Ticker

6/recent/ticker-posts

೧೦೦ ಪೋಸ್ಟ್ ಗಳು

ನನ್ನ ಈ ಬ್ಲಾಗ್ನಲ್ಲಿ ಪೋಸ್ಟ್ ಗಳ ಸಂಖ್ಯೆ ೧೦೦ ನ್ನು ಮುಟ್ಟಿದೆ ಎಂಬ ವಿಷಯವನ್ನು,  ನಾನು ಸಂತಸದಿಂದ ನಿಮ್ಮೆಳರೊಂದಿಗೆ ಹಂಚಿಕೊಳ್ಳುತಿದ್ದೇನೆ.  

ನಾನು ಈ ಬ್ಲಾಗನ್ನು ೨೦೧೦ ರಲ್ಲಿ ಆರಂಭಿಸಿದೆ. ಹಾಗೆ ನೋಡಿದರೆ ೧೦೦ ಪೋಸ್ಟ್ ಗಳನ್ನೂ ತಲುಪಲು ನಾನು ತುಂಬ ಸಮಯವನ್ನು ತೆಗೆದುಕೊಂಡಿದ್ದೇನೆ ಎಂದು ಅನಿಸುತ್ತದೆ. ಅದು ನಿಜವು ಸಹ. ಆದರೆ ಸಮಯದ ಅಭಾವವೇ ಈ ನಿಧಾನ ಗತಿಗೆ ಕಾರಣ.

ಮೊದಲ ಮೂರು ವರುಷಗಳಲ್ಲಿ ನಾನು ಹೆಚ್ಚಾಗಿ ಪೋಸ್ಟ್ ಗಳನ್ನೂ ಮಾಡಿಲ್ಲ. ೨೦೧೦ ರಲ್ಲಿ  - ೬, ೨೦೧೧ ರಲ್ಲಿ - ೮, ೨೦೧೨ ರಲ್ಲಿ - ೧೧ ಪೋಸ್ಟ್ ಗಳನ್ನೂ ಮಾಡಿದ್ದೇನೆ.

ನಾನು ೨೦೧೨ ರಿಂದ  ಕನ್ನಡದಲ್ಲಿ ಪೋಸ್ಟ್ ಮಾಡಲು ಶುರು ಮಾಡಿದೆ. ಕನ್ನಡದಲ್ಲಿ ಹಚ್ಚಾಗಿ ಪೋಸ್ಟ್ ಮಾಡಿಲ್ಲ ಎಂಬುದು ನನ್ನ ಬೇಸರ. ಮುಂದಿನ ದಿನಗಳಲ್ಲಿ ಕನ್ನಡದಲ್ಲೂ ಹೆಚ್ಚಿನ ಸಂಖ್ಯೆಯಲ್ಲಿ ಪೋಸ್ಟ್ ಮಾಡಲು ಪ್ರಯತ್ನಿಸುತ್ತೇನೆ.

ಈ ಬ್ಲಾಗನ್ನು ಆರಂಭಿಸಿದ ಮೂಲ ಉದ್ದೇಶ ನನ್ನ ಅನಿಸಿಕೆಗಳನ್ನು, ನನಗೆ ತಿಳಿದ ವಿಷಯಗಳನ್ನು ಇತರರೊಂದಿಗೆ ಹಂಚಿಕೊಳ್ಳಬೇಕು ಎಂಬುದು. ಆ ಉದ್ದೇಶವನ್ನು ಸಾಧ್ಯವಾದಷ್ಟು ಪೂರೈಸಿಕೊಂಡಿದ್ದೇನೆ ಎಂಬ ನೆಮ್ಮದಿ ನನಗಿದೆ.

ಕೆಲವೊಮ್ಮೆ ನಾನು ನನ್ನನ್ನೇ ಪ್ರಶ್ನಿಸಿಕೊಂಡಿದ್ದು ಹೀಗೆ - ಏಕೆ ಇದನ್ನೆಲ್ಲಾ ಮಾಡುತ್ತಿರುವೆ ? ಸಮಯ ವ್ಯರ್ಥವಲ್ಲವೆ ? ಇದರಿಂದ ಏನು ಪ್ರಯೋಜನ ?

ಈ ಎಲ್ಲ ಗೊಂದಲಗಳೇ ಮೊದಲ ೩ ವರುಷದ ಮಂದಗತಿಗೆ ಕಾರಣ. ಅಷ್ಟೇ ಅಲ್ಲ ಮೊದಲು ಬ್ಲಾಗ್ ಶುರು ಮಾಡಿದಾಗ ನನಗೆ ಹಲವು ತಾಂತ್ರಿಕ ವಿಷಯಗಳ ಪರಿಚಯವಿರಲಿಲ್ಲ. ನಿಧಾನವಾಗಿ ಒಂದೊಂದೇ ವಿಷಯಗಳನ್ನು ತಿಳಿದುಕೊಂಡು, ಅವುಗಳನ್ನು ನನ್ನ ಬ್ಲಾಗ್ನಲ್ಲಿ ಅಳವಡಿಸಿಕೊಂಡ ನಂತರ ನನಗೆ ಕೆಲವು ಉತ್ತಮ ಪ್ರತಿಕ್ರಿಯೆ ದೊರೆಯಲಾರಂಭಿಸಿತು.

ನನಗೆ ದೊರೆತ ಪ್ರತಿಕ್ರಿಯೆಗಳೆ ನನ್ನ ಮೇಲಿನ ಗೊಂದಲಮಯ ಪ್ರಶ್ನೆಗಳಿಗೆ ನಾನು ಕಂಡು ಕೊಂಡ ಉತ್ತರ. ನನ್ನ ಈ ಬ್ಲಾಗ್ನಿಂದ ಯಾರಾದರು ಒಬ್ಬ ವ್ಯಕ್ತಿಗೆ ಪ್ರಯೋಜನವಾದರೆ ಸಾಕು. ನಾನು ಇಲ್ಲಿ ಕಳೆದಿರುವ ಸಮಯ ವ್ಯರ್ಥವಲ್ಲ ಎಂಬ ನೆಮ್ಮದಿ ನನಗಿರುತ್ತದೆ.

ನನ್ನ ಈ ಬ್ಲಾಗ್ನಲ್ಲಿ, ಬೇರೆ ಬ್ಲಾಗ್ ನಿಂದ [ನೆನಪಿನಂಗಳ, ಕಣಜ ] ಸಹ ಹಲವರು ವಿಷಯಗಳನ್ನು ಆಧಾರಗಳು ಎಂಬ ವಿಭಾಗದಡಿ ಪೋಸ್ಟ್ ಮಾಡಿದ್ದೇನೆ. ಕಾರಣ ಇಷ್ಟೇ , ಈ ಎಲ್ಲಾ ಮಾಹಿತಿಗಳು ಎಲ್ಲರಿಗು ಲಭ್ಯ ವಾಗಬೇಕು ಎಂಬುದೇ.

ನನ್ನ ಈ ಪ್ರಯತ್ನವನ್ನು ಮೆಚ್ಚಿ, ಪ್ರೋತ್ಸಾಹಿಸಿದ ಎಲ್ಲರಿಗು ನನ್ನ ಧನ್ಯವಾದಗಳು.

Post a Comment

0 Comments