Ticker

6/recent/ticker-posts

ಖ್ಯಾತ ಹಿರಿಯ ನಟ ದಿಲೀಪ್‌ ಕುಮಾರ್‌ಗೆ ಪದ್ಮವಿಭೂಷಣ ಪ್ರಶಸ್ತಿ

ಭಾರತೀಯ ಚಿತ್ರರಂಗದ ಖ್ಯಾತ  ಹಿರಿಯ ನಟ ದಿಲೀಪ್‌ ಕುಮಾರ್ [Dilip kumar] ಅವರಿಗೆ ಕೇಂದ್ರ ಗೃಹ ಸಚಿವ ರಾಜನಾಥ್ ಸಿಂಗ್ ಪದ್ಮವಿಭೂಷಣ ಪ್ರಶಸ್ತಿ ನೀಡಿ ಗೌರವಿಸಿದ್ದಾರೆ.

ದಿಲೀಪ್‌ ಕುಮಾರ್ [ ಮಹಮದ್ ಯೂಸುಫ್ ಖಾನ್ ] ಹಿಂದಿ ಚಿತ್ರರಂಗದಲ್ಲಿ ತಮ್ಮ ಅದ್ಭುತ ನಟನೆಯ ಮೂಲಕ ಪ್ರೇಕ್ಷಕರ ಮನಸನ್ನು ಗೆದ್ದ  ಮೇರು ನಟ.

ಅಂದಾಜ್ , ಆನ್, ದೇವದಾಸ್ , ಮಧುಮತಿ , ನಯ ದೌರ್, ಗಂಗಾ ಜಮುನಾ ,ಮುಗಲ್ ಈ ಆಜಂ ಮುಂತಾದ ಯಶಸ್ವಿ ಚಿತ್ರಗಳ ಮೂಲಕ ಜನರ ಮನದಲ್ಲಿ ಮನೆಮಾಡಿದ ದಿಲೀಪ್‌ಕುಮಾರ್, ಹಲವು ನಟರಿಗೆ ಆದರ್ಶವಾಗಿದ್ದರೆ.



೧೯೨೨, ಡಿಸೆಂಬರ್ ೧೧ ರಂದು ಪೆಶಾವರ್ [ಪಾಕಿಸ್ತಾನ] ನಲ್ಲಿ ಜನಿಸಿದ ದಿಲೀಪ್‌ಕುಮಾರ್ ಅವರ ಹುಟ್ಟು ಹೆಸರು ಮಹಮದ್ ಯೂಸುಫ್ ಖಾನ್. ಮಹಮದ್ ಯೂಸುಫ್ ಖಾನ್, ನಾಸಿಕ್ ನಲ್ಲಿ ತಮ್ಮ ಶಾಲಾ ವಿಧ್ಯಬ್ಯಾಸವನ್ನು ಮುಗಿಸಿದರು. ೧೯೩೦ ರ ಅವದಿಯಲ್ಲಿ ಮಹಮದ್ ಯೂಸುಫ್ ಖಾನ್ ಅವರ ಕುಟುಂಬ ಮುಂಬೈಗೆ ಬಂದು ನೆಲೆಸಿತು.

೧೯೪೦ ರಲ್ಲಿ ತಮ್ಮ ತಂದೆಯೊಂದಿಗೆ  ಉಂಟಾದ ಮನಸ್ತಾಪದಿಂದ ಮಹಮದ್ ಯೂಸುಫ್ ಖಾನ್ ಪುಣೆಗೆ ಹೋದರು . ತನ್ನ ತಂದೆಯ ಹಳೆಯ ಗೆಳೆಯ, ತಾಜ್ ಮಹಮದ್ ಶಾ ಎಂಬ ಕ್ಯಾಂಟೀನ್ ಕಂಟ್ರಾಕ್ಟರ್ ನ ಸಹಾಯದಿಂದ ಅಲ್ಲಿನ ಆರ್ಮಿ ಕ್ಲಬ್ನಲ್ಲಿ ಒಂದು ಸ್ಯಾಂಡ್ವಿಚ್ ಸ್ಟಾಲ್ ನ್ನು ತೆರೆದರು. ಕಾಂಟ್ರಾಕ್ಟ್ ಮುಗಿದ ನಂತರ ಅವರು ಮತ್ತೆ ಮುಂಬೈಗೆ ಮರಳಿದರು .

