Ticker

ದುರಾಸೆ

ಎಲ್ಲರು ಇದ್ದಾರೆ ನನಗೆ
ತಂದೆ - ತಾಯಿ, ಬಂಧು  - ಬಳಗ
ತಮ್ಮ - ತಂಗಿ, ಗೆಳೆಯರೆಲ್ಲರೂ ಉಂಟು
ಆದರು, ಮನ ಬಯಸುತ್ತಿದೆ ಹೊಸ ನಂಟು

ಎಲ್ಲರು ಇದ್ದರೂ, ಯಾರು ಇಲ್ಲದ
ಏಕಾಂಗಿ, ಎಂಬ ಭಾವನೆ ನನಗೆ
ನನ್ನ ಭಾವನೆಗಳಿಗೆ ಸ್ಪಂದಿಸುವ
ಗೆಳೆಯನೊಬ್ಬ ಸಿಗಬೇಕು ಎನಗೆ

ಸಾಹಿತ್ಯದ ಅರಿವಿರುವ
ಸಂಗೀತದ ರುಚಿಯಿರುವ
ವಿಶ್ವ ಸಿನಿಮಾದ ಒಲವಿರುವ
ಕಲೆಯಲ್ಲಿ ಮನಸಿರುವ
ಚರಿತ್ರೆ, ವಿಜ್ಞಾನದ ಜ್ಞಾನವಿರುವ
ಸ್ನೇಹಿತನೊಬ್ಬ ಬೇಕು ನನಗೆ

ಸದಾ ಕೆಲಸ, ಸಂಬಳದ ಬಗ್ಗೆ ಮಾತನಾಡದ
ತಮಾಷೆಯೆಂದು, ಅಸಭ್ಯ ಹಾಸ್ಯ ಮಾಡದ
ಮದುವೆ, ಮಕ್ಕಳೆಂದು ಗೋಳಾಡದ
ಮಿತ್ರನೊಬ್ಬ ಬೇಕು ನನಗೆ

ಕಳೆಯಬೇಕು ಬಿಡುವಿನ ವೇಳೆಯನು
ಸಾಹಿತ್ಯ, ಸಂಗೀತದ ಚರ್ಚೆಯಲಿ
ತಿಳಿಯಬೇಕು ಹಲವು ವಿಷಯಗಳನು
ಪರಸ್ಪರ ವಿಚಾರ ವಿನಿಮಯದಲಿ

ಉಂಟು, ನನಗೊಂದು ಮಹದಾಸೆ
ನನ್ನಂತೆಯೇ,  ಮಿತ್ರನೊಬ್ಬ ಬೇಕು ನನಗೆ
ನನ್ನ ಇಷ್ಟವೇ, ಅವನ ಇಷ್ಟವಾಗಿರಬೇಕು
ಆಸೆಯಲ್ಲವಿದು, ದುರಾಸೆ ಎನ್ನಿಸುತ್ತದೆ ನನಗೆ

                                                             - ಸೆಂದಿಲ್





Post a Comment

0 Comments