Ticker

6/recent/ticker-posts

ಹುಣಸೂರು ಕೃಷ್ಣ ಮೂರ್ತಿ - Hunsuru Krishnamurthy

ಸತ್ಯ ಹರಿಶ್ಚಂದ್ರ, ಬಭ್ರುವಾಹನ, ಭಕ್ತ ಸಿರಿಯಾಳ, ಭಕ್ತ ಕುಂಬಾರ ಮುಂತಾದ ಯಶಸ್ವಿ ಚಿತ್ರಗಳನ್ನು ನಿರ್ದೇಶಿಸಿದ ಹುಣಸೂರು ಕೃಷ್ಣ ಮೂರ್ತಿ ಅವರ ಜನ್ಮ ದಿನ ಇಂದು. 

ಹುಣಸೂರು ಕೃಷ್ಣ ಮೂರ್ತಿ [ Hunsuru Krishnamurthy] ಅವರು ಮೈಸೂರು ಜಿಲ್ಲೆಯ ಹುಣಸೂರಿನಲ್ಲಿ ೯-೨-೧೯೧೪ ರಲ್ಲಿ ಜನಿಸಿದರು . ತಂದೆ ರಾಜಾರಾಯರು, ತಾಯಿ ಪದ್ಮಾವತಮ್ಮ. 
ತಾಯಿ ಹೇಳುತ್ತಿದ್ದ ಪೌರಾಣಿಕ ಕಥೆಗಳಿಂದ ಪ್ರಭಾವಿತರಾದರು.  ಪಠ್ಯೇತರ ಚಟುವಟಿಕೆಗಳಲ್ಲೇ ಆಸಕ್ತಿ.  ಮೈಸೂರಿನಲ್ಲಿ ಹೈಸ್ಕೂಲು ವ್ಯಾಸಂಗ. ಸ್ಕೂಲ್ ಡೇ ಕಾರ್ಯಕ್ರಮದಲ್ಲಿ ನಾಟಕಾಭಿನಯಕ್ಕೆ  ೧೦೧ ರೂ. ಬಹುಮಾನ ಪಡೆದರು. ಓದಿಗಿಂತ ನಾಟಕದಲ್ಲೇ ಹೆಚ್ಚಿನ ಆಸಕ್ತಿ ಇದ್ದುದರಿಂದ, ಮುಂಬಯಿಗೆ ಹೋದರು. 

‘ಬಾಲಗಂಧರ್ವ ನಾಟಕ ಸಭಾ’ದ ಕೃಷ್ಣರಾವ್ ಬಳಿ  ಹಾಡುಗಾರಿಕೆ ಮತ್ತು ವಾದ್ಯ ಸಂಗೀತ ಕಲಿಯುತ್ತಾ , ಚಿಕ್ಕಪುಟ್ಟ ಪಾತ್ರಗಳಲ್ಲಿ ನತಿಸುತ್ತಿದರು.  ಪೆಂಡಾರ್ ಕರ್, ಸರ್ ನಾಯಕ್ ಮುಂತಾದವರ ವೃತ್ತಿ ನಾಟಕ ಕಂಪನಿಯಲ್ಲಿ ಅಭಿನಯ ಕಲೆ ಮತ್ತು ನಾಟಕದ ಇತರ ವಿಭಾಗದ ಕೆಲಸಗಳನ್ನೂ ಕಲಿತರು. ಪ್ರಸಿದ್ಧ ನಟನಟಿಯರಾದ ಅಶೋಕ್‌ಕುಮಾರ್, ದೇವಿಕಾರಾಣಿ, ವಿ. ಶಾಂತಾರಾಮ್, ಹಿಮಾಂಶು ರಾಯ್ ಮುಂತಾದವರೊಡನೆ ನಿಕಟ ಸಂಪರ್ಕ ಬೆಳೆಯಿತು.

ಗರೂಡ ಸದಾಶಿವರಾಯರ ‘ಶ್ರೀ ದತ್ತಾತ್ರೇಯ ಸಂಗೀತ ನಾಟಕ ಮಂಡಲಿ’ ಗದಗ ಮುಂಬಯಿಗೆ ಬಂದಾಗ ಅಲ್ಲಿ ಪ್ರವೇಶ ಪಡೆದು  ಹಲವಾರು ನಾಟಕಗಳಲ್ಲಿ ಅಭಿನಯಿಸಿದರು . ಪೀರ್ ಸಾಹೇಬರ ಚಂದ್ರಕಲಾ ನಾಟಕ ಮಂಡಲಿ ಕಂಪನಿಯಲ್ಲಿ ನಟ ಹಾಡುಗಾರರಾಗಿ ಜನಮೆಚ್ಚುಗೆ ಗಳಿಸಿದರು. ವೀರ್ ಸಾಹೇಬರ ನಿಧನಾ ನಂತರ ಕಂಪನಿಯ ಜವಾಬ್ದಾರಿಯನ್ನು ಹೊತ್ತರು. ಗುಬ್ಬಿವೀರಣ್ಣನವರ ‘ಶ್ರೀ ಗುಬ್ಬಿ ಚನ್ನಬಸವೇಶ್ವರ ಸ್ವಾಮಿ ನಾಟಕ ಸಂಘ’ದಲ್ಲಿ ನಟರಾಗಿ, ಸಾಹಿತಿಯಾಗಿ. ರಾಜಾಗೋಪಿಚಂದ್, ನಾಟಕದ ಸಂಭಾಷಣೆಯಿಂದ  ಖ್ಯಾತಿ ಗಳಿಸಿದರು

