಅಂಶಗಳನ್ನು ಶೈಕ್ಷಣಿಕವಾಗಿ ಕಲಿಯಬೇಕು. ಜೀವನಶೈಲಿಗಾಗಿ ಆಯುರ್ವೇದ ಮತ್ತು ಇತರ ಪ್ರಾಚೀನ ವಿಜ್ಞಾನಗಳ ಮೂಲಭೂತ ಅಂಶಗಳನ್ನು ವಿದ್ಯಾರ್ಥಿಗಳು ಕಲಿಯಬಹುದು. ಇದು ಮೂರು ವರ್ಷದ ಕೋರ್ಸ್.

6. ಯೋಗದಲ್ಲಿ ಎಂ.ಎ. [M.A. in Yoga]: ಯೋಗದಲ್ಲಿ ಬಿ.ಎ. ಪೂರ್ಣಗೊಂಡ ನಂತರ, ವಿದ್ಯಾರ್ಥಿಗಳು ಈ ವಿಷಯದ ಬಗ್ಗೆ ಆಳವಾದ ಸಂಶೋಧನೆಗಾಗಿ ಯೋಗದಲ್ಲಿ ಎಂ.ಎ. ಮಾಡಬಹುದು. ಇದು ಎರಡು ವರ್ಷದ ಕೋರ್ಸ್.

7. ಯೋಗದಲ್ಲಿ ಬಿಎಸ್ಸಿ [BSc in Yoga]: ಇದು ಯೋಗದಲ್ಲಿ 3 ವರ್ಷದ ಪದವಿ ಕೋರ್ಸ್ ಆಗಿದೆ, ಇದರಲ್ಲಿ ವಿದ್ಯಾರ್ಥಿಗಳಿಗೆ ಯೋಗ ವಿಜ್ಞಾನದ ಬಗ್ಗೆ ವಿವರವಾಗಿ ವಿವರಿಸಲಾಗಿದೆ. ಅಂಗರಚನಾಶಾಸ್ತ್ರ, ದೇಹ ಮತ್ತು ಮನಸ್ಸಿನ ಮೇಲೆ ಯೋಗದ ಪ್ರಭಾವ ಮತ್ತು ಯೋಗ, ಹಠ ಯೋಗ, ಯೋಗದ ಅಂಶಗಳು ಮತ್ತು ಇನ್ನಿತರ ವಿಷಯಗಳ ಬಗ್ಗೆ ವಿವರವಾಗಿ ಕಲಿಸಲಾಗುವುದು. ಯೋಗದಲ್ಲಿ ಬಿಎಸ್ಸಿ ಕೋರ್ಸ್ ಮಾಡಲು, 12 ನೇ ತರಗತಿ ಪಾಸ್ ಆಗಿರಬೇಕು.

8. ಯೋಗದಲ್ಲಿ ಎಂಎಸ್ಸಿ [MSc in Yoga]: ಯೋಗದಲ್ಲಿ ಎಂಎಸ್ಸಿ ಮಾಡಲು, ಒಬ್ಬರು ಸ್ನಾತಕೋತ್ತರ ಪದವಿ ಹೊಂದಿರಬೇಕು. ಈ ಪಠ್ಯದಲ್ಲಿ ವಿದ್ಯಾರ್ಥಿಗಳು ಅಂಗರಚನಾಶಾಸ್ತ್ರ ಮತ್ತು ಶರೀರಶಾಸ್ತ್ರ, ವೇದಗಳು, ಉಪನಿಷತ್ತುಗಳು, ಶರೀರಶಾಸ್ತ್ರ ಮತ್ತು ಆರೋಗ್ಯ, ಯೋಗ ಚಿಕಿತ್ಸೆ, ಭಗವದ್ಗೀತೆ, ಯೋಗ ಸೂತ್ರಗಳು ಮತ್ತು ಇನ್ನೂ ಅನೇಕ ಪ್ರಾಚೀನ ಪಠ್ಯಗಳನ್ನು ಕಲಿಯುತ್ತಾರೆ.

9. ಯೋಗದಲ್ಲಿ ಪಿಜಿ ಡಿಪ್ಲೊಮಾ [PG Diploma in Yoga]: ಇದು ಎರಡು ವರ್ಷದ ಕಾರ್ಯಕ್ರಮ. ಈ ಕೋರ್ಸ್‌ಗೆ ಕನಿಷ್ಠ ಸ್ನಾತಕೋತ್ತರ ಪದವಿ ಬೇಕು. ಈ ಪಠ್ಯದಲ್ಲಿ ವಿದ್ಯಾರ್ಥಿಗಳಿಗೆ ಯೋಗ ವಿಜ್ಞಾನದ ಬಗ್ಗೆ ಆಳವಾದ ತರಬೇತಿ ನೀಡಲಾಗುತ್ತದೆ. 

Post a Comment

0 Comments