1981 ರಲ್ಲಿ ಭಾರ್ಗವ ಅವರ ನಿರ್ದೇಶನದಲ್ಲಿ, ವಿಷ್ಣುವರ್ಧನ್ ಹಾಗು ಲಕ್ಷ್ಮಿ ಅವರ ತಾರಾಗಣದಲ್ಲಿ ಮೂಡಿಬಂದ ಅವಳ ಹೆಜ್ಜೆ [Avala Hejje] ಚಿತ್ರದ ಸೊಗಸಾದ ಹಾಡು ನೆರಳನು ಕಾಣದ ಲತೆಯಂತೆ [Neralanu Kaanadha Latheyanthe].
ರಾಜನ್ ನಾಗೇಂದ್ರ ಅವರ ಸಂಗೀತದಲ್ಲಿ, ಚಿ.ಉದಯ್ ಶಂಕರ್ ಅವರ ಸಾಹಿತ್ಯದ ಈ ಗೀತೆಯನ್ನು ಎಸ್.ಪಿ.ಬಾಲಸುಬ್ರಮಣ್ಯಂ ಅವರು ಬಹಳ ಸೊಗಸಾಗಿ ಹಾಡಿದ್ದಾರೆ.
ನೆರಳನು ಕಾಣದ ಲತೆಯಂತೆ
ಬಿಸಿಲಿಗೆ ಬಾಡಿದ ಹೂವಂತೆ
ಸೋತಿದೆ ಈ ಮೊಗವೇಕೆ
ಏನು ನಿನ್ನ ಚಿಂತೆ, ಹೇಳೇ ನನ್ನ ಕಾಂತೆ
ಏನು ನಿನ್ನ ಚಿಂತೆ, ಹೇಳೇ ನನ್ನ ಕಾಂತೆ
ಏನು ನಿನ್ನ ಚಿಂತೆ, ಹೇಳೇ ನನ್ನ ಕಾಂತೆ
ನೆರಳನು ಕಾಣದ ಲತೆಯಂತೆ
ಬಿಸಿಲಿಗೆ ಬಾಡಿದ ಹೂವಂತೆ
ಬಿಸಿಲಿಗೆ ಬಾಡಿದ ಹೂವಂತೆ
ಏನು ನಿನ್ನ ಚಿಂತೆ, ಹೇಳೇ ನನ್ನ ಕಾಂತೆ
ಏನು ನಿನ್ನ ಚಿಂತೆ, ಹೇಳೇ ನನ್ನ ಕಾಂತೆ
ಏನು ನಿನ್ನ ಚಿಂತೆ, ಹೇಳೇ ನನ್ನ ಕಾಂತೆ
ನಯನದಲಿ ಕಾಂತಿ ಇಲ್ಲಾ, ತುಟಿಗಳಲಿ ನಗುವೇ ಇಲ್ಲಾ,
ಸವಿಯಾದ ಮಾತನು ಇಂದೇಕೋ ಕಾಣೆನು.
ನಿನ್ನ ಮನಸು ನಾನು ಬಲ್ಲೆ, ನಿನ್ನ ವಿಷಯವೆಲ್ಲ ಬಲ್ಲೆ,
ನೀನೇನು ಹೇಳದೆ, ನಾನೆಲ್ಲಾ ಹೇಳಲೇ
ಏನಿಂತ ನಾಚಿಕೆ, ಕಣ್ಣೀರು ಏತಕೆ.
ನೆರಳನು ಕಾಣದ ಲತೆಯಂತೆ
ಬಿಸಿಲಿಗೆ ಬಾಡಿದ ಹೂವಂತೆ
ಬಿಸಿಲಿಗೆ ಬಾಡಿದ ಹೂವಂತೆ
ಏನು ನಿನ್ನ ಚಿಂತೆ,ಹೇಳೇ ನನ್ನ ಕಾಂತೆ
ಏನು ನಿನ್ನ ಚಿಂತೆ,ಹೇಳೇ ನನ್ನ ಕಾಂತೆ
ಏನು ನಿನ್ನ ಚಿಂತೆ,ಹೇಳೇ ನನ್ನ ಕಾಂತೆ
ಈ ಗುಡಿಯ ದೇವಿ ನೀನು, ಈ ತನುವಾ ಪ್ರಾಣ ನೀನು,
ಬಾಳಲ್ಲಿ ನೆಮ್ಮದಿ, ನಿನ್ನಿಂದ ಕಂಡೆನು,
ನೀ ಅಳಲು ನೋಡಲಾರೆ, ನೀ ಇರದೇ ಬಾಳಲಾರೆ,
ನನ್ನಲ್ಲಿ ಕೋಪವೇ, ನಾ ನಿನಗೆ ಬೇಡವೇ,
ನೀ ದೂರವಾದರೆ ನನಗಾರು ಆಸರೆ
ನೆರಳನು ಕಾಣದ ಲತೆಯಂತೆ
ಬಿಸಿಲಿಗೆ ಬಾಡಿದ ಹೂವಂತೆ
ಬಿಸಿಲಿಗೆ ಬಾಡಿದ ಹೂವಂತೆ
ಸೋತಿದೆ ಈ ಮೊಗವೇಕೆ
ಏನು ನಿನ್ನ ಚಿಂತೆ, ಹೇಳೇ ನನ್ನ ಕಾಂತೆ
ಏನು ನಿನ್ನ ಚಿಂತೆ, ಹೇಳೇ ನನ್ನ ಕಾಂತೆ
ಏನು ನಿನ್ನ ಚಿಂತೆ, ಹೇಳೇ ನನ್ನ ಕಾಂತೆ
ನೆರಳನು ಕಾಣದ ಲತೆಯಂತೆ
ಬಿಸಿಲಿಗೆ ಬಾಡಿದ ಹೂವಂತೆ
ಬಿಸಿಲಿಗೆ ಬಾಡಿದ ಹೂವಂತೆ
ಏನು ನಿನ್ನ ಚಿಂತೆ, ಹೇಳೇ ನನ್ನ ಕಾಂತೆ
ಏನು ನಿನ್ನ ಚಿಂತೆ, ಹೇಳೇ ನನ್ನ ಕಾಂತೆ
ಏನು ನಿನ್ನ ಚಿಂತೆ, ಹೇಳೇ ನನ್ನ ಕಾಂತೆ
0 Comments
Comment is awaiting for approval