 ಟಿ.ಪಿ. ಕೈಲಾಸಂ, ಎಚ್.ಎಲ್.ಎನ್. ಸಿಂಹ ರವರುಗಳ ಸಮೀಪವರ್ತಿಯಾಗಿ ಹೆಸರು ಹಾಗು ಅನುಭವ ಗಳಿಸಿದರು.  ರಂಗಭೂಮಿ ಗೀಳಿನಿಂದ, ಭಾರತ ನಾಟಕ ಸಂಸ್ಥೆಯಲ್ಲಿ ಸಂಸಾರ ನೌಕದಲ್ಲಿ ನಟಿಸುತ್ತಲೇ ಧರ್ಮರತ್ನಾಕರ ನಾಟಕ ರಚನೆ ಮಾಡಿದರು.  ಗೌತಮ ಬುದ್ಧ ಅವರ ಮತ್ತೊಂದು ಮಹೋನ್ನತ ನಾಟಕ. 
ವೃತ್ತಿ ರಂಗಭೂಮಿ ಅವನತಿ ಪ್ರಾರಂಭವಾದಾಗ  ಹವ್ಯಾಸಿ ರಂಗಭೂಮಿಯಲ್ಲಿ ತಮ್ಮನ್ನು ತೊಡಗಿಸಿಕೊಂಡರು. 

 ಕನ್ನಡದಲ್ಲಿ ವಾಕ್ ಚಿತ್ರ ಪ್ರಾರಂಭವಾದಾಗ ಕ್ರಮೇಣ ಚಿತ್ರರಂಗದತ್ತ ಆಕರ್ಷಣೆ ಮೂಡಿತು. ಮೈಸೂರಿನ ನವಜ್ಯೋತಿ ಸ್ಟುಡಿಯೋಸ್, ಮಹಾತ್ಮ ಪಿಕ್ಚರ್ ಜೊತೆ ಸೇರಿ ಚಿತ್ರ ತಯಾರಿಕೆಯ ಎಲ್ಲ ಪ್ರಕಾರಗಳಲ್ಲೂ ಅನುಭವ ಗಳಿಸಿದರು. ಮಹಾತ್ಮ ಪಿಕ್ಚರ್ಸ್‌ಗೆ ಸಾಹಿತಿಯಾಗಿ, ನಟನಾಗಿ ಜನಪ್ರಿಯತೆ ಗಳಿಸಿದರು.

 ಕೃಷ್ಣ ಗಾರುಡಿ ಇವರು  ನಿರ್ದೇಶಿಸಿದ ಪ್ರಥಮ ಚಿತ್ರ, ನಂತರ ಆಶಾಸುಂದರಿ, ರತ್ನಮಂಜರಿ, ವೀರ ಸಂಕಲ್ಪ, ಮದುವೆ ಮಾಡಿನೋಡು, ಸತ್ಯ ಹರಿಶ್ಚಂದ್ರ, ಬಭ್ರುವಾಹನ, ಭಕ್ತ ಸಿರಿಯಾಳ, ಭಕ್ತ ಕುಂಬಾರ ಮುಂತಾದ ೨೦ಕ್ಕೂ ಹೆಚ್ಚು ಚಿತ್ರಗಳನ್ನು  ನಿರ್ದೇಶಿಸಿದರು . ೪೦೦ಕ್ಕೂ ಹೆಚ್ಚು ಅರ್ಥಗರ್ಭಿತ ಗೀತೆಗಳನ್ನು  ಸಹ ರಚಿಸಿದ್ದಾರೆ. 

ರಾಜ್ಯ ಸರಕಾರ ಸ್ಥಾಪಿಸಿದ ಪುಟ್ಟಣ್ಣ ಕಣಗಲ್ ಪ್ರಶಸ್ತಿ ಪಡೆದ ಮೊದಲಿಗರೆಂಬ ಹೆಗ್ಗಳಿಕೆ ಕೃಷ್ಣ ಮೂರ್ತಿ ಅವರದು.
ಹುಣಸೂರು ಕೃಷ್ಣ ಮೂರ್ತಿ ಅವರು ೧೩-೧-೧೯೮೯ ಕೊನೆಯುಸಿರೆಳೆದರು

                                                                                          ಮೂಲ : ನೆನಪಿನಂಗಳ

Post a Comment

0 Comments