Ticker

6/recent/ticker-posts

ದೇವನೂರು ಮಹಾದೇವ [Devanuru Mahadeva] ಅವರಿಗೆ ಕುವೆಂಪು ರಾಷ್ಟ್ರೀಯ ಪುರಸ್ಕಾರ

ಕನ್ನಡದ ಖ್ಯಾತ ಸಾಹಿತಿ ದೇವನೂರು ಮಹಾದೇವ [Devanuru Mahadeva] ಅವರು 2016 ರ ಸಾಲಿನ "ಕುವೆಂಪು ರಾಷ್ಟ್ರೀಯ ಪುರಸ್ಕಾರ'ಕ್ಕೆ ಆಯ್ಕೆಯಾಗಿದ್ದಾರೆ.

ಕುಪ್ಪಳ್ಳಿಯ ರಾಷ್ಟ್ರಕವಿ ಕುವೆಂಪು ಪ್ರತಿಷ್ಠಾನದ ವತಿಯಿಂದ ನೀಡಲಾಗುವ  "ಕುವೆಂಪು ರಾಷ್ಟ್ರೀಯ ಪುರಸ್ಕಾರ' ವನ್ನು ಈ ವರ್ಷ ದೇವನೂರು ಮಹಾದೇವ ಅವರಿಗೆ ನೀಡಲಾಗಿದೆ.

ದೆಹಲಿ ಕರ್ನಾಟಕ ಸಂಘ‌ದಲ್ಲಿ ಬುಧವಾರ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಪ್ರತಿಷ್ಠಾನದ ಅಧ್ಯಕ್ಷ ಹಂ.ಪ.ನಾಗರಾಜಯ್ಯ ಅವರು, ಕುವೆಂಪು ಪ್ರತಿಪಾದಿಸಿದ ವೈಜ್ಞಾನಿಕ ದೃಷ್ಠಿಕೋನ, ವೈಚಾರಿಕ ಪ್ರಜ್ಞೆಯನ್ನು ಮಹಾದೇವ ಮೈಗೂಡಿಸಿಕೊಂಡಿದ್ದಾರೆ. ಸಾಮಾನ್ಯವಾಗಿ ಪ್ರಶಸ್ತಿ-ಪುರಸ್ಕಾರಗಳಿಂದ ದೂರ ನಿಲ್ಲುವ ದೇವನೂರು ಅವರು ಈ ಪ್ರಶಸ್ತಿ ಸ್ವೀಕರಿಸಲು ಒಪ್ಪಿದ್ದು, ಸಂತಸ ತಂದಿದೆ ಎಂದರು.

ಕುವೆಂಪು ಅವರ ಜನ್ಮದಿನವಾದ ಡಿ.29ರಂದು ಕುವೆಂಪು ಅವರ ಹುಟ್ಟೂರು ಶಿವಮೊಗ್ಗ ಜಿಲ್ಲೆ ತೀರ್ಥಹಳ್ಳಿ ತಾಲೂಕಿನ
ಕುಪ್ಪಳ್ಳಿಯಲ್ಲಿ ನಡೆಯಲಿರುವ ಸಮಾರಂಭದಲ್ಲಿ ಪ್ರಶಸ್ತಿ ಪ್ರದಾನ ಮಾಡಲಾಗುವುದು. ಪ್ರಶಸ್ತಿ 5 ಲಕ್ಷ ರೂ.ನಗದು
ಮತ್ತು ಸನ್ಮಾನ ಪತ್ರ ಒಳಗೊಂಡಿದೆ ಎಂದು ತಿಳಿಸಿದ್ದಾರೆ.

Source: at http://www.udayavani.com/kannada/news/state-news/172484/devanuru-mahadeva-is-conferred-kuvempu-award#ez7y3eZt8Bkh765O.99

Post a Comment

0 Comments