Ticker

6/recent/ticker-posts

ಮುಂಜಾನೆದ್ದು ಕುಂಬಾರಣ್ಣ ಹಾಲು ಬಾನುಂಡನ | ಕನ್ನಡ ಜಾನಪದ ಗೀತೆಗಳು

ಮುಂಜಾನೆದ್ದು ಕುಂಬಾರಣ್ಣ ಹಾಲು ಬಾನುಂಡನ | ಕನ್ನಡ ಜಾನಪದ ಗೀತೆಗಳು [Munjaaneddu Kumbaaranna Lyrics In Kannada]














ಮುಂಜಾನೆದ್ದು ಕುಂಬಾರಣ್ಣ ಹಾಲು ಬಾನುಂಡನ | Munjaaneddu Kumbaaranna Lyrics In Kannada

ಮುಂಜಾನೆದ್ದು ಕುಂಬಾರಣ್ಣ ಹಾಲು ಬಾನುಂಡನ  
ಹಾರಿ ಹಾರಿ ಮಣ್ಣಾ ತುಳಿದಾಣ
ಹಾರಿ ಹಾರಿಹಾರಿ ಮಣ್ಣಾ ತಾ ತುಳಿದು ಮಾಡ್ಯಾನ
ನಾರಿಯೇರು ಹೊರುವಂತ ಐರಾಣಿ

ಹೊತ್ತಾರೆದ್ದು ಕುಂಬಾರಣ್ಣ ತುಪ್ಪ ಬಾನುಂಡನ
ಗಟ್ಟಿಸಿ ಮಣ್ಣಾ ತುಳಿದಾಣ
ಗಟ್ಟಿಸಿ ಮಣ್ಣಾ ತುಳಿದು ತಾ ಮಾಡ್ಯಾನ
ಮೀತ್ರೇಯರು ಹೊರುವಂತ ಐರಾಣಿ

ಅಕ್ಕಿ ಹಿಟ್ಟು ನಾವು ತಕ್ಕೊಂಡು ತಂದಿವಿ
ಗಿಂಡೀಲಿ ತಂದೀವಿ ತಿಳಿದುಪ್ಪ
ಗಿಂಡೀಲಿ ತಂದೀವಿ ತಿಳಿದುಪ್ಪ ಕುಂಬಾರಣ್ಣ
ತಂದಿಡು ನಮ್ಮ ಐರಾಣಿ

ಕುಂಬಾರಣ್ಣನ ಮಡದಿ ಕಡಗದ ಕೈಯಿಕ್ಕಿ
ಕೊಡದ ಮ್ಯಾಲೆನ ಬರೆದಾಳ
ಕೊಡದ ಮ್ಯಾಲೆನ ಬರೆದಾಳ ಕಲ್ಯಾಣದ
ಶರಣ ಬಸವನ ನಿಲಿಸ್ಯಾಳ

Post a Comment

1 Comments

  1. Please explain the meaning of this folk song

    ReplyDelete

Comment is awaiting for approval