Ticker

6/recent/ticker-posts

ಪ್ರಭಾಸ್ ಅವರ ಸಾಹೋ ಚಿತ್ರ ಫ್ರೆಂಚ್ ಚಿತ್ರದ ಕಾಪಿಯೇ ?

ಪ್ರಭಾಸ್ ಅವರ ಸಾಹೋ ಚಿತ್ರ ಫ್ರೆಂಚ್ ಚಿತ್ರದ ಕಾಪಿಯೇ ? | Is Prabhas's 'Saaho' a copy of the French film?


ರಾಜಮೌಳಿ ನಿರ್ದೇಶಿಸಿದ ‘ಬಾಹುಬಲಿ’  ಚಿತ್ರ ತೆಲುಗು ನಟ ಪ್ರಭಾಸ್ ಅವರನ್ನು ಭಾರತದಾದ್ಯಂತದ ಅಭಿಮಾನಿಗಳಿಗೆ ಪರಿಚಯಿಸಿತುಬಾಹುಬಲಿ ದೊಡ್ಡ ಯಶಸ್ಸಿನ ನಂತರ, ಪ್ರಭಾಸ್ ಅವರ ಮುಂದಿನ ಚಿತ್ರಗಳ ಬಗ್ಗೆ ಪ್ರೇಕ್ಷಕರಲ್ಲಿ ಹೆಚ್ಚಿನ ನಿರೀಕ್ಷೆ ಇತ್ತು. ಅಭಿಮಾನಿಗಳ ನಿರೀಕ್ಷೆಗಳನ್ನು ಈಡೇರಿಸುವ ಒತ್ತಡ ಪ್ರಭಾಸ್ ಅವರಿಗೂ ಇತ್ತು.

ಬಾಹುಬಲಿಯ ನಂತರ ಅವರು ಸಾಹೋ ಚಿತ್ರವನ್ನು ಆಯ್ಕೆ ಮಾಡಿದರು. ಸುಮಾರು 350 ಕೋಟಿ ಬಾರಿ ಬಜೆಟ್ನಲ್ಲಿ  ನಿರ್ಮಾಣವಾದ ಈ ಚಿತ್ರವನ್ನು ಸುಜಿತ್ ನಿರ್ದೇಶಿಸಿದರು. ಸುಮಾರು ಎರಡು ವರ್ಷಗಳ ಕಾಲದ ನಿರ್ಮಾಣ ಹಂತದಲ್ಲಿದ್ದ ಸಾಹೋ ಚಿತ್ರ, ಕಳೆದ ತಿಂಗಳು 29 ರಂದು ವಿಶ್ವದಾದ್ಯಂತ ಪ್ರದರ್ಶನಗೊಂಡಿತು. ತಮಿಳು, ತೆಲುಗು ಮತ್ತು ಹಿಂದಿ ಭಾಷೆಗಳಲ್ಲಿ ಬಿಡುಗಡೆಯಾದ ಚಿತ್ರಕ್ಕೆ ಪ್ರೇಕ್ಷಕರಿಂದ ಮಿಶ್ರ ಪ್ರತಿಕ್ರಿಯೆ ದೊರೆತಿದೆ.

ಈ ನಡುವೆ ಫ್ರೆಂಚ್ ನಿರ್ದೇಶಕ ಜೆರೋಮ್ ಸಲ್ಲೆ [Jérôme Salle] ಪ್ರಭಾಸ್ ಅವರ ಸಾಹೋ ಚಿತ್ರದ ಕಥೆ  ತನ್ನದು ಎಂದು ಆರೋಪಿಸಿದ್ದಾರೆ. ಆಗಸ್ಟ್ 30 ರಂದು, ಮುಂಬೈನ ವ್ಯಕ್ತಿಯೊಬ್ಬರು ನಿಮ್ಮ 'ಲಾರ್ಗೊ ವಿಂಚ್' [Largo Winch]  ಮತ್ತೊಂದು ಉಚಿತ ಆವೃತ್ತಿಯನ್ನು ಭಾರತದಲ್ಲಿ ತಯಾರಿಸಿದ್ದಾರೆ. ನೀವೇ ನಿಜವಾದ ಗುರುಜಿ ಎಂದು ಜೆರೋಮ್ ಸಲ್ಲೆ ಅವರನ್ನು ಟ್ಯಾಗ್  ಮಾಡಿ ಟ್ವಿಟರ್ನಲ್ಲಿ ಪೋಸ್ಟ್ ಮಾಡಿದ್ದರು.

