Ticker

6/recent/ticker-posts

ವಿನಂತಿ

ದುಡಿವ ಕಾರ್ಮಿಕನ                                                                   
ಕಸವಾಗಿ ಕಾಣುವವರು
ದುಡಿಮೆಗೆ  ಸರಿಯಾದ
ಸಂಭಾವನೆ ನೀಡದವರು

ಯಂತ್ರಗಳ ನಡುವೆ ಯಂತ್ರವಾಗಿ
ದುಡಿಯುವವರನ್ನು, ತಂತ್ರವಾಗಿ
ಬಳಸಿಕೊಂಡು, ತಮ್ಮ ಸಂಪತನ್ನು
ಹೆಚ್ಚಿಸಿಕೊಳ್ಳುವವರು

ಬಡತನದ ಬೇಗೆಯಲಿ,
ಜೀವನದ ಕಾಡಿನಲಿ,
ಸಂಸಾರದ ಸಾಗರದಲಿ
ಬಿದ್ದು, ಒದ್ದಾಡುತ್ತಿರುವವರನ್ನು

ಕೈ ನೀಡಿ ಕಾಪಾಡಿ
ಜೀವನಕ್ಕೆ ಹೊಸ ದಾರಿ
ತೋರುವವರೆಂದು, ಹೊರಗೆ
ತೋರಿಸಿಕೊಳ್ಳುವವರು

ಕಾರ್ಮಿಕರ ರಕ್ತಹೀರಿ
ತಮ್ಮ ಸ್ವತ್ತು, ಹೆಚ್ಚಿಸಿಕೊಳ್ಳುವವರು
ಕಾರ್ಮಿಕನ ಸಂಬಳವ
ಕಿತ್ತು ತಿನ್ನುವವರು

ಬಂದು ಹೋದವು ಹಲವು
ವಾದ ವಿವಾದಗಳು
ಆ ವಾದ, ಈ ವಾದ
ಕಾರ್ಮಿಕನಿಗೆ ಬರಲಿಲ್ಲ
ಜೀವನದ ಬಗೆಗೆ ಆಶಾವಾದ

ದುಡಿಯುವವರ  ರಕ್ತಹೀರಿ
ಉತ್ಪಾದನೆಯ ಹೊರಗೆ ಮಾರಿ
ಗಳಿಸುವರು ಸಾಕಷ್ಟು, ಆದರೆ
ದುಡಿಯುವವರಿಗೆ ನೀಡುವುದಿಲ್ಲಾ
ಬದುಕಲು ಬೇಕಾಗುವಷ್ಟು

ಎಷ್ಟೇ  ಸಂಪತ್ತು ಬಂದು ಸೇರಿದರು
ಇಷ್ಟೇ ನಾ ಕೊಡುವ ಸಂಭಾವನೆ
ಎಂದು ಹೇಳಿ, ಅಲ್ಲಗಳೆಯುವರು
ದುಡಿಯುವವನ ಬವನೆ 

ಏಕೆ ಇಷ್ಟು ಸಂಪತ್ತಿನ ಹುಚ್ಚು 
ಒಳ್ಳೆಯ ಕೆಲಸವನ್ನು ಮಾಡಿ ಹೆಚ್ಚು 
ಶಿಲೆಯನಿಡುವರು ನಿಮಗೆ 
ರಸ್ತೆ ಬದಿಯಲ್ಲಲ್ಲ,
ಮನವೆಂಬ ಉದ್ಯಾನವನದಲ್ಲಿ 

ಮೆರಯದಿರಿ, ಅದಿಕಾರದ ಸೊಕ್ಕಿನಿಂದ 
ತುಳಿಯದಿರಿ, ದುಡಿಯುವವರನ್ನು 
ಸಂಪತ್ತಿನ ಕಬ್ಬಿಣದ ಕಾಲಿನಿಂದ 

ಧರೆಯ ಮೇಲೆ ತಾನೆ  
ದೊಡ್ಡವನೆಂದು ಮೆರೆದು,
ಜನರನ್ನು ಜರಿದು, ಅವರ 
ಜೀವನವನ್ನು, ಮಾಡಿದರು ಬರಿದು 

ಸ್ಮರಿಸುತ್ತಿದೆ ಅವರನ್ನು  
ಧರೆಯ ಜನತೆ, ತಮ್ಮ 
ಬೈಗುಳದ, ತೆಗಳಿಕೆಯ ಮಾತಿನಲಿ 

ಜನರ ಏಳಿಗೆಗೆ ದುಡಿದವರನ್ನು 
ಸ್ಮರಿಸುತ್ತಿದೆ, ಧರೆಯ ಜನತೆ
ವಿಶ್ವಾಸ, ಪ್ರೀತಿಯಿಂದ 

ಮಣ್ಣಿನಲಿ ಮಣ್ಣಾದ, 
ಮಹನಿಯರ ನೆನೆಯುವರು ,
ಅಹಂಕಾರದಿಂದ ಮೆರೆವವರನ್ನು 
ಮಣ್ಣಾಗುವಂತೆ  ಶಪಿಸುವರು 

ಒಳಗಾಗದಿರಿ, ಅವರ ಶಾಪಕ್ಕೆ 
ಇದು , ದುಡಿಯುವ ಜನರ 
ಪರವಾಗಿ ವಿನಂತಿ  

                             - ಸೆಂದಿಲ್





Post a Comment

9 Comments

  1. awsome sendil..keep it up..plz b posting

    ReplyDelete
  2. Thanks Arjun. I wrote this poem under extreme anger after seeing the kind of problems employees are facing. it was really disappointing to see this things happening

    ReplyDelete
  3. Well written. True words!.

    ReplyDelete
    Replies
    1. Thanks Mr.Prahallad. Keep visiting this blog and please share your opinion.

      Delete
  4. Tangible words sendil, way to go nothing can stop you keep rocking.

    ReplyDelete
  5. Tangible words sendil, way to go nothing can stop you keep rocking.

    ReplyDelete

Comment is awaiting for approval