ತೀ ನಂ ಶ್ರೀ [T. N. Srikantaiah] ಅವರು ಹುಟ್ಟಿದ ದಿನದ ಸವಿ ನೆನಪಿನಲ್ಲಿ (ನವಂಬರ್ ೨೬, ೧೯೦೬ - ಸಪ್ಟಂಬರ್ ೭, ೧೯೬೬)
ಪ್ರೊಫೆಸರ್ ತೀರ್ಥಪುರ ನಂಜುಂಡಯ್ಯ ಶ್ರೀಕಂಠಯ್ಯ ಕನ್ನಡದ ಪ್ರಮುಖ
ಸಾಹಿತಿಗಳಲ್ಲೊಬ್ಬರು, ಹಾಗೂ ಕನ್ನಡದ ಶ್ರೇಷ್ಠ ವಿದ್ವಾಂಸ ಹಾಗೂ ವಿಮರ್ಶಕರಾಗಿದ್ದರು.
ಸೃಜನಶೀಲ ಲೇಖಕರಾಗಿದ್ದ ಅವರ ಸಂಶೋಧನಾತ್ಮಕ
ಬರವಣಿಗೆಗಳಲ್ಲಿಯೂ ಕಾವ್ಯಸ್ಪರ್ಶವನ್ನು ಕಾಣಬಹುದಾಗಿತ್ತು.
ತೀ ನಂ ಶ್ರೀ ಅವರು ನವಂಬರ್ ೨೬, ೧೯೦೬ [November 26, 1906] ರಂದು ತುಮಕೂರು ಜಿಲ್ಲೆಯ ತೀರ್ಥಪುರದಲ್ಲಿ ಜನಿಸಿದರು. ತಂದೆ ನಂಜುಂಡಯ್ಯ, ತಾಯಿ ಭಾಗೀರತಮ್ಮ .
೧೯೨೬ ರಲ್ಲಿ ಬಿ. ಎ. ೧೯೨೯ ರಲ್ಲಿ ಇಂಗ್ಲಿಷ್ನಲ್ಲಿ ಎಂ. ಎ. ಹಾಗೂ ಮೈಸೂರು ವಿಶ್ವವಿದ್ಯಾಲಯದಿಂದ ಕನ್ನಡದಲ್ಲಿ ಎಂ. ಎ ಪದವಿ ಪದೆದರು.
ಅವರು ಮೈಸೂರು
ವಿಶ್ವವಿದ್ಯಾಲಯದ ಕನ್ನಡ ವಿಭಾಗದಲ್ಲಿ ಪ್ರಾಧ್ಯಾಪಕರು ಮತ್ತು ಮುಖ್ಯಸ್ಥರು
ಆಗಿದ್ದುದಲ್ಲದೆ ಕಲಾನಿಕಾಯದ ಡೀನ್ ಆಗಿದ್ದರು. ಕರ್ನಾಟಕ ವಿಶ್ವವಿದ್ಯಾಲಯದ
ಸ್ನಾತಕೋತ್ತರ ಕನ್ನಡ ವಿಭಾಗದ ಮೊಟ್ಟ ಮೊದಲ ಪ್ರಾಧ್ಯಾಪಕರೂ ಆಗಿದ್ದರು. ಅವರು ಆದರ್ಶ
ಪ್ರಾಧ್ಯಾಪಕರು ಮತ್ತು ಶ್ರೇಷ್ಠ ವಾಗ್ಮಿಯೆಂದು ಪ್ರಸಿದ್ಧರಾಗಿದ್ದರು. ಇಂದು ಜೀವನದ
ಅನೇಕ ಕ್ಷೇತ್ರಗಳಲ್ಲಿ ಕೆಲಸ ಮಾಡುತ್ತಿರುವ ಹಲವಾರು ಜನ ಮೇಧಾವಿಗಳು ತೀ.ನಂ.ಶ್ರೀ ಅವರ
ಶಿಷ್ಯರಾಗಿದ್ದವರು.
