Ticker

6/recent/ticker-posts

ಮಿಲನ

ಸಂಜೆ ೬  ಗಂಟೆ. ಕುಮಾರಸ್ವಾಮಿ ಲೇಔಟ್ ಬಸ್ ನಿಲ್ದಾಣ. ಬಸ್ಸಿಗಾಗಿ ಕಾಯುತ್ತಾ ನಿಂತಿದ್ದೆ. ಆಗಾಗ ಕೈ ಗಡಿಯಾರದಲ್ಲಿ ಸಮಯ  ನೋಡಿಕೊಳ್ಳುತ್ತಾ, ಹೇಗಾದರೂ ೭:೩೦ ರ ಒಳಗೆ ಮಲ್ಲೇಶ್ವರಂ, ೧೫ನೆ ಕ್ರಾಸ್ ತಲುಪಬೇಕು ಎಂದು ಬಸ್ಸಿಗಾಗಿ ಇದಿರುನೋಡುತ್ತಾ ನಿಂತೇ.

೫ ವರ್ಷಗಳ ನಂತರ ಗೆಳೆಯರನ್ನು ಭೇಟಿ ಮಾಡುವ ಉತ್ಸಾಹ. ಸಮಯಕ್ಕೆ ಸರಿಯಾಗಿ ನಿರ್ದಿಷ್ಟ ಸ್ಥಳವನ್ನು ಸೇರಬೇಕೆಂಬ ಕಾತುರ. ೧೫ ಇ ಬಸ್ ಬಂದಿತು. ಹೆಚ್ಚಿನ ಜನ ಸಂದಣಿ. ಬಸ್ ಅತ್ತಲೋ, ಬೇಡವೋ ಎಂಬ ತಳಮಳ. ಬಸ್ ಅತ್ತದೆ ಅಲ್ಲೇ ನಿಂತೇ. ಸಮಯ ನೋಡಿದೆ ೬:೧೦. ೫ ನಿಮಿಷದ ನಂತರ ೨೧೦ ಎ, ಬಸ್ ಬಂದಿತು. ಸಾಕಷ್ಟು ಸ್ತಳಾವಕಾಶವಿತ್ತು, ಸಮಾದಾನದ ನಿಟ್ಟುಸಿರು ಬಿಟ್ಟು, ಕುಳಿತೆ.

೭ ಗಂಟೆಗೆ ಮೆಜಸ್ಟಿಕ್ ತಲುಪ ಬಹುದು. ಯಾರಾರು ಬರಬಹುದು ? ಅರ್ಜುನ್ ಹಾಗು ಪವನ್ ಬರುವುದಾಗಿ  ದೀಪಕ್  ತಿಳಿಸಿದ್ದ. ಈ ಸಂಜೆ ನನಗೆ ಕರೆ ಮಾಡಿದ ಗೆಳೆಯ ದೀಪಕ್, ಇಂದು ಸಂಜೆ, ನಮ್ಮ ಗೆಳೆಯರೆಲ್ಲಾ ಭೇಟಿ ಮಾಡಲು ನಿರ್ಧರಿಸಿರುವುದಾಗಿ ತಿಳಿಸಿ, ಮುಂಬೈನಲ್ಲಿ  ಪಿ ಎಚ್ಡಿ   ಮಾಡುತ್ತಿರುವ ಗೆಳೆಯ ಅರ್ಜುನ್ ಹಾಗು ಗೆಳೆಯ ಪವನ್  ಬರುವುದಾಗಿಯು,ಬೇರೆ ಗೆಳೆಯರಿಗೆ ಕರೆ ಮಾಡುವುದಾಗಿಯು, ನಾನು ಸಹ ಖಂಡಿತ ಬರಬೇಕೆಂದು ತಿಳಿಸಿದ. ೫ ವರ್ಷಗಳ ನಂತರ ಗೆಳೆಯರನ್ನು ನೋಡುವ ಅವಕಾಶ, ಖಂಡಿತ ನಾನು ಬರುತ್ತೇನೆಂದು ಆಶ್ವಾಸನೆ ನೀಡಿದೆ.

ನಾವೆಲ್ಲಾ ಅಲ್ಫಾ ಕಾಲೇಜಿನಲ್ಲಿ ಇಂಜಿನಿಯರಿಂಗ್ ವ್ಯಾಸಂಗ ಮಾಡಿದ ಗೆಳೆಯರು. ಈಗ ಎಲ್ಲರು ವಿವಿದ ಕಂಪನಿಗಳಲ್ಲಿ, ವಿವಿದ ದೇಶಗಳಲ್ಲಿ, ಕೆಲಸ ಮಾಡುತ್ತಿದ್ದಾರೆ. ಕೆಲವರಿಗೆ ವಿವಾಹವಾಗಿದೆ. ಕೆಲವರಿಗೆ ಇನ್ನೂ ವಿವಾಹವಾಗಿಲ್ಲ. ಹೀಗಿ ಹಲವಾರು ವಿಷಯಗಳನ್ನು ಯೋಚಿಸುತ್ತಾ ಪ್ರಯಾನಿಸುತ್ತಿದ್ದಗಾ, ಮತ್ತೆ ದೀಪಕ್ ನ ಕರೆ. ಎಲ್ಲಿ ಇದ್ದಿಯಾ? ಎಂದು ಕೇಳಿದ. ಮೆಜಸ್ಟಿಕ್ ಎಂದು ಉತ್ತರಿಸಿದೆ. ಓಕೆ ಇನ್ನೂ ೨೦-೩೦ ನಿಮಿಷದಲ್ಲಿ ಅಲ್ಲಿ ಇರ್ತಿಯಲ್ಲಾ ? ಎಂದ. ನಾನು ಓಕೆ ಎಂದೆ.

