Ticker

6/recent/ticker-posts

ಜೊನಾಥನ್ ಲಿವಿಂಗ್ ಸ್ಟನ್ - ಸೀಗಲ್

ರಿಚರ್ಡ್ ಬಾಕ್  [Richard Bach] ಅವರ 'ಜೊನಾಥನ್ ಲಿವಿಂಗ್ ಸ್ಟನ್ - ಸೀಗಲ್ ' [Jonathan Livingston Seagull] ಎಲ್ಲರೂ ಓದಬೇಕಾದ ಪುಸ್ತಕ.

೧೯೭೦ ರಲ್ಲಿ ಈ ಪುಸ್ತಕ ಪ್ರಕಟನೆಯಾಯಿತು. ೧೯೭೨ ರ ವೇಳೆಗೆ , ಈ ಪುಸ್ತಕದ ಲಕ್ಷಾಂತರ ಪ್ರತಿಗಳು ಮಾರಾಟವಾಗಿ, ನ್ಯೂಯಾರ್ಕ್ ಟೈಮ್ಸ್ [New york Times] ಪತ್ರಿಕೆಯ , [Best Seller] ಅತಿ ಹೆಚ್ಚು ಮಾರಟವಾದ ಪುಸ್ತಕಗಳ ಪಟ್ಟಿಯಲ್ಲಿ ಸತತ ೩೮ ವಾರಗಳು ಮೇಲ್ಪಂಕ್ತಿಯಲ್ಲಿ ಉಳಿದಿತ್ತು.

ಇಂದಿಗೂ ಈ ಪುಸ್ತಕ ಹಲವು ಓದುಗರ ನೆಚ್ಚಿನ ಪುಸ್ತಕವಾಗಿ ಉಳಿದಿದೆ.

ಜೊನಾಥನ್ ಲಿವಿಂಗ್ ಸ್ಟನ್ ಒಂದು ಸಮುದ್ರ ಹಕ್ಕಿ. ಇತರೆ ಸಮುದ್ರ ಹಕ್ಕಿಗಳಂತೆ ಬರಿ ಆಹಾರವನ್ನು ಗಳಿಸಿಕೊಂಡು, ಜೀವನವನ್ನು ಸಾಗಿಸುವುದು  ಜೊನಾಥನ್ ಗೆ ಇಷ್ಟವಿಲ್ಲ. ಜೊನಾಥನ್ ಲಿವಿಂಗ್ ಸ್ಟನ್ ಸಾಧಾರಣ ಹಕ್ಕಿಯಲ್ಲಾ. ಅವನಿಗೆ ಜೀವನವೆಂಬುದು ಹಾರಾಟ. ಅತಿ ಎತ್ತರಕ್ಕೆ , ವೇಗವಾಗಿ ಹಾರಬೇಕೆಂಬುದು ಅವನ ಗುರಿ. ಅದಕ್ಕಾಗಿ ಸದಾ ಅಭ್ಯಾಸ ಮತ್ತು ಪ್ರಯತ್ನದಲ್ಲಿ ತೊಡಗಿರುತ್ತಾನೆ. ತಮ್ಮ ಜೀವನಕ್ಕೆ ವಿರುದ್ದವಾಗಿ ನಡೆದುಕೊಳ್ಳುತ್ತಿರುವ  ಜೊನಾಥನ್ ನನ್ನು  ಸಮುದ್ರ ಹಕ್ಕಿಗಳ ಸಮಾಜ ತಮ್ಮ ಸಮೂಹದಿಂದ ಹೊರ ಹಾಕುತ್ತವೆ.

ತನ್ನ ಜೀವನದ ಉದ್ದೇಶಕ್ಕಾಗಿ ತನ್ನ ಸಮೂಹವನ್ನು ತೊರೆದು, ತನ್ನ ಕನಸುಗಳ ಬೆನ್ನತ್ತುವ   ಜೊನಾಥನ್ ತನ್ನ ಪ್ರಯತ್ನದಲ್ಲಿ ಯಶಸ್ವಿಯಾದನೆ ? ಎಂಬುದೇ 'ಜೊನಾಥನ್ ಲಿವಿಂಗ್ ಸ್ಟನ್ -ಸೀಗಲ್' ನ ಕಥೆ

ಇದು ಒಂದು ಸಮುದ್ರ ಹಕ್ಕಿಯ ಕಥೆ ಮಾತ್ರವಲ್ಲಾ, ಇದು ನಮ್ಮೆಲ್ಲ ಕಥೆ. ಹೇಗೆ ನಮ್ಮ ಜೀವನವನ್ನು ನಾವು ಅರ್ಥಪೂರ್ಣವಾಗಿಸಿಕೊಳ್ಳಬೇಕು, ನಮ್ಮ ಕನಸುಗಳನ್ನು ಹಿಂಬಾಲಿಸಿ, ಹೇಗೆ ಗುರಿಯನ್ನು ಮುಟ್ಟಬೇಕು ಹಾಗು ಆ ಪ್ರಯತ್ನದಲ್ಲಿ ನಮಗೆ ಎದುರಾಗಬಹುದಾದ ಅಡೆತಡೆಗಳನ್ನು ಎದುರಿಸಿ ನಮ್ಮ ಗುರಿಯನ್ನು ಮುಟ್ಟಬೇಕು ಅದರ ಮೂಲಕ ಬೇರೆಯವರಿಗೆ ಮಾಧರಿಯಾಗಬೇಕು ಎಂಬುದೇ  ಜೊನಾಥನ್ ಲಿವಿಂಗ್ ಸ್ಟನ್  ನಮಗೆ ನೀಡುವ ಸಂದೇಶ.

ನಂಬಿಕೆ, ಪ್ರಯತ್ನ ಹಾಗು ಛಲವಿದ್ದರೆ ನಾವು ನಮ ಗುರಿಯನ್ನು ಮುಟ್ಟಬಹುದು. ಬನ್ನಿ ನಾವು ಜೊನಾಥನ್ ಲಿವಿಂಗ್ ಸ್ಟನ್ ನಂತೆ ನಮ್ಮ ಗುರಿಯೆಡೆಗೆ ಹಾರೋಣ.




Post a Comment

1 Comments

  1. a must read. everyone should read this once. very inspiring

    ReplyDelete

Comment is awaiting for approval