Ticker

6/recent/ticker-posts

ಬೆಂಗಳೂರಿನಲ್ಲಿ 124 ಅನಧಿಕೃತ ಬಡಾವಣೆಗಳು

ಬೆಂಗಳೂರಿನಲ್ಲಿ 124 ಅನಧಿಕೃತ ಬಡಾವಣೆಗಳು

ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ಅನಧಿಕೃತ ಬಡವಾಣೆಗಳ ಸಂಖ್ಯೆ ಹೆಚ್ಚಿದೆ. ಇದರ ಬಗ್ಗೆ ಬಿಡಿಎ ಅನಧಿಕೃತ ಬಡಾವಣೆಗಳ ಪಟ್ಟಿಯನ್ನು ಇತ್ತೀಚೆಗೆ ನೀಡಿದ್ದು ಅದರಲ್ಲಿ ದೊಡ್ಡ ದೊಡ್ಡ ಲೇಔಟ್‍ಗಳೇ ಅನಧಿಕೃತವಾಗಿ ನಿರ್ಮಾಣವಾಗಿವೆ ಎಂದು ಮಾಹಿತಿ ನೀಡಿದೆ.

ಆರ್‍ಟಿಐ ಕಾರ್ಯಕರ್ತ ಸಾಯಿದತ್ತ ಸಲ್ಲಿಸಿದ ಮಾಹಿತಿ ಹಕ್ಕು ಅರ್ಜಿಗೆ ಬಿಡಿಎ ನೀಡಿರುವ ಮಾಹಿತಿ ಬೆಚ್ಚಿ ಬೀಳುವಂತೆ ಮಾಡಿದೆ. ಬೆಂಗಳೂರಿನಲ್ಲಿ 124 ಅನಧಿಕೃತ ಬಡಾವಣೆಗಳು ನಿರ್ಮಾಣಗೊಂಡಿವೆ ಅಂತ ಬಿಡಿಎ ಅಧಿಕೃತವಾಗಿ ಒಪ್ಪಿಕೊಂಡು ಮಾಹಿತಿ ನೀಡಿದೆ. ಈ ಅನಧಿಕೃತ ಬಡಾವಣೆಗಳ ನಿರ್ಮಾಣದಲ್ಲಿ ದೊಡ್ಡ ದೊಡ್ಡ ಬಿಲ್ಡರ್‍ಗಳ ಕೂಡ ಮುಖ್ಯ ಪಾತ್ರ ವಹಿಸಿದ್ದಾರೆ.

ಅನಧಿಕೃತ ಲೇಔಟ್ ನಿರ್ಮಿಸಿರುವ ಪ್ರಮುಖ ಬಿಲ್ಡರ್‍ಗಳು:

ರಾಮಯ್ಯ ಎನ್‍ಕ್ಲೇವ್, ರೇನ್‍ಬೋ ಬಿಲ್ಡರ್ಸ್ ಅಂಡ್ ಡೆವಲಪರ್ಸ್ ಎನ್.ಎಸ್.ಲ್ಯಾಂಡ್ ಡೆವಲಪರ್ಸ್,ಭಾಗ್ಯಶ್ರೀ ಡೆವಲಪರ್ಸ್, ರಾಯಲ್ ಡೆವಲಪರ್ಸ್ ಅಂಡ್ ಬಿಲ್ಡರ್ಸ್, ದುರ್ಗಾಶ್ರೀ ಬಿಲ್ಡರ್ಸ್.

ಈ ಅನಧಿಕೃತ ಲೇಔಟ್‍ಗಳ ವಿರುದ್ದ ಕ್ರಮ ಕೈಗೊಳ್ಳಿ ಎಂದು ಹಿರಿಯ ಅಧಿಕಾರಿಗಳಿಗೆ ದೂರು ನೀಡಿದ್ದರೂ ಯಾವುದೇ ಪ್ರಯೋಜನವಾಗಿಲ್ಲ. ಹಾಗಾಗಿ ಇದರ ಬಗ್ಗೆ ಇನ್ನೊಂದಿಷ್ಟು ದಾಖಲಾತಿಗಳೊಂದಿಗೆ ಅನಧಿಕೃತ ಬಡಾವಣೆಗಳ ವಿರುದ್ದ ಕ್ರಮ ಕೈಗೊಳ್ಳದ ಅಧಿಕಾರಿಗಳ ವಿರುದ್ಧ ಕೋರ್ಟ್ ಮೊರೆ ಹೋಗುತ್ತೇನೆ ಎಂದು ಆರ್‍ಟಿಐ ಕಾರ್ಯಕರ್ತ ಸಾಯಿದತ್ತ ತಿಳಿಸಿದ್ದಾರೆ.
ಒಟ್ಟಿನಲ್ಲಿ ಬಿಡಿಎ ಅನ್ನೋದು ಭ್ರಷ್ಟರ ಡೆವಲಪ್‍ಮೆಂಟ್ ಅಥಾರಟಿ ಎನ್ನುವುದು ಮತ್ತೊಮ್ಮೆ ಸಾಬೀತಾಗಿದೆ.

Source:  http://publictv.in/bda-unauthorized-layout-full-list-bengaluru-rti/#i1cqqYx8YDzYdD6v.99


Post a Comment

0 Comments