೭:೩೦ ಮಲ್ಲೇಶ್ವರಂ ೧೫ನೆ ಕ್ರಾಸ್. ಬಸ್ ನಿಲ್ದಾಣದಲ್ಲಿ ಇಳಿದು, ದೀಪಕ್ ಗೆ ಕರೆ ಮಾಡಿದೆ. ಎಲ್ಲಿ ಇದ್ದಿಯಾ? ಎಂದು ಕೇಳಿದ. ನಾನು ೧೫ನೆ ಕ್ರಾಸ್, ಬಸ್ ನಿಲ್ದಾಣದಲ್ಲಿ ಇರುವುದಾಗಿ ತಿಳಿಸಿದೆ. ಅವನು ಹಾಗೆ ಸ್ವಲ್ಪ ಮುಂದೆ ಬರುವಂತೆ ಹೇಳಿ, ಎಡ ಭಾಗಕ್ಕೆ ತಿರುಗುವಂತೆ ಹೇಳಿದ. ಇಲ್ಲಿ ನೋಡು, ಇಲ್ಲೋ ಎನ್ನುತ್ತಿದ್ದಾಗ, ನಾನು ಅತ್ತ, ಇತ್ತ ನೋಡಿ, ಮುಖ್ಯ ರಸ್ತೆಯ ಆ ಬದಿಯಲ್ಲಿ ನಿಂತಿದ್ದ ಗೆಳೆಯರ ಗುಂಪಿನಲ್ಲಿ ಕೆಲವರು  ಕೈಗಳನ್ನು ಮೇಲೆತ್ತಿ ಇಲ್ಲ್ಲಿ ಇಲ್ಲಿ ಎನ್ನುತಿದ್ದರು. ರಸ್ತೆಯನ್ನು ದಾಟಿ, ಅವರ ಹತ್ತಿರ ಹೋದಾಗ, ಯಾರ್ಯಾರು ಇದ್ದಾರೆ ಎಂಬುದು ಸ್ಪಷ್ಟವಾಯಿತು. ಬಾಲು, ಪವನ್, ಅರ್ಜುನ್, ದೀಪಕ್ ಎಲ್ಲರ ಕೈ ಕುಲುಕುತ್ತಾ, ಯೋಗ ಕ್ಷೇಮ ವಿಚಾರಿಸುತ್ತಾ, ಗೆಳೆಯರನ್ನು ಆಲಂಗಿಸಿಕೊಂಡೆ.

ನಮ್ಮದೇ ಶೈಲಿಯಲ್ಲಿ ಒಬ್ಬರನ್ನೊಬ್ಬರು ರೇಗಿಸುತ್ತಾ, ಇನ್ನು ಬರೆದೆಯಿದ್ದ ಗೆಳೆಯ ರವಿಗಾಗಿ ಕಾಯುತ್ತಾ ನಿಂತೆವು. ಸ್ವಲ್ಪ ಹೊತ್ತಿನ ನಂತರ ರವಿ ಬಂದ. ನಂತರ ಮೆಕ್ ಡೊನಲ್ದ್ಸ್ ಗೆ ಹೋಗಿ ಬರ್ಗರ್ ತೆಗೆದುಕೊಂಡು ಮಾತಾನಾಡುತ್ತಾ ಕುಳಿತೆವು. ಕಾಲೇಜು ದಿನಗಳನ್ನು ಮೆಲುಕು ಹಾಕುತ್ತಾ, ಗೆಳೆಯರು, ಗೆಳತಿಯರು, ಶಿಕ್ಷಕರು, ಆ ದಿನಗಳಲ್ಲಿ ನಡೆದ ಘಟನೆಗಳನ್ನು ನೆನೆಯುತ್ತಾ, ಕೆಲೆಸ, ಮದುವೆ, ಇತ್ಯಾದಿ ವಿಷಯಗಳನ್ನು ಮಾತನಾಡುತ್ತಾ, ಕೈ ಗಡಿಯಾರ ನೋಡಿಕೊಂಡರೆ, ೯ ಗಂಟೆ.

