Ticker

6/recent/ticker-posts

ಮಂಕುತಿಮ್ಮನ ಕಗ್ಗ ಆ್ಯಪ್‌

ಬೆಂಗಳೂರು: ಇತ್ತೀಚೆಗೆ ಸುದ್ದಿಪತ್ರಿಕೆಯೊಂದರಲ್ಲಿ ಪ್ರಕಟವಾದ ಅಂಕಣವೊಂದರಲ್ಲಿ ಲೇಖಕರು 'ವಾರದ ಆ್ಯಪ್‌' ಎಂದು ಮಂಕುತಿಮ್ಮನ ಕಗ್ಗ ಆ್ಯಪ್ ನ್ನು ಪರಿಚಯಿಸಿದ್ದರು. 
ಕಗ್ಗದ ಆ್ಯಪ್ ಗೂಗಲ್ ಪ್ಲೇ ಸ್ಟೋರ್‌ನಲ್ಲಿ ಲಭ್ಯವಿದ್ದು, ಆ್ಯಂಡ್ರಾಯಿಡ್ ಫೋನಲ್ಲಿ ಹಾಕಿಕೊಳ್ಳಿ ಎಂಬ ಸಲಹೆಯನ್ನೂ ಆ ಲೇಖನದಲ್ಲಿ ನೀಡಲಾಗಿತ್ತು. ಆದರೆ ಡಿವಿಜಿಯವರ ಕಗ್ಗದ ಹಕ್ಕುಸ್ವಾಮ್ಯ (ಕಾಪಿರೈಟ್) ಗೋಖಲೆ ಸಾರ್ವಜನಿಕ ವಿಚಾರ ಸಂಸ್ಥೆಯದ್ದಾಗಿದೆ. ಕಗ್ಗದ ಯಾವುದೇ ಭಾಗವನ್ನಾಗಲೀ ಬಳಸುವ ಮುನ್ನ ಸಂಸ್ಥೆಯಿಂದ ಲಿಖಿತ ಅನುಮತಿ ಪಡೆದಿರಬೇಕು. ಪೂರ್ವಾನುಮತಿಯಿಲ್ಲದೆ ಕಗ್ಗವನ್ನು ಬಳಸಿಕೊಳ್ಳುವುದು ತಪ್ಪು.
ಆದಾಗ್ಯೂ, ಪ್ರಸ್ತುತ ಲೇಖನದಲ್ಲಿ ನಮೂದಿಸಿರುವ ಕಗ್ಗದ ಆ್ಯಪ್ ಯಾವುದೇ ಕೃತಿ ಸ್ವಾಮ್ಯದ ವಿಚಾರವನ್ನು ತಿಳಿಸಿಲ್ಲ ಹಾಗೂ ಪಡೆದಿಲ್ಲ ಎಂಬ ವಿಚಾರವೀಗ ಸಾಹಿತ್ಯಲೋಕದಲ್ಲಿ ಚರ್ಚೆಗೀಡಾಗಿದೆ. ಮಂಕುತಿಮ್ಮನ ಕಗ್ಗ ಕನ್ನಡದ ಬೆಸ್ಟ್ ಸೆಲ್ಲರ್ ಕೃತಿಗಳಲ್ಲಿ ಅಗ್ರಪಂಕ್ತಿಯಲ್ಲಿರುವ ಕೃತಿ, ಅಂಥ ಮೌಲ್ಯಯುತ ಕೃತಿಯ ಹಕ್ಕುಸ್ವಾಮ್ಯವನ್ನು ಪಡೆಯದೆ, ಕಗ್ಗದ ಆ್ಯಪ್‌' ಹೊಸೆದಿರುವುದು ಖಂಡನಾರ್ಹ ಎಂದು ಸಾಮಾಜಿಕ ತಾಣಗಳಲ್ಲಿ ಚರ್ಚೆಯಾಗಿರುತ್ತಿರುವುದಂತೂ ನಿಜ.
ಕನ್ನಡದ ಶ್ರೇಷ್ಟ ಕೃತಿಯೊಂದನ್ನು ಆ್ಯಪ್‌ ರೂಪದಲ್ಲಿ ಹೊರತಂದಿರುವುದು ಒಂದು ಉತ್ತಮ ಪ್ರಯತ್ನ ಆದರೆ ಸರಿಯಾದ ಅನುಮತಿ ಪಡೆದು ಹೊರತಂದರೆ ಯಾವುದೇ ಸಮಸ್ಯೆ ಇಲ್ಲದೆ ಈ ಪ್ರಯತ್ನ ಯಶಸ್ವಿಯಾಗುತ್ತದೆ. ಎಲ್ಲಾ ಸಮಸ್ಯೆಗಳಿಂದ ಹೊರಬಂದು ಈ ಮಂಕುತಿಮ್ಮನ ಕಗ್ಗ ಆ್ಯಪ್‌ ಕನ್ನಡಿಗರ ಕೈಸೇರಲಿ ಎಂಬುದೇ ನಮ್ಮ ಆಶಯ.
ಕೃಪೆ : ಕನ್ನಡ ಪ್ರಭ
 

Post a Comment

0 Comments