Ticker

6/recent/ticker-posts

"ರಂಗಯಾನ" ತಂಡದ "ಕುಲಂ" ನಾಟಕ ಪ್ರದರ್ಶನ

8-12-2015 ರಂದು ಕಲಾಗ್ರಾಮದಲ್ಲಿ "ರಂಗಯಾನ" ತಂಡದ "ಕುಲಂ" ನಾಟಕ ಪ್ರದರ್ಶನವಿತ್ತು. ಲೈಟ್ಸ್ ಗಳ ಗೋಜಿಲ್ಲದೆ ದೀಪಗಳಿಂದಲೇ ಇಡಿ ನಾಟಕವನ್ನು ಪ್ರದರ್ಶಿಸಿದ್ದು ಒಂದು ಹೊಸ ಪ್ರಯೋಗ. 

ಮಹಾಭಾರತದ ಕರ್ಣನ ಹುಟ್ಟು, ಬೆಳವಣಿಗೆ, ಕುರುಕ್ಷೇತ್ರ ಯುದ್ಧ ಶುರುವಾದಾಗ ಅವನ ಬೇರೆ ಕುಲದವನೆಂದು ಎಲ್ಲರೂ ಅವನನ್ನು ಹಂಗಿಸುವುದು, ಅವನ ತೇಜೋವಧೆ ಮಾಡುವುದು. ಇದರಿಂದ ಅವನಿಗೆ ಬೇಸರವಾಗಿ ಏನನ್ನು ಮಾಡಲಾಗದೆ ತನ್ನ ತನವನ್ನು ಬಿಟ್ಟು ಕೊಡದೆ ಮಡಿದ ದಿಟ್ಟ ಧೀರನ ಕಥೆ. 

ಪಾತ್ರ ಮಾಡಿದ ಅಷ್ಟು ಜನ ಕಲಾವಿದರು ಪಾತ್ರಕ್ಕೆ ನ್ಯಾಯ ಒದಗಿಸಿದ್ದಾರೆ. ಅದರಲ್ಲಿ, ಕರ್ಣ ಪಾತ್ರ ಮಾಡಿದ ನಿತಿನ್ ಬಸವರಾಜು ಅವರ ಅಭಿನಯ, ಭಾವನೆಗಳ ಏರಿಳಿತ, ಮಾತಿನ ಓಘ, ಉದ್ದುದ ಮಾತುಗಳನ್ನು ಸ್ಪಷ್ಟವಾಗಿ ಹೇಳುವ ಶೈಲಿ, ಎಲ್ಲವು ನೋಡಿದರೆ ಈ ಪಾತ್ರ ಇವನಿಗೆ ಬರೆದಿದೆ ಅಂತ ಅನ್ಸುತ್ತೆ. 

ಕುಂತಿಯ ಪಾತ್ರಧಾರಿಯದು ಅನುಪಮ ಅಭಿನಯ ಅದರಲ್ಲಿ ವಿವಿಧ ರಸಗಳ ಭಾವಭಿವ್ಯಕ್ತಿ ತುಂಬಾ ಸೊಗಸಾಗಿ ಮೂಡಿದೆ. ಒಮ್ಮೆ ಖುಷಿ, ಮತ್ತೊಮ್ಮೆ ಅಳು, ಮಗದೊಮ್ಮೆ ತನ್ನ ಮೇಲೆಯೇ ಕೋಪ, ಮನಸಿನ ತುಮುಲ ಇದೆಲ್ಲವನ್ನು ತುಂಬಾ ಅಚ್ಚುಕಟ್ಟಾಗಿ ನಿಭಾಯಿಸಿದ್ದಾರೆ. 

ಸಹದೇವನ ಪಾತ್ರ ಮಾಡಿದ ಶ್ರೀ ಮಂಜು ಗೌಡ ಅವರದ್ದು ಮತ್ತೊಂದು ಮಜಲು, ಎಲ್ಲವು ಗೊತ್ತಿದೆ ಅಂತ ತಿಳಿದಾಗಲು ಏನು ಮಾಡಲಾಗದ ಸ್ತಿತಿ ಅವನದ್ದು. ಇದನ್ನು ತಮ್ಮ ಅಭಿನಯ ಕೌಶಲದಿಂದ ತುಂಬಾ ಚೆನ್ನಾಗಿ ನಿಭಾಯಿಸಿದ್ದಾರೆ. 
 ರಾಧೆ ಪಾತ್ರಧಾರಿಯು ತನ್ನ ಪಾತ್ರಕ್ಕೆ ಪರಕಾಯ ಪ್ರವೇಶ ಮಾಡಿದ್ದಾರೆ. 

ಒಟ್ಟಾರೆ ಎಲ್ಲರು ಸಾಕಷ್ಟು ಶ್ರಮ ವಹಿಸಿ ಒಂದೊಳ್ಳೆ ನಾಟಕವನ್ನು ರಂಗದ ಮೇಲೆ ತಂದಿದ್ದಾರೆ. ಜೊತೆಗೆ ವೇಷಭೂಷಣದಲ್ಲಿ ದ್ರಾವಿಡ ಶೈಲಿಯಲ್ಲಿ ಇರುವುದು ನಾಟಕದ ಅಂದವನ್ನು ಹೆಚ್ಚಿಸಿದೆ.

- ಮಿಥುನ್ ಶೆಟ್ರು


Post a Comment

0 Comments