Ticker

6/recent/ticker-posts

'ಅಸುರ' - ಆನಂದ ನೀಲಕಂಠನ್

'ಅಸುರ : ದಿ ಟೇಲ್ ಆಫ್ ವೇನ್ಕಿಷ್ದ್' [Asura : The tale of the vanquished] - ಆನಂದ ನೀಲಕಂಠನ್ [Anand Neelakantan]  ಅವರ ಚೊಚ್ಚಲ ಕೃತಿ. ೨೦೧೨ ರ ಅತಿ ಹೆಚ್ಚು ಮಾರಟವಾದ ಪುಸ್ತಕ.

ರಾಮಾಯಣ ಹಾಗು ಮಹಾಭಾರತಗಳೆರಡು ಮಹಾನ್ ಗ್ರಂಥಗಳು. ರಾಮಾಯಣದ ನೂರಾರು ವಿವಿಧ ಆವೃತ್ತಿಗಳು ಇರುವುದಾಗಿ ಕೇಳಿದ್ದೇನೆ. ಇವುಗಳು ಇಲ್ಲಿಯವರೆಗೂ ನಾವು ಕೇಳಿರುವ ರಾಮಾಯಣಕ್ಕಿಂತ ಭಿನ್ನವಾಗಿವೆ. ಕೆಲವು ರಾಮಾಯಣದ ಪ್ರಕಾರ ಸೀತೆ ರಾವಣನ ಮಗಳು. ಇದು ನಮ್ಮಲ್ಲಿ ಅಚ್ಚರಿ ಮೂಡಿಸುತ್ತದೆ.

ಆನಂದ ನೀಲಕಂಠನ್ ಅವರ 'ಅಸುರ' ಸಹ ಇದೆ ವಸ್ತುವನ್ನು ಇಟ್ಟುಕೊಂಡು 'ರಾವಣನ ದೃಷ್ಟಿ ಕೋನದಲ್ಲಿ ರಾಮಾಯಣವನ್ನು ಪರಿಶೀಲಿಸುವ ಪ್ರಯತ್ನ ಮಾಡಿದೆ. ಜೊತೆಗೆ 'ಭದ್ರ' ಎಂಬ ಕಾಲ್ಪನಿಕ ಪಾತ್ರವನ್ನು ಸೇರಿಸುವ ಮೂಲಕ ಕಥೆಗೆ ಮೂರನೇ ಆಯಾಮವನ್ನು ನೀಡಿದೆ.

ಈ ಕಥೆ ರಾವಣನ ಕಥೆ. ಇಲ್ಲಿ ರಾವಣನೆ ನಾಯಕ. ಕಥೆ ಹದಿ ಹರೆಯದ ರಾವಣನೊಂದಿಗೆ ಆರಂಭವಾಗುತ್ತದೆ. ಯುವಕನಾದ ರಾವಣ, ನಶಿಸಿಹೋದ ತನ್ನ ಅಸುರ ಜನಾಂಗದ ಕೀರ್ತಿಯನ್ನು ಪುನರ್ ಪ್ರತಿಷ್ಠಾಪಿಸಲು ನಡೆಸುವ ಹೊರಟ, ಅದರಲ್ಲಿ ಗಳಿಸುವ ಯಶಸ್ಸು ಹಾಗು ಕೊನೆಯಲ್ಲಿ ರಾವಣ ಹಾಗು ಆತನ ಅಸುರ ಜನಾಂಗ ಹೇಗೆ ಪತನವಾಗುತ್ತದೆ ಎಂಬುದೇ ಕಥೆ.

ಪುಸ್ತಕದ ಉದ್ದಕ್ಕೂ ಆನಂದ್ ಅವರು, ಅ ಸಮಯದಲ್ಲಿ ದೇವತೆಗಳು(ಹೊರಗಿನಿಂದ ಭಾರತಕ್ಕೆ ಬಂದವರು) ಹೇಗೆ ತಮ್ಮ ಜಾತಿ ಪದ್ದತಿಯನ್ನು ಹರಡಿದರು. ಹೇಗೆ ಬ್ರಾಮ್ಹನರು ಪ್ರಾಬಲ್ಯಕ್ಕೆ ಬಂದರು. ಜಾತಿರಹಿತ ಅಸುರ ಜನಾಂಗವನ್ನು ಹೇಗೆ ತುಳಿದರು ಎಂಬುದನ್ನು ವಿವರಿಸುತ್ತಾ, ಅಂದು ನಮ್ಮ ಸಮಾಜದಲ್ಲಿ ಬಿತ್ತಿದ ಜಾತಿಪದ್ದತಿ ಹೇಗೆ ಬೇರೂರಿ, ಇಂದಿಗೂ ನಮ್ಮ ಸಮಾಜದಲ್ಲಿ ಪ್ರಬಲ ಶಕ್ತಿಯಾಗಿದೇ ಎಂಬುದನ್ನು ತಿಳಿಸುತ್ತಾರೆ.

ಕಥೆ, ನಮ್ಮಲ್ಲಿ  ಹಲವಾರು ಪ್ರಶ್ನೆಗಳನ್ನು ಹುಟ್ಟು ಹಾಕುತ್ತದೆ. ರಾಮ ಮತ್ತು ರಾವಣ, ಇಬ್ಬರಲ್ಲಿ ನಿಜವಾಗಲು ಧರ್ಮವನ್ನು ಎತ್ತಿ ಹಿಡಿದವರು ಯಾರು ? ನಿಜವಾದ ನಾಯಕ ಯಾರು ? ಸೀತೆ ಮತ್ತು ರಾವಣನ ನಡುವಿನ ಸಂಭಂದ ಏನು?

ಸಾವಿರಾರು ವರ್ಷಗಳಿಂದ ನಾವು ಕೇಳಿ, ನಂಬಿ ಬಂದಿರುವ ಹಲವಾರು ವಿಷಯಗಳಿವೆ. ಅವುಗಳನ್ನು ನಾವು ಎಂದಿಗೂ ಬೇರೆ ದೃಷ್ಟಿಕೋನದಲ್ಲಿ ವಿಶ್ಲೇಷಿಸಲು ಪ್ರಯತ್ನಿಸುವುದಿಲ್ಲ. ರಾಮಾಯಣವನ್ನು ಬೇರೆ ದೃಷ್ಟಿಕೋನದಲ್ಲಿ ವಿಶ್ಲೇಷಿಸಿರುವ ಆನಂದ್ ಅವರ ಪ್ರಯತ್ನವನ್ನು ಮೆಚ್ಚ ಬೇಕು.

ಅವರು ಈ ಕಥೆಯಲ್ಲಿ ಹೇಳಿರುವುದನ್ನು ಹಾಗೆಯೇ ಒಪ್ಪಿಕೊಳ್ಳಬೇಕಿಲ್ಲ. ಆದರೆ ಯಾವುದೇ ವಿಷಯವನ್ನು ಹಲವು ಕೋನಗಳಿಂದ ನೋಡಬೇಕಾದ ಅವಶ್ಯಕತೆ ಇರುವುದನ್ನು ನಿರಾಕರಿಸುವಂತಿಲ್ಲ .

'ಅಸುರ' ಒಮ್ಮೆ ಓದಲೇ ಬೇಕಾದ ಪುಸ್ತಕ.

Post a Comment

0 Comments