೧ ಗಂಟೆ ಹೇಗೆ ಕಳೆಯಿತು ಎಂಬುದೇ  ಗೊತ್ತಾಗಲಿಲ್ಲ. ಬಾಲು ಟೈಮ್ ಆಯ್ತು ಹೋಗೋಣಾ ಎಂದಾಗ, ದೀಪಕ್ ಏಕೆ ? ಯಜಮಾನ್ರು ಬೈತಾರ ? ಎಂದಾಗ ಎಲ್ಲರು ನಕ್ಕೆವು. ಅದಕ್ಕೆ ಬಾಲು, ಮಗನೆ ನೀನು ಮದುವೆ ಆಗು, ಗೊತ್ತಾಗುತ್ತೆ ಎಂದು ದೀಪಕ್ ಗೆ ಹೇಳುತ್ತಾ, ನಡೀರೋ ಹೋಗೋಣ ಎಂದು ಎದ್ದಾಗ, ದೀಪಕ್ ಮಗ ಒಂದು ಸ್ನ್ಯಾಪ್ ತೆಗೆದುಕೊಳ್ಳೋಣ ಎಂದಾಗ, ರವಿ ತನ್ನ ಮೊಬೈಲನ್ನು ದೀಪಕ್ ಗೆ ನೀಡಿದ. ದೀಪಕ್ ನಮನ್ನು ಒಂದು ಫೋಟೋ ತೆಗೆದ ನಂತರ, ಅಲ್ಲಿದ್ದ ಒಬ್ಬರಿಗೆ ಮೊಬೈಲ್ ನೀಡಿ ಒಂದು ಸ್ನಾಪ್ ತೆಗೆಯುವಂತೆ ಹೇಳಿ, ನಮ್ಮ ಜೊತೆ ಬಂದು ನಿಂತ. ಎಲ್ಲರು ಒಟ್ಟಿಗೆ  ಫೋಟೋ ತೆಗೆದು ಕೊಂಡ ನಂತರ ಹೊರಡಲು ಸಿದ್ದವಾದೆವು. ಈ ಅಪರೂಪದ ಮಿಲನವನ್ನು ನಾನು ನನ್ನ ಮನವೆಂಬ ಕ್ಯಾಮೆರಾದಲ್ಲಿ ಸೆರೆಹಿದಿದುಕೊಂಡೆ.

ಹೊರಡುವಾಗ ಮತ್ತೆ ಒಬರನ್ನೊಬ್ಬರು ಅಪ್ಪಿಕೊಂಡು, ಆಗಾಗ ಫೋನ್ ಮಾಡಬೇಕೆಂದು, ಆಗಾಗ ಭೇಟಿಯಾಗಬೇಕೆಂದು ಹೇಳಿ, ಫೋನ್ ಮಾಡಿದರೆ ಪಿಕ್ ಮಾಡದ ನನ್ನನ್ನು, ಇನ್ನು ಮುಂದಾದರು ಕಾಲ್ ಪಿಕ್ ಮಾಡು ಎಂದು ಬೈದು ಬೀಳ್ಕೊಟ್ಟರು. ಗೆಳೆಯ ಪವನ್ ತನ್ನ ಗಾಡಿಯಲ್ಲಿ ನನ್ನನ್ನು, ಯಶವಂತಪುರದಲ್ಲಿ ಡ್ರಾಪ್ ಮಾಡಿದ. ಅಲ್ಲಿಂದ ಪೀಣ್ಯ ೨ನೆ ಹಂತದಲ್ಲಿರುವ ನಮ್ಮ ಮನೆಗೆ ತಲುಪಿದಾಗ ೧೦ ಗಂಟೆ. ರಾತ್ರಿ ಮಲಗಿದಾಗ ಮನದ ತುಂಬಾ ೭:೩೦ - ೯:೩೦ ರವರೆಗೆ ಗೆಳೆಯರೊಂದಿಗೆ ಕಳೆದ ಆ ಸಮಯವೇ ತುಂಬಿತ್ತು.

ಏಕೆ ನಮ್ಮ ಜೀವನ ಇಷ್ಟೊಂದು ಅರ್ಥ ಹೀನವಾಗಿ ಸಾಗುತ್ತಿದೆ ? ಗೆಳೆಯರನ್ನು ಭೇಟಿ ಮಾಡಲು ಇಷ್ಟು ವರ್ಷ ಬೇಕಾ? ಏಕೆ ಹೀಗೆ ಬರಿ ಕೆಲಸ, ಸಂಪಾದನೆ ಎಂದು ಓದುತ್ತಿದ್ದೇವೆ ? ಬರಿ ಹಣ ಸಂಪಾದನೆ ಮಾತ್ರ ಜೀವನವೇ ? ಹೀಗೆ ಹಲಾವಾರು ಪ್ರಶ್ನೆಗಳು ನನ್ನನ್ನು ಕಾಡುತ್ತಲಿವೆ.

ಏನೇ ಇರಲಿ ಜೀವನವೆಂಬ ಬೆಂಗಾಡಿನಲ್ಲಿ, ಸ್ನೇಹವೆಂಬುದು ತಂಗಾಳಿ ಎಂಬುದು ಎಷ್ಟು ನಿಜ.
 

Post a Comment

4 Comments

  1. Replies
    1. Thanks maam. I am very happy that someone read my blog. it happens rarely here. I blog something and I only comment. very rarely I will get comment from someone else. thanks

      Delete
    2. Maga join this blog. so that we can discuss lot of things regarding literature and other things. your knowledge might help me.

      Delete

Comment is awaiting for approval