ತೀ.ನಂ.ಶ್ರೀ ಅವರು ಕಾವ್ಯಮೀಮಾಂಸೆ, ಸಾಹಿತ್ಯ ವಿಮರ್ಶೆ, ಛಂದಸ್ಸು,
ಕಾವ್ಯ, ಪ್ರಬಂಧ ಸಾಹಿತ್ಯ, ಅನುವಾದ ಸಾಹಿತ್ಯ, ಗ್ರಂಥ ಸಂಪಾದನೆ ಮತ್ತು ಭಾಷಾವಿಜ್ಞಾನ -
ಈ ವಿಷಯಗಳಲ್ಲಿ ವಿಶೇಷವಾದ ತಜ್ಞತೆಯನ್ನು ಪಡೆದಿದ್ದು, ಈ ಕ್ಷೇತ್ರಗಳನ್ನು
ಶ್ರೀಮಂತಗೊಳಿಸಿದ್ದಾರೆ.
"ಒಲುಮೆ" ಕನ್ನಡದ ಮೊಟ್ಟಮೊದಲನೆಯ ಪ್ರೇಮಗೀತೆಗಳ
ಸಂಕಲನವಾಗಿದ್ದು, ಕೆ.ಎಸ್.ನರಸಿಂಹಸ್ವಾಮಿ ಅವರ "ಮೈಸೂರು ಮಲ್ಲಿಗೆ" ಸಂಕಲನದ ಮೇಲೆ
ಗಾಢವಾದ ಪ್ರಭಾವವನ್ನು ಬೀರಿದೆ. "ನಂಟರು" ಕನ್ನಡದ ಮಹತ್ವದ ಲಲಿತ ಪ್ರಬಂಧಗಳ
ಸಂಕಲನಗಳಲ್ಲೊಂದು. ರಾಕ್ಷಸನ ಮುದ್ರಿಕೆ ವಿಶಾಖ ದತ್ತನ ಮುದ್ರಾರಾಕ್ಷಸ, ನಾಟಕದ ಯಶಸ್ವಿ
ಭಾಷಾಂತರ ಮಾತ್ರವಾಗಿರುವುದಲ್ಲದೆ, ಸೃಜನಶೀಲ ರೂಪಾಂತರವೂ ಆಗಿದೆ. ಅವರ ಬಹು ಪ್ರಖ್ಯಾತ ಕೃತಿ 'ಭಾರತೀಯ ಕಾವ್ಯಮೀಮಾಂಸೆ'.
೧೯೫೨ ರಲ್ಲಿ [1952] ಭಾರತದ ಸಂವಿಧಾನವನ್ನು ಕನ್ನಡದಲ್ಲಿ ಪ್ರಕಟಿಸುವಲ್ಲಿ ತೀ.ನಂ.ಶ್ರೀ ಅವರ ಕೊಡುಗೆ ಅಪಾರ.
President of India ಎಂಬುದಕ್ಕೆ ರಾಷ್ಟ್ರಪತಿ ಎಂಬ ಸರಿಯಾದ ಸಂಸ್ಕೃತ ಅನುವಾದವನ್ನು ಸೂಚಿಸಿದ ಕೀರ್ತಿ ತೀ.ನಂ.ಶ್ರೀ ಅವರದು.
ತೀ.ನಂ.ಶ್ರೀ ಅವರು ೧೯೬೬ [1966] ರಲ್ಲಿ ಕೊಲ್ಕತ್ತಾ ದಲ್ಲಿ ತಮ್ಮ ಕೊನೆ ಉಸಿರೆಲೆದರು.
ಆಧಾರ : ಅಂತರ್ಜಾಲ - ನೆನಪಿನಂಗಳ
1 Comments
remembering T. N. Srikantaiah
ReplyDeleteComment is awaiting for approval