೧೯೪೨ ರಲ್ಲಿ ಮಹಮದ್ ಯೂಸುಫ್ ಖಾನ್, ಮುಂಬೈನ ಚರ್ಚ್ ಗೇಟ್ ಸ್ಟೇಷನ್ ನಲ್ಲಿ ಡಾ . ಮಸನಿ ಅವರನ್ನು ಬೇಟಿಯಾದರು. ಮಸನಿ ಅವರನ್ನು ಮಲಾಡ್ ನ ಬಾಂಬೆ ಟಾಕಿಸ್ ಗೆ ಕರೆದು ಕೊಂಡು  ಹೋದರು. ಅಲ್ಲಿ ಅವರು ನಟಿ ದೇವಿಕ ರಾಣಿಯನ್ನು ಬೇಟಿಯಾದರು. ಅಲ್ಲಿ ಮೊದಲು ಅವರು ಕಥೆ, ಚಿತ್ರಕಥೆ ಮುಂತಾದ ಕ್ಷೇತ್ರದಲ್ಲಿ ಕೆಲಸ ಮಾಡಲು ತೊಡಗಿದರು.

೧೯೪೪ ರಲ್ಲಿ 'ಜ್ವರ್  ಭಾತ' [Jwar Bhata] ಚಿತ್ರ ಮೂಲಕ ದಿಲೀಪ್ ಕುಮಾರ್ ನಟನಾಗಿ ಚಿತ್ರರಂಗದಲ್ಲಿ ಪಾದಾರ್ಪಣೆ ಮಾಡಿದರು. ದೇವಿಕ ರಾಣಿಯರ ಸಲಹೆಯ ಮೇರೆಗೆ ಮಹಮದ್ ಯೂಸುಫ್ ಖಾನ್ ಎಂಬ ತಮ್ಮ ಹೆಸರನ್ನು ದಿಲೀಪ್ ಕುಮಾರ್ ಎಂದು ಬದಲಾಯಿಸಿಕೊಂಡರು .  ಮುಂದೆ ದಿಲೀಪ್ ಕುಮಾರ್ ಮಾಡಿದೆಲ್ಲ ಇತಿಹಾಸ. 
ಇಂದು ದಿಲೀಪ್ ಕುಮಾರ್ ಎಂಬುದು ಭಾರತದ ಚಿತ್ರರಂಗದ ಇತಿಹಾಸದ ಪುಟಗಳಲ್ಲಿ ರಾರಾಜಿಸುತ್ತಿರುವ ಹೆಸರು .

ಫಿಲಂಫೇರ್ ನ ಉತ್ತಮ ನಟ ಪ್ರಶಸ್ತಿಯನ್ನು ಮೊದಲು ಬಾರಿಗೆ ೧೯೫೪ ರಲ್ಲಿ ದಿಲೀಪ್‌ ಕುಮಾರ್ ಪಡೆದರು. 

೧೯೯೧ ರ ಪದ್ಮಭೂಷಣ , ೧೯೯೩ರಲ್ಲಿ ಅತ್ಯುನ್ನತವಾದ ದಾದಾಸಾಹೇಬ್ ಫಾಲ್ಕೆ ಪ್ರಶಸ್ತಿ, ೧೯೯೭ ರ ಪಾಕಿಸ್ತಾನ ಸರ್ಕಾರದ 'ನಿಶಾನ್ ಈ ಇಮ್ತಿಯಾಜ್' ಪ್ರಶಸ್ತಿ , ೮ ಬಾರಿ ಫಿಲಂಫೇರ್ ಪ್ರಶಸ್ತಿ ಸೇರಿದಂತೆ ಅತಿ ಹೆಚ್ಚು ಪ್ರಶಸ್ತಿಗಳನ್ನು ಪಡೆದ ಭಾರತೀಯ ನಟ ಎಂಬ ಹೆಗ್ಗಳಿಕೆ ದಿಲೀಪ್‌ಕುಮಾರ್ ಅವರದು.

ಎರಡು ದಿನಗಳ ಹಿಂದೆಯಷ್ಟೇ ತಮ್ಮ ೯೩ ನೆ ಹುಟ್ಟುಹಬ್ಬವನ್ನು ಆಚರಿಸಿದ ದಿಲೀಪ್ ಕುಮಾರ್ ಅವರಿಗೆ, ದೇಶದ ಎರಡನೇ ಅತ್ಯುತ್ತಮ ಪ್ರಶಸ್ತಿಯಾದ ಪದ್ಮವಿಭೂಷಣವನ್ನು ನೀಡುವ ಮೂಲಕ, ಸರ್ಕಾರ ದಿಲೀಪ್ ಕುಮಾರ್ ಅವರಿಗೆ ಒಂದು ಮರೆಯಲಾಗದ ಉಡುಗೊರೆಯನ್ನು ನೀಡಿದಂತೆ ಆಗಿದೆ. 


Post a Comment

0 Comments