ಅವರಿಗೆ ಪ್ರತಿಕ್ರಯಿಸಿದ  ಜೆರೋಮ್, "ನನಗೆ ಭಾರತದಲ್ಲಿ ಉತ್ತಮ ಭವಿಷ್ಯವಿದೆ ಎಂದು ನಾನು ಭಾವಿಸುತ್ತೇನೆ" ಎಂದು ಟ್ವೀಟ್ ಮಾಡಿದ್ದರು. ಜೆರೋಮ್ ಅವರ ಈ ಟ್ವೀಟ್  ಅವರ ಅಭಿಮಾನಿಗಳನ್ನು ಗೊಂದಲಗೊಳಿಸಿತು. ಅವರು ಇದನ್ನು ಏಕೆ ಹೇಳುತ್ತಿದ್ದಾರೆ ಎಂದು ಹಲವರು ಪ್ರಶ್ನಿಸಿದ್ದರು.

ಸಂದರ್ಭದಲ್ಲಿ, ಕಳೆದ ಸೆಪ್ಟೆಂಬರ್ 1 ರಂದು, ಎಲ್ಲರ ಪ್ರಶ್ನೆಗಳಿಗೂ ಉತ್ತರವೆಂಬಂತೆ ಮತ್ತೆ ಒಂದು ಟ್ವೀಟ್ ಮಾಡಿದರು ಜೆರೋಮ್. ಆ ಟ್ವೀಟ್ ನಲ್ಲಿ ಅವರು ಹೀಗೆ ಹೇಳಿದ್ದಾರೆ.. 

‘ನನ್ನಲಾರ್ಗೊ ವಿಂಚ್‌’ ಚಿತ್ರದ ಎರಡನೇ ‘ಫ್ರೀ ಮೇಕ್’’ ಕೂಡ  ಮೊದಲ ಚಿತ್ರದ ಹಾಗೆ ಕೆಟ್ಟದಾಗಿದೆ.  ಆದ್ದರಿಂದ ತೆಲುಗು ನಿರ್ದೇಶಕರೇ, ನೀವು ನನ್ನ ಕೆಲಸವನ್ನು ಕದಿಯಲು ಬಯಸಿದರೆ ದಯವಿಟ್ಟು ಅದನ್ನು ಸರಿಯಾಗಿ ಮಾಡಿ. ಹಿಂದೆ ನಾನು ಮಾಡಿದ್ದ   ನನಗೆ ಭಾರತದಲ್ಲಿ ಉತ್ತಮ ಭವಿಷ್ಯವಿದೆ’ ಟ್ವೀಟ್ ನಿಜವಾಗಲೂ ವಿಪರ್ಯಾಸ. ಕ್ಷಮಿಸಿ, ಆದರೆ ನಾನು ಅಸಹಯಕನಾಗಿದ್ದೇನೆ "



ಲಾರ್ಗೊ ವಿಂಚ್ ಚಿತ್ರದ ಎರಡನೇ ರಿಮೇಕ್  "ಸಾಹೋ " ಎಂದು ಜೆರೋಮ್ ಹೇಳಿದ್ದಾರೆ. ಹಾಗಾದರೆ ಮೊದಲನೇ ಚಿತ್ರ ಯಾವುದು ಎಂಬುದು ಎಲ್ಲರ ಪ್ರಶ್ನೆ. ಕಳೆದ ವರ್ಷ,  ತ್ರಿವಿಕ್ರಮ್ ಶ್ರೀನಿವಾಸ್ ನಿರ್ದೇಶನದ  ಹಾಗು ಪವನ್ ಕಲ್ಯಾಣ್ ನಟಿಸಿದ ತೆಲುಗು ಚಿತ್ರ ‘ಅಜ್ಞಾತವಾಸಿ ' ಕೂಡ  ಲಾರ್ಗೊ ವಿಂಚ್ ಕಥೆಯನ್ನು ಆಧರಿಸಿದ ಚಿತ್ರವೆಂಬುದು ತಿಳಿದು ಬಂದಿದೆ . ಆಗ ಕೂಡ ಜೆರೋಮ್ ಇದೇ ರೀತಿಯ ಪ್ರಶ್ನೆ ಎತ್ತಿದ್ದು ಗಮನಿಸಬೇಕಾದ ಸಂಗತಿ.

ಸರಿಯಾದ ರೀತಿಯಲ್ಲಿ ಕೃತಿಸ್ವಾಮ್ಯ ಪಡೆದು ಚಿತ್ರಗಳ್ಳನ್ನು  ಮಾಡಿದರೆ  ಎಲ್ಲರಿಗು ಒಳ್ಳೆಯದು ಹಾಗು ಭಾರತ ಚಿತ್ರರಂಗವೂ  ಸಹ ವಿಶ್ವ ಮಟ್ಟದಲ್ಲಿ ತನ್ನ ಹೆಸರನ್ನು ಕಾಪಾಡಾಯಿಕೊಳ್ಳಲು ಸಹಕಾರಿಯಾಗುತ್ತದೆ.  

Post a Comment

0 Comments